ನಿಮ್ ಜೊತೆ ಮಾತಾಡ್ಲಿಕ್ಕೆ ಅವರಿಗೆ ಇಷ್ಟ ಇಲ್ವಾ
ಬಿಟ್ಟುಬಿಡಿ ತೊಂದ್ರೆ ಕೊಡ್ಲಿಕ್ಕೆ ಹೋಗಬೇಡಿ
ಪ್ರಪಂಚ ತುಂಬಾ ದೊಡ್ಡದು ...-
"ವಿಶ್ವ ಪರಿಸರ ದಿನ"
ಧರೆಗೆ ಆಕಾರ ನೀಡಿದೆ ಈ ಪ್ರಕೃತಿ...
ಜೀವಿಗಳಿಗೆ ಆಧಾರ ಸಸ್ಯ ಸಂಸ್ಕೃತಿ...
ಪ್ರಕೃತಿಯ ಒಡಲ ಬಗೆದು ಮೆರೆಯುತಿಹನು ವಿಕೃತಿ ...
ಮನುಜನಿರದೆ ಬದುಕ ಬಲ್ಲದು ಸಸ್ಯ ಸಂತತಿ...
ಮರೆತು ಬದುಕದಿರು ನೀ ಪ್ರಕೃತಿಯ ಅತಿಥಿ...
ಮರೆತ ದಿನವೇ ಆರಂಭವಾಗುವುದು ಮಾನವ ಕುಲದ ಅವನತಿ...
ನೆನಪಿರಲಿ ಪರಿಸರವೇ ನಮ್ಮ ಜೀವನದ ನಿಜ ಸಂಗಾತಿ...
ಅದನರಿಯದೆ ಪಡೆಯುತಿಹೆ ಎಲ್ಲ ಜೀವಿಗಳ ಜೀವಾಹುತಿ...
ಬಂದೇ ಬರುವುದು ಕಾಲಚಕ್ರ ಮರಳಿ ನಿನ್ನ ಸುತ್ತಿ...
ಆದ್ದರಿಂದ ಇನ್ನಾದರೂ ಅರಿತು ಬದುಕು ನೀ ನಿನ್ನ ಇತಿ ಮಿತಿ !!!......
- ಶ್ರೀ & ಟಿ. ಹರೀಶ್
-
"ಓ ಹೆಣ್ಣೇ"
ನೀ ಇರದ ಈ ಜೀವ ಎನಗೆ
ವರುಣ ನಿರದ ಧರೆಯಂತೆ...
ನೀ ನುಡಿವ ಮಾತುಗಳೆಲ್ಲ
ಮಗು ಮನಸಿನ ತೊದಲು ನುಡಿಯಂತೆ...
ನೀ ಟೀಕಿಸೋ ಭಾವನೆಯ ಗುಣವೆಲ್ಲ
ಪ್ರಸ್ತುತ ಪುಸ್ತಕ ಪುಟದ ನುಡಿಯಂತೆ...
ನಿನ್ನ ನಯನ ಶೃಂಗಾರ ನೋಟವು
ನನ್ನೆ ಬಯಸಿ, ಹರಸಿ, ಮನ್ನಿಸಿ,ಒಲೈಸುವಂತೆ...
ನಿಜವೇ ಈ ಪದ್ಯ ಪ್ರಶ್ನಿಸದೆ ತಿಳಿಸು ಕಹಿ ಸತ್ಯ...-
"ಸುಂದರಿ"
ಸೀರೆ ಹುಟ್ಟು ನಿಂತಿದ್ದಳೊಬ್ಬ ನಾರಿ...
ಸೆರಗು ಬಿದ್ದಿತ್ತು ಎಡ ಭುಜವ ಜಾರಿ...
ನೈದಿಲೆಯ ಕೇಶವು ನಾಚಿದೆ ಮುಗುಳುನಗೆಯ ನೋಡಿ...
ಚಂದ್ರನೂ ಕಣ್ಣ ಹೊಳಪಕಂಡು ಮಾರುಬಿದ್ದ ಚೋರಿ...
ಸಿಂಧೂರ ಬಿಂದುವು ವಿವರಿಸುತಿದೆ ಹಿಂದೂತ್ವವ ಸಾರಿ ಸಾರಿ ...
ಮೊಗದ ಸೆಳೆತಕೆ ನಾಚಿ ನಿಂತಿದೆ ಪ್ರೇಮದ ಕಿಡಿ ...
ಏನೋ ಗುಟ್ಟು ಅಡಗಿದೆ ಹರೆಯದ ಸೌಂದರ್ಯದಲ್ಲಿ ...
