veeresh bg   (✍️ ವೀರೇಶ್ ಲಿಂಗದಹಳ್ಳಿ)
316 Followers · 291 Following

read more
Joined 6 May 2019


read more
Joined 6 May 2019
22 APR AT 7:00

ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾ ರಥೋತ್ಸವಕ್ಕೆ ತಮ್ಮೆಲ್ಲರಿಗೂ ಸ್ವಾಗತ..
ದಿನಾಂಕ:22/04/2024
ಸ್ಥಳ: ಲಿಂಗದಹಳ್ಳಿ.

ಅಹಹಾ ವೀರಾ | ಅಹಹಾ ರುದ್ರ | ಅಷ್ಟದಿಕ್ಕು ನವಖಂಡವೆಂಬ ಭೂಮಿ | ಆ ನವಖಂಡವೆಂಬ ಭೂ ಚಕ್ರದ ಮೇಲೆ | ಲಿಂಗದಹಳ್ಳಿ ಎಂಬ ಊರು ಪುಟ್ಟಿತಯ್ಯಾ | ಅಹಹಾ ದೇವಾ ಆ ಊರನ್ನು ಸಾಧಿಸಿದೆನೆಂದರೆ ಸಾಧ್ಯವಲ್ಲ ಭೇದಿಸಿ ದೆನೆಂದರೆ ಭೇದ್ಯವಲ್ಲ | ಅಗಮ್ಯ ಅಗೋಚರ ಶಕ್ತಿಯಾಗಿ ನಮ್ಮನ್ನೆಲ್ಲ ಕಾಯುತ್ತಿರುವ ಲಿಂಗದಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯೇ ಬಹುಪರಾಕ್..!

-


12 NOV 2023 AT 8:29

ಬರ್ಡ್ ಮ್ಯಾನ್ ಸಲೀಂ ಅಲಿ

"ಪಕ್ಷಿಗಳು ಮನುಷ್ಯರಿಲ್ಲದೆ ಬದುಕಬಲ್ಲವು, ಆದರೆ ಮನುಷ್ಯ ಪಕ್ಷಿಗಳಿಲ್ಲದೆ ಬದುಕಲಾರ" ಎನ್ನುವ ಕಟು ಸತ್ಯವನ್ನು ಜಗತ್ತಿಗೆ ಸಾರಿದ್ದು ಭಾರತದ ಪಕ್ಷಿ ಪ್ರೇಮಿ ಸಲೀಂ ಅಲಿ ಯವರು.

-


18 SEP 2023 AT 14:05

ಕೌಟುಂಬಿಕ ಮೌಲ್ಯಗಳು ದೂರವಾಗುತ್ತಿರುವ
ಈಗಿನ ಸಂದರ್ಭದಲ್ಲಿ ಈ ವರ್ಷದ ಗಣೇಶ ಚತುರ್ಥಿ ತುಂಬಾ ವಿಶೇಷತೆಯಿಂದ ಕೂಡಿದೆ.
ಏಕೆಂದರೆ ಈ ವರ್ಷ ಗೌರಿ ಮತ್ತು ಗಣೇಶ (ಅಮ್ಮ ಮತ್ತು ಮಗ) ಇಬ್ಬರೂ ಜೊತೆಯಾಗಿ ಬರುತ್ತಿದ್ದಾರೆ. ಯಾವುದೇ ಶುಭ ಕಾರ್ಯದ ಆರಂಭಕ್ಕೂ ಮೊದಲು ಗಣೇಶನನ್ನು ಪೂಜಿಸುವುದು ವಾಡಿಕೆ. ಸೃಷ್ಟಿಯಲ್ಲಿನ ಎಲ್ಲಾ ಆಕಾರಗಳಿಗೂ ಒಗ್ಗುವಂತಹ ದೇವರು ಯಾರಾದರೂ ಇದ್ದರೆ ಅವನು ನಮ್ಮ ಗಣೇಶ ಮಾತ್ರ.
ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ.

-


6 AUG 2023 AT 16:35

ಗೆಳೆತನ ದೀರ್ಘಕಾಲ ತನ್ನ ಸಹಜತೆಯನ್ನು ಕಾಪಾಡಿಕೊಂಡಿರಬೇಕು. ಗೆಳೆತನ ಪರಿಚಯದ ಹಂತವನ್ನೂ ಮೀರಿ ತನ್ನ ಕೊಡು ಕೊಳ್ಳುವಿಕೆಯಲ್ಲಿ ಆಪ್ತತೆ ಹೊಂದಿರಬೇಕು. ಗೆಳೆತನ ಪ್ರೀತಿಯಷ್ಟು ಗಾಢವಲ್ಲದಿದ್ದರೂ ನಮ್ಮ ಇಲ್ಲದಿರುವಿಕೆಯ ಸಮಯದಲ್ಲೂ ಸದಾ ನಮ್ಮನ್ನು ಕಾಡುತ್ತಲೇ ಇರಬೇಕು. ಗೆಳೆತನ ಅನೇಕ ಅಗ್ನಿ ಪರೀಕ್ಷೆಗಳನ್ನು ದಾಟಿಯೂ ಅದೇ ಸ್ಪಂದನೆ ಉಳಿಸಿಕೊಂಡಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅದು ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ ತನ್ನ ಘನತೆಯನ್ನು ಕಾಪಾಡುವಂತೆ ಇರಬೇಕು. ಹಾಗೆಯೇ ವರ್ಣಿಸಲಾಗದ, ಪದಗಳಿಗೆ ನಿಲುಕದ ಒಂದು ಅವರ್ಣನೀಯ ಸೆಳೆತ ಇರುವ ಭಾವನೆಗಳ ಸಂಗಮವೇ ನಿಜವಾದ ಗೆಳೆತನ.
ಗೆಳೆಯರ ದಿನದ ಶುಭಾಶಯಗಳೊಂದಿಗೆ

