Thimmana Gouda  
54 Followers · 40 Following

Joined 17 July 2019


Joined 17 July 2019
13 JUN 2024 AT 16:26

ಪೋಲಿತನವಿರಲಿ
ನನ್ನೊಂದಿಗೆ ಗೆಳೆಯ
ಬೇರೊಬ್ಬಳೊಂದಿಗೆ?
ಪೋಲಿಸರಿಗೆ ನೀ
ಅತಿಥಿ ಗೆಳೆಯ.

-


13 MAY 2024 AT 7:23

ನನ್ನವ್ವನ ಬಗ್ಗೆ
ನಾ ಏನು ಬರೆಯಲಿ ಹೇಳು.
ಅವ್ವ ಗಂಡನ ಮೇಲೆ ಹಿಡಿತ ಸಾಧಿಸಿದ್ದರೆ
ನಮಗಿರುವ ಗೌರವನೆ ಬೇರೆ ಇರುತ್ತಿತ್ತು.
ನನ್ನವ್ವ ಮುಗ್ಧೆ, ಲೋಕವನು ಅರಿದವಳು.
ಮಕ್ಕಳಿಗೆ ಒಂದು ಮಾತನ್ನು ಅನ್ನದವಳು.
ಸೊಸೆಯರಿಗೆ ಸರಿದು ನಿಲ್ಲಂದವಳಲ್ಲ.
ಅಕ್ಕತಂಗಿಯರಿಗೆ ಎದರಂದವಳಲ್ಲ.
ಬಸವನ ತರಹ,
ತಲೆ ತಗ್ಗಿಸಿ ದುಡಿದವಳು ನನ್ನವ್ವ.
ಲೋಕ ಸುಖವನು, ಅಷ್ಟಕಷ್ಟೆ.
ಮಪ್ಪಿನ ಕಾಲದಲ್ಲಿ ಕೂಡ.
ಅವ್ವ ಸಾವಿರ ಶರಣು,
ನೂರುವರುಷ ಬಾಳು ಕಣ್ಮುಂದೆ,
ಸ್ಪೂರ್ತಿಯ ಸೆಲೆ ನೀ ನಮಗೆ.

-


9 NOV 2023 AT 0:44

ಬಯಸುತ್ತಿರುವೆ ನಿನ್ನೊಲವ
ಬಯಸಿ ಬಂದು ಬಿಡು ನನ್ನೊಲವೆ
ಒಲವಿನ ಮಂದಾರಕೆ
ಚಂದಿರನ ಹಂದರಾಕಿ
ಸಂಲಗ್ನವಾಗಲಿ ನಮ್ಮಿಬ್ಬರ ಪ್ರೀತಿ
ಮೂಹೂರ್ತಕ್ಕೆ ಮಸಿಯ ಬಳಿದು
ಶಾಸ್ತ್ರಕ್ಕೆ ಬೆಂಕಿಯಿಟ್ಟು
ಕಾಲಕ್ಕೆ ಗೋಲಿಯಿಟ್ಟು
ಕುಲಗೋತ್ರವನು ಕಾಲಲ್ಲಿ ಒಸಕಿ
ಸಂಲಗ್ನವಾಗಲಿ ನಮ್ಮಿಬ್ಬರ ಪ್ರೀತಿ
ಯಾವ ಶಾಸ್ತ್ರ ಏನು ಹೇಳಿದರೇನು
ನಮ್ಮಿಬ್ಬರ ಹೃದಯ ಪ್ರೀತಿಗಿಂತ
ಅವು ಹೆಚ್ಚೇನು ನಮಗೆ ಗೆಳತಿ.