ತಿಳಿಸಿ ಕೊಡು ನಮಗೂ ತುಸು ನಾಚಿಕೆಯ ಸೌಂದರ್ಯದ ಪರಿವಿಡಿ...-
ಆತ್ಮೀಯರೇ....
ನಿಮ್ಮ ಸುರಕ್ಷತೆ ಇರಲಿ ನಿಮ್ಮ ಗಮನದಲ್ಲಿ
ಪೊಲೀಸರು ಇರುವರು ಅತ್ತಿರದಲ್ಲಿ
ಇಬ್ಬರ ಬೇಟಿ ಇರಲಿ ಮೊಬೈಲ್ ಕರೆಗಳಲಿ
ಮಾಸ್ಕ್ ಧರಿಸದೆ ಸೇರದಿರಿ ಜನ ಸಂದಣಿಯಲ್ಲಿ
ದುಡಿದ ಹಣ ಇರಲಿ ಆಹಾರ ಆರೋಗ್ಯ ದೃಷ್ಟಿಯಲ್ಲಿ
ಸದಾ ಆತ್ಮಸ್ಥೈರ್ಯ ಜೊತೆಗಿರಲಿ
ದೇವರ ಹೆಸರಿನಲ್ಲಿ ವೈದ್ಯರಿರುವರು ಇಲ್ಲಿ
ದಯವಿಟ್ಟು ಮನೆ ಆಚೆ ಮಾಡದಿರಿ ಜಾಲಿ
ಬದುಕಿದ್ದರೆ ಮಾಡಬಹುದು ಮುಂದಿನ ದೀಪಾವಳಿ
ಬದುಕನ್ನೇ ಮಾಡಿಕೊಳ್ಳಬೇಡಿ ದಿವಾಳಿ
"ಮನೆಯಲ್ಲೇ ಇರಿ ಮಾನವರಾಗಿರಿ"
ಮನುಷತ್ವದ ಗುಣದಲ್ಲಿ ಬಂಧು ಮಿತ್ರರ ಸುರಕ್ಷತೆ ವಹಿಸಿ...
- ಟಿ. ಹರೀಶ್-
ಪದ ಪುಂಜವೆ ಕುಳಿತಿದೆ ಅವಿತು
ಹೊಸತೇನೊ ಹುಡುಕಿದೆ ಬದುಕು
ಮನದ ಆಸೆಗೆ ಕಷ್ಟ ತುಣುಕು
ಕನಸಿನ ಬೆನ್ನಲ್ಲಿ ಬಿಡಿಸದ ಸೊಡಕು
ಈ ಜೀವನವೊಂದು ವಿಚಿತ್ರ ನೆನಪು ...-
ತಿರುವುಗಳೆ ಇಲ್ಲ ನನ್ನ ಪ್ರೀತಿಯ ದಾರಿಗೆ ...
ನಿನ್ನ ನೆನಪುಗಳೇ ಆಗಿವೆ ಯಶಸ್ಸಿಗೆ ದೀವಿಗೆ ...
ಅಪಸ್ವರಕ್ಕೆ ತೆತ್ತೆ ಭರಿಸದ ಕಣ್ಣೀರ ದೇಣಿಗೆ ...
ಆದರೂ ಸ್ಮರಿಸುವುದು ನಿನ್ನ ಹೆಸರೇ ನಾಲಿಗೆ ...
- ಟಿ. ಹರೀಶ್-
ಕಡಲ ತೀರದಲ್ಲಿ ಕೂತೊಂದು ಜೀವ ...
ಎಣಿಸುತಿದೆ ಅಲೆಗಳ ಸ್ವಭಾವ ...
ಮರಳಿ ಬಂದಂತಿದೆ ಏಕಾಂತದ ಜಾವ ...
ಮೊಗದ ನಗುವಿಗೆ ಮಾತಿನ ಅಭಾವ ...-
ದಿನ ಪೂರ್ತಿ ಆನ್ಲೈನ್ ನಾಗೆ ಇದ್ರು
ಅವಳಿಗೆ ಒಂದು msg ಮಾಡ್ಲಿಕೆ ಮನಸು
ಬಯಸುತಿಲ್ಲ ಅಂದ್ರೆ ಆ ಮನಸಿಗೆ ಎಷ್ಟು
ನೋವಾಗರಬೇಕು ....-
ವಿಶ್ವದಾದ್ಯಂತ ಕೊರೋನ
ಮನುಕುಲಕ್ಕೆ ಬಂದಂತಿದೆ ಮರಣ
ಎಚ್ಚೆತ್ತು ಕೊಳ್ಳಬೇಕಿದೆ ಜನ
ತಿಳಿದು ತಪ್ಪು ಮಾಡಿದರೆ ಸ್ಮಶಾನ ...-