ಒಬ್ಬನೇ ಇರಬೇಕು ಇಲ್ಲಿ , ಮೆಚ್ಚಿಸಿ ಮಿಂಚುವೆ ಯಾಕಲ್ಲಿ .
ಮಿಂಚು ಮರೆಯದಾಗ ಮೆಚ್ಚಿದವರಲ್ಲಿ , ಮಳೆಯ ಸುರಿಯುವುದು ನಿನ್ನ ಕಣ್ಣಲ್ಲಿ ...
ಒಬ್ಬನೇ ಇರಬೇಕು ಇಲ್ಲಿ ಮೆಚ್ಚಿಸುವೆ ಯಾಕಲ್ಲಿ ...?
ಒಬ್ಬನೇ ಇರಬೇಕು ಇಲ್ಲಿ .
ಯಾರ ವಿಷಯದ ಗುಡುಗು ಯಾಕಲ್ಲಿ ..
ಗುಡುಗು ಸಿಡಿಯುವುದು ಮನದಲ್ಲಿ .
ಮತ್ತೆ ಅದೇ ನೋವು ಮನದಲ್ಲಿ , ಮಳೆಯು ಸುರಿಯುವುದು ನಿನ್ನ ಕಣ್ಣಲ್ಲಿ ..
ಒಬ್ಬನೇ ಇರಬೇಕು ಇಲ್ಲಿ ಮೆಚ್ಚಿಸುವೆ ಯಾಕಲ್ಲಿ ...?-
ಬರೆದಿದ್ದೆಲ್ಲ ಬರಹವೇನಲ್ಲ ,
ಮನದ ಗೋಡೆಗಳಿಂದ ಆಚೆ ಬಂದ ಪದಗಳು ಇವೆಲ್ಲ ...
ನೆನೆದಿದ್ದೆಲ್ಲ ಬರಹಕ್ಕೇನಲ್ಲ ,
ಮನದ ಸಾಗರದ ಆಚೆಗಿನ ಯೋಚನೆಗಳು ಇವೆಲ್ಲ ...
ಬರಹವು ಒಂದು ಕಲೆಯೇನಲ್ಲ ,
ಮನಸಿನ ಕಲ್ಲಿನ ಹೊಡೆತಕ್ಕೆ ಸಿಲುಕಿ ಅದರಾಚೆಗೆ ಬಂದ ಮೂಕನ ಮಾತುಗಳು ಇವೆಲ್ಲ ...
ನಾನು ಮೂಕನೇನಲ್ಲ , ಮೌನ ಮಾತಾಡುತ್ತಿದೆಯಲ್ಲ ...
-
ನರಕದಿಂದೆದ್ದು ಬಂದ ನನಗೆ ಸುಖವು ಒಂದು ನರಕದ ಹಿತ್ತಲು ಮನೆ ಎಂದೆನಿಸುತ್ತದೆ ..
ನರಕದ ಮುಂಬಾಗಿಲಿಂದಲೇ ಹಿತ್ತಲಿಗೆ ಹೋಗಿ ಸುಖದ ನೀರಿಂದ ಕಾಲ್ತೊಳೆದು ಮತ್ತೆ ನರಕಕ್ಕೆ ಬರುತ್ತೇವೆ...
-
ಬರೆಯಲಾರದ ಮೌನದ ಕಥೆಯೊಂದು, ಕೊರೆಯುತ್ತಿದೆ ಮನದಲ್ಲಿ .
ಬರೆದು ಮೌನವ ಅಳಿಸಲೇ , ಬರೆಯದೇ ಮೌನವ ಉಳಿಸಿಕೊಳ್ಳಲೇ..
ಕಥೆಯ ನೆನೆಯುತ್ತಾ , ಕಥಾನಾಯಕ ( ಮೌನನನ್ನು ) ಹುಡುಕುತ್ತಾ ಕುಳಿತಿದ್ದೆ , ಅಡಗಿ ಕೂತಿದ್ದ ಮನದಲ್ಲಿ ವರಗೆಬಂದ ಕಥೆಯ ಅಂತ್ಯದಲ್ಲಿ ಅದುವೇ ಮೌನದ ನಗುವ ಚೆಲ್ಲಿ .
