varsha kakkala   (Varsha Kakkala)
139 Followers · 22 Following

read more
Joined 10 November 2018


read more
Joined 10 November 2018
3 OCT 2019 AT 22:31

ഒരോ പിടി ചോറിന്റെ മഹത്വം അറിയണോ ?
എന്നാൽ നീ വിശന്നവരോടു ചോദിക്കുക.
വിജയത്തിന്റെ പിന്നിൽ ഉളള രഹസ്യം അറിയണോ? അവരുടെ തോൽവിയുടെ കഥ കേൾകൂക
ചിരിയുടെ പിന്നിൽ ഉളള രഹസ്യം അറിയണോ?
അവർക്ക് കരഞ്ഞു മടുത്ത ഒരു കഥ ഉണ്ടാകും കേൾക്കുക ജീവനം എന്നു പറഞ്ഞാൽ എന്ത് എന്ന് അറിയണോ
എന്നാൽ വിശപ്പ്, തോൽവി, ചിരി നോബരം എല്ലാം അനുഭവിച്ചു തന്നെ പഠിക്കണം
അതു തന്നെ ജീവനം!!!!!

-


10 NOV 2018 AT 19:12

ಕೈ ಹಿಡಿದು ಮೇಲೆ ಎತ್ತಿ ಬದುಕಿನ ದಾರಿ ತೋರಿಸಿದ ದೇವತೆ ಅಮ್ಮಾ.. ಸಾಲು ಸಾಲು ಗೀಚಿದರು ಮುಗಿಯದ ನಿನ್ನ ಮಹಿಮೆ ನಮಗಾಗಿ ಎಷ್ಟು ದುಡಿಮೆ ಅಮ್ಮಾ

-


12 JAN 2022 AT 7:46

ಜೀವನದಲ್ಲಿ ಇನ್ನೂ ಕಲಿಯುವುದು ಸಾಕಷ್ಟಿದೆ...
ಜೀವನದ ಪಾಠಗಳು ಹಲವು..
ಹಾಗೆಯೇ ಜೀವನದಲ್ಲಿ ನಮ್ಮ ಪಾತ್ರಗಳು ಹಲವು
ಮಗುವಾಗಿ ಹುಟ್ಟಿ ವೃದ್ಧಾಪ್ಯದವರೆಗಿನ ಆ ಅನುಭವಗಳು ಹಲವು.......

-


24 JUN 2021 AT 21:01

ನನ್ನ ದಿನವು ನಿನ್ನ ಸಂದೇಶದೊಂದಿಗೆ ಆರಂಭವಾಗುತ್ತದೆ
ನನ್ನ ದಿನವು ನಿನ್ನ ಜೊತೆಯ ಕನಸುಗಳೊಂದಿಗೆ ಮುಕ್ತಾಯವಾಗುತ್ತದೆ...

-


19 JUN 2021 AT 7:30

ನನಗೆ ನೀನೆ೦ದರೆ ಯಾಕೆ ಇಷ್ಟ ಗೊತ್ತೇ...?
ನನ್ನ ಎಲ್ಲ ಕುಚೆಷ್ಟೆ ನೀ ಸಹಿಸುವೆ
ನನ್ನ ಎಲ್ಲ ಕೋಪ - ತಾಪ ಮುನಿಸು ಎಲ್ಲವನ್ನೂ
ಆನಂದಿಸಿ ನನ್ನ ನಗಿಸುವೆ...
ಗೆಳೆಯನ ಪ್ರೀತಿ.. ಅಪ್ಪನ ಕಾಳಜಿ
ಅಮ್ಮನ ಮಮತೆ, ಸಹೋದರನ ಭದ್ರತೆ
ಎಲ್ಲವೂ ನಾ ನಿನ್ನಲ್ಲಿ ಕಂಡೆ....
ಒಂದೆರಡು ಮಾತುಗಳಲ್ಲಿ ವರ್ಣಿಸಲಾರೆ ನಾ
ಯಾಕೆಂದರೆ ನಿನ್ನ ವರ್ಣಿಸಲು ಪದಗಳು ಸಾಲದು

ಎಂದಿಗೂ ನಿನ್ನ ಹೃದಯದ ಒಳಗೆ ಭದ್ರವಾಗಿ
ಬಚ್ಚಿ ಕೊಳ್ಳುವ ಆಸೆ ಏನಗೆ....

-


18 JUN 2021 AT 19:40

ನಗು ಕಣ್ಣೀರು ಹನಿ ಆಗುವ ವೇಳೆ!!!!

ಯಾರ ಮುಂದೆ ಬೇಕಾದರೂ ನಗಬಹುದು
ಆದರೆ ಕೆಲವರ ಮುಂದೆ ಮಾತ್ರ ಕಣ್ಣೀರು ಹನಿ ತೋರ್ಪಡಿಸಲು ಸಾಧ್ಯ....

ಯಾರು ಗೊತ್ತಾ....
ಅವರಿಗೆ ನಿಮ್ಮ ಕಣ್ಣೀರಿನ ಹನಿಯ ಮೌಲ್ಯ ಗೊತ್ತಿರಬೇಕು!!!!

