ತಿದ್ದಿ ತಿಡು
ಮುದ್ದು ಮಾಡು,
ಪ್ರೀತಿ ಹೊದ್ದು ನೋಡು
ಜೀವ ನಂಬಿಕೆಯ ಪಾಡು.
ಕರಾರು
ಕಂಡಿಷನ್
ವ್ಯಾಪಾರ,ವ್ಯವಹಾರಕ್ಕೆ,
ಬರಿ ಅರ್ಪಣೆ
ಆರಾಧನೆ
ನಂಬಿಕೆ
ಪ್ರೀತಿ
ಹಾಯಾದ ಬದುಕಿಗೆ.-
ಬಾಗಲಕೋಟ
💝ಕನ್ನಡಿಗ💝🐝
ತಿದ್ದಿ ತಿಡು
ಮುದ್ದು ಮಾಡು,
ಪ್ರೀತಿ ಹೊದ್ದು ನೋಡು
ಜೀವ ನಂಬಿಕೆಯ ಪಾಡು.
ಕರಾರು
ಕಂಡಿಷನ್
ವ್ಯಾಪಾರ,ವ್ಯವಹಾರಕ್ಕೆ,
ಬರಿ ಅರ್ಪಣೆ
ಆರಾಧನೆ
ನಂಬಿಕೆ
ಪ್ರೀತಿ
ಹಾಯಾದ ಬದುಕಿಗೆ.-
ಹೇಗಿದೆ ಅದೃಷ್ಟ
ನೀತಿ ಹಿಡಿದರೆ ಪ್ರೀತಿಯಿಲ್ಲ,
ಪ್ರೀತಿ ಪಡೆಯಲು ನೀತಿ ಬೇಕಾಗಿಲ್ಲ.-
ಎಚ್ಚರಿಕೆಯಿಂದ ಓಡಿಸ್ಬೇಕು
ವಾಹನ
ಅಪಘಾತ ತಪ್ಪುತ್ತೆ,
ಎಚ್ಚರಿಕೆಯಿಂದ ಆಗ್ಬೇಕು
ಮದ್ವೇ,
ಯಾರ್ದೋ ಪ್ರೀತಿ ಕಸ್ಕೊಂಡು
ಕೊಲೆ ಆಗೋದು ತಪ್ಪುತ್ತೆ.-
ಅಕ್ರಮವೋ,ಸಕ್ರಮವೋ
ಅಪ್ಪುಗೆಯಿದು
ಆಕ್ರಮಣ
ಅತಿಶಯದ ಸೆಳೆತ,
ಎದೆಯ ಸಿಂಹಾಸನ
ಏರಿ ಬರುವ ವಾಂಛೆಗೆ
ಇದೋ ಹೃದಯಪೂರ್ವಕ ಸ್ವಾಗತ.
-
ಕಣ್ಣ ಬಿಂದುವೇ ತೋರಣ
ಜೀವ ಬಂಧು ನೀ ಪ್ರೇರಣ
ಬಣ್ಣ ಭಾವನೆ ಈ ಹೂ ಮನ
ಪ್ರೀತಿಸುವೆ ನಿನ್ನನೇ ಅನುದಿನ.-