ಅರ್ಥವಿರುವುದು ಆ ಮೌನಕ್ಕೆ , ವ್ಯರ್ಥವಾಗುತ್ತಿದೆ ಈ ಸಮಯಕ್ಕೆ .
-
ಮನಸ್ಸು ಮಾಡದೆ ಕನಸು ಕಾಣೋ ಆಸೆಯಾಗಿದೆ ..
ಕನಸ ಹೆಕ್ಕಿ ಮನಸು ಮಾಡಲೇ..
ಮನಸ ಹೊಕ್ಕಿ ಕನಸಾಗಿ ಇರಲೇ ..
ಏನು ಹೇಳದೆ ಸುಮ್ಮನಿದ್ದುಬಿಡಲೇ ..
ಸುಮ್ಮನಿರುವ ಮೌನಕ್ಕೆ ನಗುವು ತಾನಾಗೇ ಬರಲೇ...?
ಕಂಡ ಕನಸಿಗೆ ಮನಸ್ಸು ಮಾಡೋ ಆಸೆಯಾಗಿದೆ ..
ಕನಸಿನ ಮಾತು ಕೇಳಲೇ..
ಕನಸು ಕನಸಾಗಿ ಇರಲೇ ..
ಏನು ಹೇಳದೆ ಸುಮ್ಮನಿದ್ದು ಬಿಡಲೇ...
ಸುಮ್ಮನಿರೋ ಕನಸಿಗೆ ಮನಸ್ಸು ತಾನಾಗೇ ಬರಲೇ...?-
ಮಾತೆಂಬುವ ಮಾತೇ ನೀನ್ ಹಾಡುವ ಗೀತೆ ,
ಕೆಲವರಿಗೆ ವ್ಯಥೆ , ಕೆಲವರಿಗೆ ಇನ್ನೊಬ್ಬರ ಕಥೆ ...
ಮಾತೆಂಬುವ ಮಾತೇ ನಿನಗ್ಯಕಿಲ್ಲ ಸ್ಥಿರತೆ .
ಒಂದು ಸಲ ಕೇಳಿಸಿಕೊ ಒಳಮನಸಿನ ಮೌನದ ಗೀತೆ ...
ನೀನ್ ಯಾವಾಗಲೂ ಇರಲು ಬಯಸುವೆ ಅದರ ಜೊತೆ .
-
ನಾನರಿಯದ ಊರಲ್ಲಿ ,
ನನ್ ಅರಿಯದ ಜನಗಳ ಮದ್ಯೆ ..
ನನ್ ಅರಿವಿನ ಗೂಡು ಕಟ್ಟಿದ್ದೆ ..
ನನ್ ಮನಸಿನ ಹೆಕ್ಕಿ ನಾನರಿಯದ ಊರಿನ ಗೂಡಿಗೆ ಹಾರದಂತಾಯಿತು..
ನನ್ ಅರಿಯದ ಜನಕ್ಕೆ ನನ್ ಅರಿವಿನ ಗೂಡು ನಾಟಕದ ರಂಗಶಾಲೆಯಾಯಿತು ...
ಬಣ್ಣ ಬಣ್ಣದ ಮುಖವಾಡ , ತರ ತರದ ನಾಟಕ ನೋಡಿ ಸಮಯ ಹಾಳಾಯಿತು ...
-
ಆ ಸೂರ್ಯನ ಕಿರಣಕ್ಕೆ ನಾಚಿದ ಕಂಬನಿ ನಿರಾಯಿತು .
ಆ ಸೂರ್ಯನ ಕೀರಣಕ್ಕೆ ನಕ್ಕ ಆ ಬೆಳ್ಳಗಿನ ಮಲ್ಲಿಗೆ ಹರಳಿತು.
