Upadhyaya Channdrashekhar   (ಉಪಾಧ್ಯಾಯ , ಧಾರೇಶ್ವ‌ರ‌.)
148 Followers · 33 Following

Joined 31 July 2017


Joined 31 July 2017
28 SEP 2017 AT 10:16

ಜೀವನ

ಬ‌ದುಕಿನಾ ಬಂಡಿಗೆ ಮ‌ಡ‌ದಿಯೇ ಚ‌ಕ್ರ‌
ಅವ‌ಳು ಎಗ‌ರಾಡಿದ‌ರೆ ಪ‌ಯ‌ಣ‌ ಬ‌ಹು ವ‌ಕ್ರ‌
ಹಿರಿಯ‌ರು ಗೆಳೆಯ‌ರು ಜೊತೆಗೂಡೆ ಪ‌ಯ‌ಣ‌
ಮ‌ಕ್ಕ‌ಳು ಮೊಮ್ಮ‌ಕ್ಕ‌ಳು ಬ‌ದುಕಿನ‌ ತೋರ‌ಣ‌

ಮ‌ಡ‌ದಿ ಎಂದ‌ರೆ ಏನು?
ಕಾರ್ಯೇಷು ದಾಸಿ ಕ‌ರ‌ಣೇಷು ಮಂತ್ರಿ
ಕಾಲ‌ ಬ‌ದ‌ಲಾಗಿದೆ,
ನಾನೇ ದಾಸ‌ ಅವ‌ಳೇ ಮಂತ್ರಿ

ಕಾರ್ಯ‌ವಾಸಿ ಕ‌ತ್ತೆ ಕಾಲು ಹಿಡಿ
ಇದೊಂದು ಜಾಣ್ಡುಡಿ
ಇದ‌ಕಿಲ್ಲ‌ ಮ‌ರು ನುಡಿ ಇಲ್ಲ‌ವಾದ‌ರೆ ಎಗ‌ರಾಡಿ..
ಇದ‌ನ‌ ಅರಿತ‌ರೆ ಜೀವ‌ನ‌ ಗಂದ‌ದ‌ ಗುಡಿ.



-


26 SEP 2017 AT 18:26

ನಂಬಿಕೆ

We treat , He cures.
ನೋಡಿದೆ ಫ‌ಲ‌ಕ‌ವೊಂದ‌ ಆಸ್ಪತ್ರೆಯ‌ಲ್ಲಿ
ಅಡ‌ಗಿದೆ ಜೀವ‌ನ‌ದ‌ ಸ‌ತ್ಯ‌ ಅದ‌ರ‌ಲ್ಲಿ
ಅರಿತ‌ರಿಬ್ಬ‌ರೂ ಇದ‌ನ‌
ಭುವಿಯಾಗುವುದು ಇಂದ್ರ‌ಭ‌ವ‌ನ‌
ಆಗ‌ಬಾರ‌ದು ವೈದ್ಯ‌ರ‌ ಮೇಲೆ ಹ‌ಲ್ಲೆ
ಅಡ‌ಗ‌ಬೇಕು ಅಹಂಕಾರಿಗ‌ಳ‌ ಸೊಲ್ಲು
ಆಗ‌ ಬೇಕು ಅಪ‌ರಾಧಿಗ‌ಳಿಗೆ ಗ‌ಲ್ಲು




@ ಉಪಾಧ್ಯಾಯ‌, ಧಾರೇಶ್ವ‌ರ‌.




-


26 SEP 2017 AT 17:01

ಚೈತನ್ಯ

ಮುದುಕ‌ನೊಬ್ಬ‌ ದಾರಿಯ‌ಲಿ ನೆಡೆಯುತಿದ್ದ‌
ಅಡಿಗ‌ಡಿಗೆ ಎಡ‌ಯೆಡ‌ವಿ ಬೀಳುತಿದ್ದ‌
ಕ‌ಳೆಕೊಂಡಿದ್ದ‌ ತ‌ನ್ನ‌ ದೇಹ‌ ಶ‌ಕ್ತಿಯ‌ನ್ನ‌
ಕ‌ಳ‌ಕೊಳ್ಳ‌ಬಾರ‌ದಿತ್ತು ಮಾನ‌ಸಿಕ‌ ಚೈತ‌ನ್ಯ‌ವ‌ನ್ನ

ಚೈತನ್ಯ‌ವೆಂಬುದು ದೇಹ‌ಕ್ಕೆ ಸಂಬಂಧ‌ವಲ್ಲ‌
ಅದೊಂದು ದೈವಿಕ‌ ಶ‌ಕ್ತಿ ಅನುಮಾನ‌ವಿಲ್ಲ‌
ವ‌ರ್ಷ‌108 ಆದ‌ರೂ ಅವ‌ರು ನೆಡೆದಾಡುವ‌ ದೇವ‌ರು
ಯೋಗ‌, ಧ್ಯಾನ‌ ಪ್ರಾಣಾಯಾಮ‌ದ‌ ತ‌ವ‌ರು