-ಚಿತಿ
(ಚಿಕ್ಕ ಅದಾಪೂರ ತಿಮ್ಮನಗೌಡ)

-


28 OCT 2023 AT 12:10

ಕುಡಿಯೋಣ ಬಾರ ಹುಡುಗಿ
ಕುಡಿದು ಕುಣಿಯೋಣ ಬಾರ ಹುಡುಗಿ
ಕುಣಿಯುತ್ತ ಮಳೆಯಲ್ಲಿ,
ನೆನೆಯೋಣ ಬಾರ ಹುಡುಗಿ
ನೆನೆಯುತ್ತ ಮನದಲ್ಲಿ,
ಕನಸ ಹೆಣೆಯೋಣ ಬಾರ ಹುಡುಗಿ.
ಕನಸ ಹೆಣೆಯುತ್ತ,
ರಂಗಿನ ಮಂಚ ಏರೋಣ ಬಾರ ಹುಡುಗಿ
ರಂಗೀನ ಮಂಚವ ಏರುತ್ತ,
ರಂಗೀನ ಆಟವ ಆಡೋಣ ಬಾರ ಹುಡುಗಿ.
ರಂಗೀಭೀ ರಂಗಿ ಆಟವ ಆಡುತ್ತ,
ಮೈಯ ಮರೆಯೋಣ ಬಾರ ಹುಡುಗಿ
ಮೈಯ ಮರೆಯುತ್ತ, ಮನಸ್ಸಿನ ಆಳಕ್ಕೆ
ಇಳಿಯೋಣ ಬಾರ ಹುಡುಗಿ
ಮನಸ್ಸಿನ ಆಳಕ್ಕೆ ಇಳಿಯುತ್ತ,
ಕನಸಿಗೆ ಕಸವು ತುಂಬೋಣ ಬಾರ ಹುಡುಗಿ
ತುಂಬಿದ ಕಸವುಗಿ,
ಬಣ್ಣವ ಹಚ್ಚೋಣ ಬಾರ ಹುಡುಗಿ
ಹಚ್ಚಿದ ಬಣ್ಣಕ್ಕೆ,
ಹೊಳಪ ತುಂಬೋಣ ಬಾರ ಹುಡುಗಿ.
ಹೊಳಪಿನೊಳಗ, ನಮ್ಮಿಬ್ಬರ ಮನಸ್ಸು
ಬಲು ಬಿಳುಪು ನೋಡ ಹುಡುಗಿ
ಬಿಳುಪಿನೊಳಗ ಕಂಡ ಕನಸು,
ಹೊಚ್ಚ ಹೊಸದು ನೋಡ ಹುಡುಗಿ
ಸದಾ ಹೊಸತು ಹೊಸದಾಗಲಿ
ನಮ್ಮಿಬ್ಬರ ರಾತ್ರಿಗಳು ನೋಡ ಹುಡುಗಿ
-ಚಿತಿ
(ಚಿಕ್ಕ ಆದಾಪೂರ ತಿಮ್ಮನಗೌಡ)

-


26 OCT 2023 AT 19:47

ಅವನು ನೆನಪಾದರೆ
ಹನಿ ಹನಿ ಕಣ್ಣೀರು ಸುರಿತಾವ
ಜೊತೆಯಲ್ಲಿ ನಡೆದರೆ ಗೆಳೆಯ
ಮುತ್ತಿಟ್ಟು ಕರೆದರೆ ಇನಿಯ
ಅವ ಕೊಟ್ಟ ಪ್ರೀತಿ
ಮರೆಯಲಾಗದು ನೋಡು
ಅವ ಕೊಟ್ಟ ರೀತಿ
ಮತ್ತಾರು ಕೊಡಲಾಗದು ನೋಡ
ಹೊಳೆಯ ದಂಡ್ಯಾಗ
ಜುಳು ಜುಳು ನೀರಿನ್ಯಾಗ
ಮೈ ಚಳಿ ಬಿಡಿಸಿ
ಕಚಗುಳಿ ಕೊಡತಿದ್ದ ನೋಡ
ಕಣ್ಣಲ್ಲಿ ಕನಸ ಅರಿಯುವವನು
ಮನದಲ್ಲಿನ ಆಸೆ ಈಡೇರಿಸುವವನು
ಬೇಡಿದಾಗಲೆಲ್ಲ
ಇಲ್ಲ ಎನ್ನದೆ ಕೊಟ್ಡು ಬಿಡುವವನು
ಈಗ ಬರಿ ನೆನಪವನು
ಕಾರಣ
ಕನಸೆಂಬ ಕುದುರೆ ಬರಿ ಸುಳ್ಳು ಮಗಳೆ

