ನೆಮ್ಮದಿಯಿಂದ
ಸುಖಿಯಾಗಿದ್ದರು
ಇಬ್ಬರೂ "ಸಖಾ-ಸಖಿ"
ಆದರೆ
ಅನುಮಾನವೆಂಬ
ಅಣುಬಾಂಬು ಸ್ಪೋಟಿಸಿ
ಇಬ್ಬರ ಮನಸಾಗಿದೆ ಈಗ
"ಹಿರೋಷಿಮಾ-ನಾಗಾಸಾಕಿ"
-
ಮಾನಿನಿಗೆ ದಿನನಿತ್ಯ ನೋಡದೆ ಇದ್ದರೆ ಕನ್ನಡಿ?
ರಾತ್ರಿಯಿಡಿ ನಿದ್ದೆಯೇ ಬರುವುದಿಲ್ಲ ಬಿಡಿ!
ಊಟವೂ ಸೇರುವುದಿಲ್ಲ!;
ಏನೋ ಕಳಕೊಂಡ ಭಾವ ಕಾಡುತಿರುತದೆ!?-
ಶಂಕರ
ನಿನ್ನ ಕೊರಳ ಹಾರ
ವಿಷನಾಗರ
ನೋಡಲು
ಅತಿ ಭಯಂಕರ
ಆದರೂ
ನಿನ್ನ ನೋಡಲು
ಭಕ್ತಿಯ ಜನಸಾಗರ
ನಿನಗೆ ಹಾಲೆರೆಯಲು
ಏನೋ
ಸಂಭ್ರಮ-ಸಡಗರ
-
ಸ್ನೇಹದಲ್ಲಿ,
ಕುಚೇಲ ಕೊಟ್ಟ
ಹಿಡಿ-ಅವಲಕ್ಕಿಯೂ
ಕೃಷ್ಣನಿಗೆ "ಮೃಷ್ಟಾನ್ನ"...
ಪ್ರೀತಿಯಲ್ಲಿ,
ಪ್ರೇಯಸಿ ಕೊಟ್ಟ
ಬಿಸಿ-ಬಿರಿಯಾನಿಯೂ
ನನಗೆ "ತಂಗಳನ್ನ"...
-
ನಾಲ್ಕೈದು ಅಂತಸ್ತಿನ
ಕಟ್ಟಡವೇ ಕುಸಿದು ಬಿದ್ದು
ಆಗುತ್ತಿರುವಾಗ ನೆಲಸಮ...!!
ನಿನ್ನ ಕೋಟ್ಯಾಂತರ ರೂಪಾಯಿ
ಆಸ್ತಿ-ಅಂತಸ್ತು
ಪ್ರಕೃತಿಗೆ ತೃಣಕ್ಕೆ ಸಮ...??
ಆಗದೇ ಉಳಿಯುವುದೇ
ನಿರ್ನಾಮ..!?-
ನನ್ನ ಜೀವನವಾಗಿತ್ತು ಕಹಿ
ನೀ ಹೊತ್ತು ತಂದೆ ಪ್ರೀತಿಯ ಸಿಹಿ
ನಿನ್ನ ಮಾತಲ್ಲೂ ಸಿಹಿ
ನಿನ್ನ ಮುತ್ತಲ್ಲೂ ಸಿಹಿ
ನಿನ್ನ ಮನಸಲ್ಲೂ ಸಿಹಿ
ನೀ ಕೊಡುವ ಟೀಯಲ್ಲೂ ಸಿಹಿ
ನಿನ್ನ ಸಿಹಿಯ ಸವಿಯಲ್ಲಿ ಮಿಂದೆದ್ದ
ನಾನೀಗ ಮಧುಮೇಹಿ
ಮತ್ತೆ ಜೀವನವಾಗಿದೆ ಕಹಿ
"ಪ್ರೀತಿ ಅತಿಯಾದರೆ ವಿಷ"
-
ತಾಳ್ಮೆ,ಸಹನೆ,ಕರುಣೆ,ಮಮತೆಯ
ಪ್ರತೀಕ ಈ-"ನಾರಿಯರು"
ತನ್ನೊಳಗಿರುವ ಸಹನೆಯ
ಸೀಳಿ ಸಿಡಿದೆದ್ದರೆ-"ವಾರಿಯರು"
-
ನಾವು ಶಾಂತಿ-ಪ್ರಿಯರು
ಹೌದು..??
ಕೆಣಕಿದರೆ ಕ್ರಾಂತಿ-ಪ್ರಿಯರು
ಹೌದು..??
ಈಗಿರುವುದು
ಗಾಂಧೀಜಿಯ ಭಾರತ
ಅಲ್ಲಾ
ಮೋದಿಜಿಯ ಭಾರತ
-
"ಪ್ರೀತಿ" ಎಂಬ "ಆಫಿಮು" ಸೇವಿಸಿದವರಿಗೆ ಆರಂಭದಲ್ಲಿ ಅದರ ನಶೆ ಅಷ್ಟೇ ಗೊತ್ತಾಗುವುದು..!!
ನಶೆ ಇಳಿದ ಎಷ್ಟೋ ದಿನಗಳ ನಂತರ
ಕೊನೆಗೆ ಅದರ ಅಡ್ಡಪರಿಣಾಮಗಳು
ಗೊತ್ತಾಗುವುದು..??
-