-


25 SEP 2017 AT 21:25


ಮ‌ರ‌ಳಿ ಗೂಡಿಗೆ

ನಾನು ಗಿಳಿ ಸಾಕಿದೆ ಅಳಿಲು ಸಾಕಿದೆ
ಎಲ್ಲ‌ ಹೊರ‌ಟು ಹೋದ‌ವು
ಮ‌ರ‌ ಬೆಳೆಸಿದೆ ಎಲ್ಲ‌ ಮ‌ರ‌ಳಿ ಬಂದ‌ವು

ನಾನು ಚ‌ಕ್ಲಿ ಕೊಟ್ಟೆ, ಶೆಂಗಾ ಕೊಟ್ಟೆ
ಎತ್ತು ಕೊಂಡು ಹೊರ‌ಟ‌ರು
ಕೊಟ್ಟೆ ತಂದಿಟ್ಟೆ ಗೆಳೆಯ‌ರೆಲ್ಲ‌ ಬಂದ‌ರು

-


25 SEP 2017 AT 19:58

ವಿರ‌ಹಿ

ಕ‌ಡ‌ಲೆದುರು ಕುಳಿತಿದ್ದೆ ಏಕಾಂತ‌ದ‌ಲ್ಲಿ
ನೆನ‌ಪು ಅಲೆ ಅಲೆ ಆಗಿ ತೇಲಿಬಂತು ಮ‌ನ‌ಸಿನ‌ಲ್ಲಿ
ಅವ‌ಳಾಗಿದ್ದ‌ಳು ನ‌ನ್ನ‌ ಜೀವ‌ದ‌ ಉಸಿರು
ಈಗ‌ ಅವ‌ಳು ಬ‌ರೀ ಒಂದು ಹೆಸ‌ರು.

ತೊಳೆದು ಕೊಂಡೆನು ಮ‌ನ‌ಕ್ಕೆ ಮೆತ್ತಿದ‌ ಕೆಸ‌ರು
ಮಾಡ‌ಬ‌ಹುದಿತ್ತು ಅವ‌ಳು ನ‌ನ್ನ‌ ಬಾಳ‌ ಹ‌ಸಿರು
ಈಗ‌ ಅವ‌ಳು ಪ‌ರ‌ಸ್ತ್ರೀ , ನಾನಾದೆ ಅವ‌ಳ‌ ದ್ವೇಷಿ
ಉರುಳಿತು ಕಾಲ‌ ಅರಿಯ‌ಲಾರೆ ಯಾರು ದೋಷಿ

-


24 SEP 2017 AT 18:33

ಮುನ್ನುಡಿ ಬೆನ್ನುಡಿ ಎಲ್ಲ‌ ಬೇಕು ಪುಸ್ತ‌ಕ‌ಕೆ
ಬ‌ದುಕಿನ‌ ಪುಸ್ತ‌ಕ‌ಕೆ ಮುನ್ನುಡಿಯು ಬೇಕೆ
ವಿಧಿಲಿಖಿತ‌ವೇ ಮುನ್ನುಡಿ
ಸ‌ತ್ತ‌ ನಂತ‌ರ‌ ಮಿಡಿವ‌ ಕಂಬ‌ನಿಯೇ ಹಿನ್ನುಡಿ

-


24 SEP 2017 AT 7:06

ರಾಮ‌ ನಾಮ‌


ತೆಗೆದೆನೊಂದು ಅಕ್ಷ‌ರ‌ ಅಷ್ಟಾಕ್ಷ‌ರಿಯಿಂದ‌
ಪ‌ಡೆದೆ ಇನ್ನೊಂದ‌ನು ಪಂಚಾಕ್ಷ‌ರಿ ಮಂತ್ರ‌ದಿಂದ‌
ಭ‌ಕ್ತಿಯಿಂದ‌ ಪೋಣಿಸೆ ದೊರೆಯಿತೊಂದು ಮಣಿ
ಅದೇ ರಾಮ‌ ನಾಮ‌ ಎಂಬ‌ ಬ‌ದುಕಿನ‌ ಕ‌ಣ್ಮ‌ಣಿ

ರಾಮ‌ ರಾಮ‌ ಎಂದ‌ವ‌ಗೆ ಇಲ್ಲ‌ವು ಬಂಧ‌ನ‌
ಮಾಡುವುದ‌ದು ಪಾಪ‌ಗ‌ಳ‌ ಛೇಧ‌ನ‌
ಬ‌ನ್ನಿರೆಲ್ಲ‌ ಸೇರಿ ಭ‌ಕ್ತಿ ಭಾವ‌ದಿಂದ‌
ಪಾರು ಮಾಡ‌ ಬ‌ಲ್ಲ‌ನ‌ವ‌ ಭ‌ವ‌ ಬಂಧ‌ನ‌ದಿಂದ‌.



@ ಉಪಾಧ್ಯಾಯ‌, ಧಾರೇಶ್ವ‌ರ‌.