-


25 JUL 2023 AT 13:03


ಮನುಷ್ಯನಿಗೆ..,

'ಭಯ' ಇರಬಾರದು, 'ಭರವಸೆ' ಇರಬೇಕು.

'ನಡುಕ' ಇರಬಾರದು, 'ನಂಬಿಕೆ' ಇರಬೇಕು.

-


24 JUL 2023 AT 17:00

1. ಖುಷಿಗೆ ಕಾರಣವಾದವರಿಗೆ
ಧನ್ಯವಾದ ಹೇಳೋದು.

2. ಖುಷಿಯನ್ನು ಸ್ನೇಹಿತರೊಂದಿಗೆ
ಹಂಚಿಕೊಳ್ಳುವುದು.

3. ಸುಳ್ಳು ಯಾಕೆ ಹೇಳಲಿ?
ಪಾರ್ಟಿ ಮಾಡೋದು!

-


24 JUL 2023 AT 16:47

The colour which is covered on the flower is just stolen from the cheeks of my lover.

-


24 JUL 2023 AT 15:53

ಇಟಗಿ ಈರಣ್ಣನವರ ಶಾಯರಿ:

ಪ್ರೇಯಸಿ ಊರಿಗೆ ಹೋಗಿ ಪತ್ರ ಹಾಕ್ತಾಳೆ
ಅಂತ ನಾನು ಬಹಳ ಬಹಳ ತಿಳಿದಿದ್ದೆ.,
ಆದ್ರೆ ಆಕಿ ತನ್ನ ಲಗ್ನ ಪತ್ರ ಕಳಿಸಿದಳು.

ನಾನು ಹಿಡಿದ ಕೈನ ಯಾವ ಹಿಡಿತಾನೆ
ಅಂತ ಲಗ್ನ ಪತ್ರಿಕೆ ಹೊಡೆದು ನೋಡಿದೆ.,
ವರನ ಜಾಗದಲ್ಲಿ ನನ್ನ ಹೆಸರೇ ಹಾಕಿಸಿದ್ದಳು!

-


24 JUL 2023 AT 15:52

ಇಟಗಿ ಈರಣ್ಣನವರ ಶಾಯರಿ:

ಪ್ರೇಯಸಿ ಊರಿಗೆ ಹೋಗಿ ಪತ್ರ ಹಾಕ್ತಾಳೆ
ಅಂತ ನಾನು ಬಹಳ ಬಹಳ ತಿಳಿದಿದ್ದೆ.,
ಆದ್ರೆ ಆಕಿ ತನ್ನ ಲಗ್ನ ಪತ್ರ ಕಳಿಸಿದಳು.

ನಾನು ಹಿಡಿದ ಕೈನ ಯಾವ ಹಿಡಿತಾನೆ
ಅಂತ ಲಗ್ನ ಪತ್ರಿಕೆ ಹೊಡೆದು ನೋಡಿದೆ.,
ವರನ ಜಾಗದಲ್ಲಿ ನನ್ನ ಹೆಸರೇ ಹಾಕಿಸಿದ್ದಳು!

-


20 JUN 2023 AT 19:23

🏃‍♂️ವಿಶ್ವ ಯೋಗ ದಿನದ ಮಹತ್ವ🏃‍♂️

ಯೋಗ ದಿನವೆಂದರೆ ಬರೀ
ಯೋಗಾಸನಗಳನ್ನು
ಮಾಡುವುದಲ್ಲ. ಯೋಗದಲ್ಲಿ
ಎಂಟು ಮೆಟ್ಟಿಲುಗಳು ಅದನ್ನೇ
"ಅಷ್ಟಾಂಗ ಯೋ"ಗ ಎನ್ನುವುದು.
ಅವುಗಳೆಂದರೆ
ಯಮ, ನಿಯಮ,
ಆಸನ, ಪ್ರಾಣಾಯಾಮ,
ಪ್ರತ್ಯಾಹಾರ, ಧಾರಣ,
ಧ್ಯಾನ ಮತ್ತು ಸಮಾಧಿ.

-


Fetching veeresh bg Quotes