-


18 JUN 2021 AT 7:37

ಆತ್ಮ ಸಂಗಾತಿ... ❤️

ಕೆಲವರಿಗೆ ಗೆಳೆಯರು ಇರುತ್ತಾರೆ
ಕೆಲವರಿಗೆ ಆತ್ಮ ಸಂಗಾತಿ ಇರುತ್ತಾರೆ
ನಾ ಎರಡೂ ನಿನ್ನಲ್ಲಿಯೇ ಕಂಡೆ.....

-


31 MAY 2021 AT 15:46

ಪರಿಚಯವಾದ ಕೆಲವೇ ದಿನಗಳಲ್ಲಿ ಹತ್ತಿರವಾದವ ನೀನು
ನಿನ್ನ ಅರಿಯುವ ಮುನ್ನವೇ ಹೃದಯಕ್ಕೆ ಹತ್ತಿರವಾದೆ ನೀನು
ತಪ್ಪು - ಸರಿಗಳ ಮಧ್ಯೆ ಹೋರಾಟ ಮಾಡುತ್ತಿತ್ತು ನನ್ನ ಮನ
ಆ ಹೋರಾಟದ ಪ್ರತಿಕ್ರಿಯೆ ಆಗಿತ್ತು ಆ ನನ್ನ ಕೋಪ - ತಾಪ
ಆ ಕೋಪ - ತಾಪಗಳ ಹಿಂದೆ ಪ್ರೀತಿ ಅಡಗಿತ್ತು ಅಲ್ಲವೇ
ಈಗ ಒಂದೇ ಒಂದು ಕನಸು ನೀ ನನ್ನವನಾಗಿ ಬಿಡು
ನಾ ನಿನ್ನವಳಾಗಿ ಕೊನೆ ಉಸಿರಿರುವವರೆಗೆ ಇದ್ದು ಬಿಡುವೆ
ಮನಸಿನ ಹಂಬಲ, ಮನದಾಳದ ಮಾತು, ಸಂತೋಷದ ಅಕ್ಷತೆಯು... ನೀನು...... ನಿನ್ನ ಪ್ರೀತಿಯ ಅಲೆಯಲ್ಲಿ.... ❤️

-


31 MAY 2021 AT 15:44

ಮಳೆ - ಗಾಳಿ
ನಿನ್ನ ಒಂದೊಂದು ಮಾತು ನಾ ಬಯಸಿದಂತೆ ಸಿಗದು ಎಂದು ಗೊತ್ತು
ಆದರೂ ಹುಚ್ಚು ಮನವು ಬಯಸಿತು ನಿನ್ನ ಬಾಯಿಂದ ಕೇಳಲು ಆ ಒಂದು ಮಾತನು .
ನೀ ಹೇಳದಿದ್ದರೂ ನನಗೆ ಗೊತ್ತು ನೀನು ಸದಾ ನನ್ನೊಂದಿಗೆ ಇರುವೆ ಎಂದು
ಹೇಳಲು ಆಗದ ಭಾವನೆ ........ಮನದ ಚಡಪಡಿಕೆ ಏನೆಂದು ನಾ ಹೇಳಲಾಗದೆ ನಿನಗೆ ನೋಯಿಸುತಿರುವೆ ನಾ ....................
ನಾ ಸದಾ ನಿನ್ನ ಪ್ರೀತಿಯ ಕಡಲಲ್ಲಿ ತೇಲಾಡುವ ಆಸೆ
ನಿನ್ನ ಪ್ರೀತಿಯ ಅಪ್ಪುಗೆಯನು ಬಯಸಿ
ನಿನ್ನ ಪ್ರೀತಿಯ ವರ್ಷ

-


31 MAY 2021 AT 15:42

ಮಳೆಯೂ - ಗಾಳಿಯು
ನನ್ನ ಜೀವನದ ಸುಂದರ ಅಧ್ಯಾಯ ನೀನು
ಆ ಸುಂದರವಾದ ಅಧ್ಯಾಯ ಆರಂಭ ಯಾವಾಗ ಆಯಿತು ಎಂದು ನಾ ಅರಿಯೆ
ನಾ ಕಳೆದು ಹೋದೆ ಆ ಕ್ಷಣ ನಿನ್ನ ನೋಡಿ
ಆ ಅಂದವಾದ ಅಧ್ಯಾಯ ಎಂದು ಮುಗಿಯದಿರಲಿ
ನಿನ್ನ ಪ್ರೀತಿಯಲಿ ಜೀವನ ಪೂರ್ತಿ ಕಳೆಯುವ ಆಸೆ
ನನ್ನ ಜೀವನದ ತಂಗಾಳಿಯು ನೀನು
ನಾನು ಮಳೆಯಾದರೆ ನೀನು ಮಳೆಯೊಂದಿಗೆ ಬರುವ ತಂಗಾಳಿ

-


Fetching varsha kakkala Quotes