QUOTES ON #ಹನಿಹನಿಇಬ್ಬನಿ

#ಹನಿಹನಿಇಬ್ಬನಿ quotes

Trending | Latest
18 JUN 2020 AT 8:22

ವಿದ್ಯೆ

ವಿದ್ಯೆ
ವಿನಯಯವನ್ನು ಕೊಟ್ಟರೆ
ಕಲಿತದ್ದು ಸಾರ್ಥಕ.
ಇಲ್ಲದಿದ್ದರೆ,
ನಿರರ್ಥಕ..!

-


21 MAY 2020 AT 17:08

ಹನಿ

ಹನಿಯೆಂದರೆ
ಕೇವಲ
ಮಳೆಹನಿಯಲ್ಲ.
ಬೆಳಕಿಗೆ
ಬೆಳಗುವ
ಇಬ್ಬನಿ.

-


15 JUL 2020 AT 0:57

ಶುದ್ಧಿ

ಬಹಿರಂಗ ಶುದ್ಧಿಗೆ
ಬೇಕು ಸಾಬೂನು.
ಅಂತರಂಗ ಶುದ್ಧಿಗೆ
ತ್ಯಜಿಸಬೇಕು
ನಮ್ಮಲ್ಲಿರುವ 'ನಾನು'..!

-


9 JUN 2020 AT 23:32

ನಗುಮೊಗ

ಕೈಯಲ್ಲಿ
ಇಲ್ಲದಿದ್ದರೂ ಪರವಾಗಿಲ್ಲ,
ನಗ.
ಬೇಕು ನಗುಮೊಗ.

-


23 AUG 2020 AT 11:26

ಪ್ರಾರ್ಥನೆ

ಓ ಮೊದಲ ಪೂಜಿತ ಬೆನಕ
ಮಡದಿಯೊಂದಿಗೆ
ಮನೆಯಲ್ಲೇ ಇದ್ದೇನೆ,
ಕಾಯೋ ಕೊರೋನ
ಮುಗಿವ ತನಕ..!

-


22 AUG 2020 AT 9:53

ಗರಿಕೆ

ಬೆಳಗ್ಗೇನೆ ಗಣಪತಿಗೆ
ಅರ್ಪಿಸಿ ಬಂದಿದ್ದೇನೆ
ಗರಿಕೆ.
ಇನ್ನೂ ಎದ್ದಿಲ್ಲ ನನ್ನವಳು,
ಹೊಡೆಯುತ್ತಿದ್ದಾಳೆ
ಗೊರಕೆ..!

-


4 JUL 2020 AT 7:46

ಚೆಲುವು

ಇದ್ದರೆ ಸಾಲದು
ಬಹಿರಂಗದ
ಚೆಲುವು,
ಅಂತರಂಗದಲ್ಲಿ ಬೇಕು
ಒಲವು.

-


11 JAN 2021 AT 22:26

ಏಕಾದಶಿ

ಬೆಳಗ್ಗೇನೆ ನನ್ನವಳ ಮುಖದಲ್ಲಿ
ಎದ್ದು ಕಾಣುತ್ತಿದೆ
ಎಲ್ಲಿಲ್ಲದ ಖುಷಿ..!
ಅಡುಗೆ ಮನೆಯ
ಬಾಗಿಲೇ ತೆರಯಬೇಕಿಲ್ಲ
ಇಂದು ಏಕಾದಶಿ..!

-


20 JUL 2020 AT 23:36

ದಾರಿ

ಕೊರೊನ
ಕೆಲವರಿಗೆ
ಮಹಾಮಾರಿ,
ಇನ್ನು ಕೆಲವರಿಗೆ
ಆದಾಯಕ್ಕೆ ದಾರಿ..!

-


10 JUL 2020 AT 19:12

ಹೊಟ್ಟೆ

ಮನೆಯಲ್ಲೇ ಕುಳಿತು
ನಾನಂತೂ ಕೆಟ್ಟೆ.
ತಗ್ಗುವುದೇ ಇಲ್ಲ
ಉಬ್ಬಿದ ಹೊಟ್ಟೆ..!

-