-ಚಿತಿ
(ಚಿಕ್ಕ ಆದಾಪೂರ ತಿಮ್ಮನಗೌಡ)

-


26 OCT 2023 AT 19:16

ಜಾತಿಯ ಹಂಗೇಕೆ
ನೂಕಾಚೆ ಅಂದಾಕಿ
ಪ್ರೀತಿಯ ಮಾಡಾಕ
ಒಳ್ಳೆಯ ಮನಸೊಂದ
ಸಾಕು ಅಂದಾಕಿ
ಆಸ್ತಿ ಅಂತಸ್ತು
ಯಾಕೆ ಬೇಕು ಅಂದಾಕಿ
ಬದಕುಲು ಎರಡು ರೊಟ್ಟಿ
ಸಾಕಷ್ಟೆ ಅಂದಾಕಿ
ಅತ್ತೆ ಮಾವರ ಆಸ್ತಿ
ನನಗೆ ಬೇಡ
ಅಪ್ಪ ಅವ್ವರ ಆಸ್ತಿ
ನಿನಗೂ ಬೇಡ
ನಮ್ಮಿಬ್ವರ ರಟ್ಟೆಗಳೆ
ನಮ್ಮಾಸ್ತಿ ಎಂದಾಕಿ
ಅವಳೆ ನನ್ನ ಮುದ್ದು
ಮನಸ್ಸಿನ "ಸ್ಪೂರ್ತಿ"

-ಚಿತಿ
(ಚಿಕ್ಕ ಆದಾಪೂರ ತಿಮ್ಮನಗೌಡ)

-


7 OCT 2023 AT 21:57

ಪ್ರೀತಿಯೇ ಆಗಲಿ,
ದ್ವೇಷವೇ ಆಗಲಿ
ಕೊಟ್ಟದ್ದನ್ನೇ ಪಡೆಯುತ್ತೇವೆ
ನಾವು ಕೊಡು ಕೊಳ್ಳುವದು
ವಿಶ್ವಾಸದ ಮಾತು ಗೆಳೆಯ
ವಿಶ್ವಾಸ ಕೆಟ್ಟರೆ ಕೊಡು ಕೊಳ್ಳುವದು
ನಡೆಯುವದಿಲ್ಲ ಗೆಳೆಯ
ಕೆಲವು ಸಾರಿ ಕೊಟ್ಟಿದ್ದು
ಕೆಟ್ಟಿತು ಎನಬೇಡ ಗೆಳೆಯ
ಮುಂದೊಂದು ದಿನ ಉಪಯೋಗಕ್ಕೆ ಬರಬಹುದು ಗೆಳೆಯ
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಎನ್ನುವದ ತಿಳಿಯೋಣ ಗೆಳೆಯ
ಕೊಟ್ಟು ಕೊಳ್ಳುವದು ಇರಲಿ
ನಮ್ಮ ನಮ್ಮೊಳಗೆ ಗೆಳೆಯ
ಅತಿ ಆಸೆಗೆ ಬಿದ್ದು
ಅಪರಿಚತರಿಗೆ ಕೊಟ್ಟು
ಕೈಕೈಯಿ ಹಿಸುಕಿ ಕೊಳ್ಳವದು
ಬೇಡ ನನ್ನ ಗೆಳೆಯ.
ಏನೆ ಆಗಲಿ ಗೆಳೆಯ
ಒಳ್ಳೆಯದನ್ನೆ ಕೊಡೋಣ
ಒಳ್ಳೆಯದನ್ನೆ ಪಡಿಯೋಣ
ನನ್ನ ಪ್ರೀತಿಯ ಗೆಳೆಯ.

