Peaceful and happiness
-
ಲೋಕವೇ ಅಸ್ತಿತ್ವದಲ್ಲಿರುತ್ತಿರಲಿಲ್ಲ..
ದ್ವೇಷದ ಪರಿಧಿಯ ಮುಖವಾಡ ಅರ್ಥವಾಗುತ್ತಿರಲಿಲ್ಲ..
ಭಾವನೆಗಳ ಶೂನ್ಯತೆ ಅರಿವಾಗುತ್ತಿರಲಿಲ್ಲ..
ಬದುಕಿನ ಕರಾಳ ಸತ್ಯಗಳು ಅನಾವರಣಗೊಳ್ಳುತ್ತಿರಲಿಲ್ಲ..
ಮರುಭೂಮಿಯಲ್ಲಿ ಬೀಸುವ ಬಿಸಿ ಗಾಳಿಯ ಅನುಭವವಾಗುತ್ತಿರಲಿಲ್ಲ..
ಸಮುದ್ರದ ತಲ್ಲಣತೆಯ ಭೋರ್ಗರೆಯುವ ತೆರೆಗಳ ತಂಪಾಗುತ್ತಿರಲಿಲ್ಲ..
ನಾಕ ನರಕಗಳ ಮುನಿಸು ಪಿಸುಮಾತುಗಳ ಜನನವಾಗುತ್ತಿರಲಿಲ್ಲ..
ಕವಿದ ಕಾರ್ಮೋಡದಂತೆ ಜಗ ಕತ್ತಲಾಗಿ ಬೆಚ್ಚಗೆ ಮಲಗುತ್ತಿರಲಿಲ್ಲ..-
ನಮ್ಮ ನಿತ್ಯದ ಬದುಕಿನಲ್ಲಿ
ಸಂಬಂಧಗಳನ್ನು, ಸಂಗತಿಗಳನ್ನು
ಬಹು ಎಚ್ಚರಿಕೆಯಿಂದ
ಗಮನಿಸಿ ನಿಭಾಯಿಸಬೇಕು.
ಇಲ್ಲದಿದ್ದಲ್ಲಿ ಅದು
ಅನರ್ಥಕ್ಕೆ ಎಡೆಮಾಡಿಕೊಡುತ್ತದೆ.-
ಮನೆಗಳಲ್ಲಿ ಬೆಚ್ಚಗೆ ಕುಳಿತು ಬದುಕನ್ನು ನಿರ್ಭಯವಾಗಿ ಸಾಗಿಸಲು ಕಾರಣೀಕರಾದ ತ್ಯಾಗಿ ಗಳಿಗೆ ಶಿರಸಾಷ್ಟಾಂಗ ನಮನಗಳು 🙏🇮🇳
-
ನಾವಿರುವ ಗುಡಾರಗಳು ಬೇರೆ ಬೇರೆಯಾದರೂ ನಮ್ಮಲ್ಲಿರುವ ಎಲ್ಲರೂ ಒಂದೇ ಎನ್ನುವ ಭಾವ, ಎಲ್ಲಾ ಮತ ಪಂಥಗಳನ್ನು ಗೌರವಿಸುವ ಮನೋಭಾವ, ಬದುಕು ಬದುಕಲು ಬಿಡು ಎನ್ನುವ ಮೌಲ್ಯಗಳ ಸಮ್ಮೀಳೀತವೇ ಸಹಿಷ್ಣತೆಯ ಭಾವ..
-
ಆಧುನಿಕತೆಯ ಸೋಗಿನಲ್ಲಿ ಬದುಕುತ್ತಿರುವ ನಮ್ಮ ಮನಸ್ಸು ಭಾವನೆ ಮತ್ತು ಪ್ರದರ್ಶಿ ಸುವಿಕೆಯ ಹುಚ್ಚಿನಲ್ಲಿ ಮೆರೆಯುತ್ತಿದೆ. ಅಂತಸ್ತಿಕೆಯು ಕೇವಲ ಅಹಂವಿಕೆಯನ್ನು ವಸ್ತ್ರವನ್ನಾಗಿಸಿ ಕೊಂಡಿದೆ. ಎಲ್ಲವೂ ದುಬಾರಿಯಾಗುತ್ತಿರುವ ಕಾಲದಲ್ಲಿ ಎಲ್ಲ ಮೌಲ್ಯಗಳು ಮಾರಾಟಕ್ಕಿವೆ.. ಪ್ರಾಮಾಣಿಕತೆ ಕೇವಲ ನಾಟಕೀಯವಾಗಿ ಮಾರ್ಪಟ್ಟಿದೆ. ಮಾಣಿಕತೆ ಹೆಸರಿನಲ್ಲಿ ಮೋಸ ಹಾಗೂ ಜೀವನ ನಿರ್ವಹಣೆ ಸಾಗುತ್ತಿದೆ.. ಪ್ರಾಮಾಣಿಕತೆಯ ಬಂಡವಾಳದಿಂದಲೇ ಎಷ್ಟೋ ಜನ ಅವಕಾಶಗಳನ್ನು ಬಳಸಿಕೊಂಡು ಬದುಕುತ್ತಿದ್ದಾರೆ..
-