ಪ್ರೇಮಗೀತೆ- ೨
ಅವನು ಕೊಳಲು
ಅವಳು ಅಧರ
ಬದುಕೇ ನಾದಮಯ...-
28 JUN 2020 AT 17:28
ಸಂತೆ
ನನ್ನವಳನ್ನು ಕರಕೊಂಡು
ಹೋಗುವುದಕ್ಕೂ
ಹೆದರುತ್ತೇನೆ ನಾನು,
ವಾರದ ಸಂತೆಗೆ.
ಎಲ್ಲವನ್ನೂ ಖರೀದಿಸಿದ
ಮೇಲೆ ಹೇಳುತ್ತಾಳೆ,
ಜೇಬಿನಿಂದ sumತೆಗೆ..!-
25 JUN 2020 AT 21:56
ಕಾಮ
ಹೇಳಿದ್ದು
ಕೇಳಿದ್ದೆ ನಾನು,
ಕಾಮಕ್ಕೆ ಕಣ್ಣಿಲ್ಲವಂತೆ.
ಉಳಿದದ್ದು
ಒಂದೇ ಸಂಶಯ,
ಕಾಮಿಸುವವರಿಗೂ
ಕಣ್ಣಿಲ್ಲವೇ...?-
25 JUN 2020 AT 21:53
ಕನ್ನಡ
ಸೂಟು ಬೂಟು
ಉಸಿರಾಡಲೂ ಆಗದಂತೆ
ಕುತ್ತಿಗೆಗೆ ಬಿಗಿದ ಹಗ್ಗ,
ಬೆನ್ನಿಗೋ ಹತ್ತು ಮಣ
ಭಾರದ ಬ್ಯಾಗು,
ಬೆನ್ನು ಬಗ್ಗಿಸಿ
ಕೋಲೂರಿಯೇ ನಡೆಯುತ್ತಾರೆ;
ಭವಿಷ್ಯದ ಕುಡಿಗಳಿಗೇಕೆ ಈ ಕಷ್ಟ?
ಕನ್ನಡ ಕಲಿಸಿದರೆ ಏನು ನಷ್ಟ...?-
25 JUN 2020 AT 21:41
ನೆನಪು
ನಾ ಹಾಡಿದೆ,
ನೂರೊಂದು ನೆನಪು
ಎದೆಯಾಳದಿಂದ...
ಅವಳು ಅನ್ನಬೇಕೇ,
ನೆನಪು ಯಾರದು...?
ನನ್ನದಾದರೆ ಕೊಂಡಾಡುವೆ
ಅಲ್ಲದಿರೆ ಚೆಂಡಾಡುವೆ..!-
25 JUN 2020 AT 21:43
ದಿನ
ಎಲ್ಲದಕ್ಕೂ ಇಂದು ದಿನ.
ಅಪ್ಪನ ದಿನ,
ಅಮ್ಮನ ದಿನ,
ಪ್ರೇಯಸಿಯ ದಿನ,
ಪ್ರಿಯಕರನ ದಿನ
ಬಸ್ ದಿನ,
ಕಿಸ್ ದಿನ,
ಪರವಾಗಿಲ್ಲ ಆಚರಿಸಿ;
ಮೊದಲು ಬಲ್ಲವರಲ್ಲಿ ವಿಚಾರಿಸಿ..!-