-


3 SEP 2023 AT 15:31

ಹೆಣ್ಣಾದರೇನು ಗಂಡಾದರೇನು,
ಬಂಡ ಜೀವಗಳೆರಡು ಕೂಡಿದರೆ,
ಜಗದ ಜಾತಿಯ ಹಂಗೇಕೆ ಶಿವಸುತ.
ಬೆರೆತ ಮನಸ್ಸುಗಳೆರೆಡು,
ಬಸವಾತ್ಮವಾಗ ಬೇಕಷ್ಟೆ.
ಜೀವದ ನಡುವೆ ಸುಳಿಯುವ ಆತ್ಮ,
ಹೆಣ್ಣ ಅಲ್ಲ ಗಂಡು ಅಲ್ಲ. ಅರಿತು ನಡೆದರೆ
ಬೆರೆತ ಮನಸ್ಸುಗಳೆರಡು ಬಸವಾತ್ಮ ಕಾಣ.

-


2 SEP 2023 AT 19:31

ಮಗನಿಗಾಗಿ ನಾನು ಬದುಕ ಬೇಕಿದೆ
ಮಗನಿಗಾಗಿ ನಾನು ಬದಲಾಗ ಬೇಕಿದೆ
ಮಗನಿಗಾಗಿ ನಾನು ಬರೆಯ ಬೇಕಿದೆ
ಮಗನಿಗಾಗಿ ನಾನು ಬೆರೆಯ ಬೇಕಿದೆ
ಮಗನಿಗಾಗಿ ನಾನು ಓದ ಬೇಕಿದೆ
ಮಗನಿಗಾಗಿ ನಾನು ಓರಗೆ ಹಚ್ಚ ಬೇಕಿದೆ
ನನ್ನ ಮನಸ್ಸನ್ನು ನಾನು.
ಅವನಿಂದ ಬಾಳು ಬೆಳಗಿಸ ಕೊಳ್ಳ ಬೇಕಿದೆ
ಅವನಿಂದ ಬಾಳು ಕಟ್ಟಿ ಕೊಳ್ಳ ಬೇಕಿದೆ
ಅವನಿಂದ ಬಾಳು ನಲಿಯ ಬೇಕಿದೆ
ಅವನಿಂದ ಬಾಳು ನೆಲೆಸ ಬೇಕಿದೆ
ನನ್ನಿಂದ ಅವನಲ್ಲ, ಅವನಿಂದ ನಾನು
ಎನ್ನುವ ಸತ್ಯ ಜಗಕ್ಕೆ ತಿಳಿಯ ಬೇಕಿದೆ.
ಕಾರಣ?
ಅವನು ಭವಿಷ್ಯದ ನಾಗರಿಕ

-


20 APR 2023 AT 22:09

ಬಸವ ಬಯಲಿನಲಿ
ನಾನೊಬ್ಬನೆ ನಿಂತೀಯನು
ಬಟ್ಟ ಬಯಲಿನಲಿ ಎಲ್ಲಾ ಬಿಟ್ಟು
ನೋಟ ಕೂಟಗಳನು ದೂರ ಸರಿಸಿ
ಶೂನ್ಯವೆ ಸತ್ಯವೆಂದು
ಶರಣತ್ವಕ್ಕೆ ಶರಣಾಗಿ
ಶರಣರ ನುಡಿಗಳೆ ಸರ್ವಸ್ವವೆಂದು
ಮನವ ಬೆತ್ತಲ ಮಾಡಿ
ನಾನೊಬ್ಬನೆ ನಿಂತೀಯನು ಬಯಲಿನಲಿ
ಕಾಣದ ದೇವನ ಗುಂಗಿನಿಂದ ಹೊರಬಂದು
ಬಸವ ತತ್ವವೆ ಸತ್ಯವೆಂದರಿತು
ಬಸವ ಬಯಲಿನಲಿ ನಾನೊಬ್ಬನೆ ನಿಂತೀಯನು
ಎಲ್ಲ ತತ್ವ ದರ್ಶನಗಳಿಗಿಂತ
ಸರಳ ಸುರಳಿತ ಬಸವ ತತ್ವವೆ
ಸರ್ವರ ಸುಖಕೆ ರಹದಾರಿ ಎಂದರಿತು.

-


Fetching Thimmana Gouda Quotes