ಆ ಬೆಳ್ಳಗಿನ ಮಲ್ಲಿಗೆಯ ನೋಡಿದೆ ನಾ , ಆ ಮಲ್ಲಿಗೆಯ ಬಳ್ಳಿಗೆ ಕರಗಿ ನೀರಾದೆ ....-
ನ್ಯಾಯ , ನೀತಿ , ಧರ್ಮ . ಈ ಮೂರು ಇನ್ನೊಬ್ಬರಿಂದ ಕೇಳಿ ಕಲಿಯುವುದು ಅಲ್ಲ , ಇದನೆಲ್ಲ ಅನುಭವಿಸಿ ತಿಳಿಯಬೇಕು .
ನ್ಯಾಯಕ್ಕೆ ದ್ವನಿ ಎತ್ತಬೇಕು ..
ನೀತಿಗೆ ತಲೆ ಬಾಗಬೇಕು ..
ಧರ್ಮಕ್ಕೆ ಶರಣಾಗಬೇಕು ..
ಇದನೆಲ್ಲ ಕೇಳಿ ತಿಳಿದುಕೊಂಡವನು ಇನ್ನೊಬ್ಬರಿಗೆ ಹೇಳಿ ನನಗೆ ಗೊತ್ತು ನಾನು ಎಲ್ಲರಿಗಿಂತ ಮೇಲೂ ಎಂದು ಹೇಳಿಕೊಂಡು ಪ್ರಶಂಸೆ ತಗೊಂಡು ತಿರುಗುವನು .
ಇದನೆಲ್ಲ ಅನುಭವಿಸಿದವನು ಇನ್ನೊಬ್ಬರ ತಪ್ಪನ್ನು ನಿಂತ ಜಾಗದಲ್ಲೇ ಬೆರಳು ಮಾಡಿ ತೋರಿಸಿ ತಿದ್ದುವನು ...
ವಿಪರ್ಯಾಸ ಎಂದರೆ ಬೆರಳು ಮಾಡಿದವನು ಕೆಟ್ಟವನು , ಸಿಟ್ಟಿನ ಮನುಷ್ಯ ಎನ್ನುವರು ನಮ್ಮ ಕೆಟ್ಟ ಹುಳಗಳು .
ಕೆಟ್ಟವರನ್ನು ಬೆಳಸುತ್ತ ಮುಂದಿನ ತಲೆಮಾರಿಗೆ ಕೆಟ್ಟ ಭಾವನೆ ಬರಿಸುತ್ತಾ ಹೋಗುವರು .
ಧರ್ಮೋ ರಕ್ಷಿತ ರಕ್ಷಿತಃ ...🙏
-
ಇವರಲ್ಲಿದೆ ಜ್ಞಾನ ಭಂಡಾರದ ಆಲಯ
ಅವರೇ ನಮ್ಮ ಮೇಡಂ ಸುಪ್ರಿಯಾ ...
ನೋಡಲು ಇರುವರು ಗೋದಿ ಬಣ್ಣ
ಇಂಪ್ರೆಸ್ ಮಾಡಲು ಬಂದಿರುವನು ವಿಕಾಸ್ ಅಣ್ಣ.
ಎಲ್ಲರಿಗು ಹಚ್ಚಿರುವರು ಕೋಡಿಂಗ್ ಅನ್ನೋ ಬಣ್ಣ .
ಬಣ್ಣ ಹಚ್ಚಿಕೊಂಡು ಪ್ರದರ್ಶಿಸಬೇಕು optum ಗೆ ಹೋಗೋ ಮುನ್ನ ...
ಯಾರು ಕೊಡುವರು ಇವರಂತೆ ಪ್ರೀತಿ ಎಂಬ ಅನ್ನ ವನ್ನ .
ಎಂದಿಗೂ ಮರೆಯಬಾರದು ನಾವು ಇವರ ಪ್ರೀತಿಯ ಕೈ ತುತ್ತನ್ನ...-