-


23 SEP 2017 AT 18:23


ಅರಿವೇ ಗುರು ,

ಅರಿವೇ ಗುರು ,ಅರಿತ‌ವ‌ನೇ ದೇವ‌ರು
ಅರಿಯ‌ಲು ಇರ‌ಬಾರ‌ದು ಮ‌ರೆವು
ಮ‌ರೆವ‌ವ‌ರು ಆಗ‌ಲಾರ‌ರು ಅರಿತ‌ವ‌ರು
ಅರಿತ‌ವ‌ರು ಮ‌ರೆಯ‌ಲಾರ‌ರು ಬೆರೆತ‌ವ‌ರ‌.

ಓ ಓ ತ‌ಲೆಯ‌ಲ್ಲ‌ ಕೆಟ್ಟು ಮೊಸ‌ರಾಯಿತಾ
ಕ್ಷ‌ಮಿಸಿ ಕ‌ನ್ನ‌ಡಿಗ‌ರು ಎಂದ‌ರೇನು?
ಕುರಿತೋದದೆಯೆ ಕಾವ್ಯ‌ ಪ್ರ‌ಯೋಗ‌
ಪ‌ರಿಣ‌ತಿ ಮ‌ತಿಗ‌ಳ್.....

-


23 SEP 2017 AT 6:00


ಏನು ಮಾಡ‌ಲಿ ಹ‌ರಿಯೇ

ಏನು ಮಾಡ‌ಲಿ ಹ‌ರಿಯೇ ತಿಳಿಯ‌ದಾಗಿದೆ
ಜ‌ನ‌ರ‌ ಮಾತಿನ‌ ಮ‌ರ್ಮ‌ ಅರಿಯ‌ದಾಗಿದೆ

ಮ‌ನೆಯ‌ಲ್ಲೇ ಕುಳಿತಿದ್ದ‌ರೆ ಹೇಳುವ‌ರು ಆಲ‌ಸಿ
ತಿರುಗಾಟ‌ ಹೆಚ್ಚಾದ‌ರೆ ಅನ್ನುವ‌ರು ಉದಾಸಿ

ಮ‌ಕ್ಕ‌ಳಿಗೆ ಬೈದ‌ರೆ ಅಂಬ‌ರು ಸಿಡುಕ‌
ಬೈಯ‌ದಿದ್ದ‌ರೆ ಆಡಿಕೊಂಬ‌ರು ಬೇಜ‌ವಾಬುದಾರಿ

ಅಮ್ಮ‌ನ‌ ಮಾತ‌ ಪಾಲಿಸಿದ‌ರೆ ಅಮ್ಮ‌ನ‌ ಮ‌ಗು
ಹೆಂಡ‌ತಿ ಮಾತ‌ ಕೇಳಿದ‌ರೆ ಅಮ್ಮಾವ್ರ‌ ಗಂಡ‌

ಹೆಂಡ‌ತಿಯ‌ ಕೆಲ‌ಸ‌ಕ್ಕೆ ಕ‌ಳಿಸಿದ‌ರೆ ಕಂಜೂಸ್
ಕ‌ಳಿಸ‌ದಿದ್ದ‌ರೆ ಸ್ತ್ರೀ ದ್ವೇಷಿ

ದುಡಿಯುವ‌ನು ಅಹೋರ‌ತ್ರಿ ಸಂಸಾರ‌ಕ್ಕಾಗಿ
ಮಾಡುವ‌ನು ಸಾಲ‌ ಸೋಲ‌ ಮ‌ನೆ ಮ‌ಕ್ಕ‌ಳಿಗಾಗಿ

ನೋಡ‌ಮ್ಮ‌ ಗಂಡ‌ ಎಂತ‌ ಮ‌ಹಾತ್ಯಾಗಿ
ಬೇಕಿಲ್ಲ‌ ಅವ‌ಗೇನು ಸ್ವಂತ‌ಕಾಗಿ


@ ಉಪಾಧ್ಯಾಯ‌, ಧಾರೇಶ್ವ‌ರ‌.



-


22 SEP 2017 AT 16:54

ಜುಳು ಜುಳು ಹ‌ರಿಯುವ‌ ಹೊಳೆಯ‌ ನೀರು
ಪ‌ಳ‌ಪ‌ಳ‌ ಹೊಳೆಯುವ‌ ಮುಂಜಾನೆಯ‌ ಬಿಸಿಲು
ತ‌ಳುಕುತ್ತ‌ ಬ‌ಳುಕುತ್ತ‌ ಹೊರ‌ಟ‌ ಹ‌ದಿ ಹ‌ರ‌ಯ‌ದ‌ ನೀರೆ
ನೋಡುತ್ತ‌ ನೋಡುತ್ತ‌ ಸೂರ್ಯ‌ನೂ ಕಾದು ಕೆಂಡ‌ವಾದ‌

-


Fetching Upadhyaya Channdrashekhar Quotes