ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು,
ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ ‘ಜನ್ಮದಿನ’
-ಬೀಚಿ-
ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ.
-
ಕನಸುಗಳನು ಕಡಿಯಲೆಂದು ಹಿಡಿದ ಕೊಡಲಿಯೆ ಕನಸಿಂದು...
ಶಕ್ತಿ ಜಲಧಿಯೊಳು
ತರಂಗಭಂಗವಾಗಿದೆ!
ವಿದ್ಯುದಣುಗಳೆದ್ದು ಕುಣಿವ
ರಂಗವಾಗಿದೆ!-
ಅಮರರೂ ಕೂಡ ಸಾಯಲೇಬೇಕು;
ಕವಿತಾ ಕಲೆಯೊಂದೇ
ಬಾಳುವುದು;
ಸಾವನೆ ಹೂಳುವುದು..
- ಕುವೆಂಪು
-
ಪ್ರೇಮದ ದೋಣಿಯಲ್ಲಿ
ಹುಚ್ಚೆದ್ದು ಪ್ರೇಮಿಸಬೇಡ
ಅಮರ ಪ್ರೇಮದ ದೋಣಿಗೆ
ಮುಳುಗುವ ದುರಭ್ಯಾಸವಿದೆ.
- ಪಿ.ಲಂಕೇಶ್-
ಪಂಚಾಂಗ, ನಕ್ಷತ್ರಗಳನ್ನು ನೋಡಿ ಪ್ರೇಮಿಸಿ
ಮಕ್ಕಳ್ಳಿಲ್ಲದೆ ನಶಿಸಿದವರ ಕಂಡು
ಆಕಾಶದ ಚುಕ್ಕಿಗಳು ಕೂಡ ನಕ್ಕವು.
- ಪಿ. ಲಂಕೇಶ್-
ಗ್ರಹ, ನಕ್ಷತ್ರಗಳ ಚಲನವಲನಗಳು ಈಗ ಸ್ಪಷ್ಟವಾಗಿ ಗೊತ್ತಾಗಿವೆ. ಆದರೆ ಜನಸಾಮಾನ್ಯರಿಗೆ ಅವರ ದಣಿಗಳ ಚಲನವಲನಗಳು ಮಾತ್ರ ಇನ್ನೂ ರಹಸ್ಯವಾಗೇ ಉಳಿದಿವೆ.
-ಬ್ರೆಕ್ಟ್-
ಹೆಂಡತಿ : ರೀ ಎಣ್ಣೆ ಬಿಡಿ....
ಗಂಡ : ಮೋದಿಜೀ ,ಹೆಂಡತಿನೇ permission ಕೊಟ್ಟಾಯ್ತು ದಯವಿಟ್ಟು ಬಾರ್ ಬಾಗಿಲು ತಗೀರಿ ಎಣ್ಣೆ ಬಿಡ್ಕೊಬೇಕು ...
ಹೆಂಡತಿ : ದೀಪಕ್ಕೆ ಎಣ್ಣೆ ಬಿಡಿ...
ಗಂಡ: ದೀಪಕ್ಕಿಂತ ಮೊದಲು ದೇಹಕ್ಕೆ ಎಣ್ಣೆ ಬೇಕಾಗಿದೆ ..
ಕುಡುಕರ ಮನಸ್ಥಿತಿ
#Men will be Men-
ನೆಚ್ಚಿರಲಿ,ಕೆಚ್ಚಿರಲಿ
ಮುಂಬರಿವ ಹುಚ್ಚಿರಲಿ
ಮುಂದುವರಿವುದೆ ಬಾಳು, ಹಿಂದೆ ಸರಿವುದೆ ಸಾವು
- ಕುವೆಂಪು-