* #ನೆಟ್ಟು #ಹೋಗಿರುವೆ*
ನಾ ನೆಟ್ಟು ಹೋಗಿರುವೆ
ಚಿಕ್ಕ ಸಸಿಯನೊಂದು
ಬೆಳಸಿಕೊಂಡರೆ ಮರವಾಗುವುದು
ಉಳಿಸಿಕೊಂಡೇ ನೆರಳೀಯುವುದು
ಅದಕೆ ಬೇಕು ನಿಮ್ಮೊಲವಿನ
ಪೋಷಣೆಯ ನೀರು ಗೊಬ್ಬರ
ಅದರ ಜೊತೆಗೊಂದಿಷ್ಟು
ನಿಮ್ಮ ಹೊಣೆತನದ ಆಧಾರ
ನಿಮ್ಮ ವಿಶ್ವಾಸಕೆ ಅದು
ಎಂದೆಂದೂ ಶ್ವಾಸವಾಗುವುದು
ನಿಮ್ಮ ಋಣ ತೀರಿಸಲು
ಹಣ್ಣುಹಂಪಲಿನ ಸವಿ ನೀಡುವುದು
ನಿಮ್ಮ ಆಸರೆಯಿಂದಲೇ
ಭದ್ರವಾಗುವುದದರ ಬೇರು
ನೀವು ಬಯಸಿದರೆ
ನಿಮಗಾಗುವುದದು ಸೂರು
ಕಾಯುವವರು ಕರಪಿಡಿಯುವವರು
ನೀವೇ ಆಗಿರುವ ತನಕ
ಅದಕಿಲ್ಲ ಯಾವ ಭಯ ಅಂಜಿಕೆ
ಹಸಿರು ಹೆಸರಾಗುವುದು ಕೊನೆತನಕ
0831ಎಎಂ09082018
*ಅಪ್ಪಾಜಿ ಎ ಮುಸ್ಟೂರು ಸುಧಾ*-
27 AUG 2021 AT 20:11