👫💕ಗೆಳೆತನ 💕👬
ಒಂದೇ ಭೂ ಬನದಲಿ ಜನಿಸಿಹ ಜೀವಗಳು ನಾವು
ಜಾತಿ ಮತ,ರೀತಿ ನೀತಿ, ಮೇಲು ಕೀಳು,ಕುಲ ಗೋತ್ರ, ಬಣ್ಣ ಗುಣಗಳ ನೋಡದೆ ಪ್ರೀತಿ ಭಾವನೆಗಳ ಹಲವು ಮನಗಳಲಿ ಬಿತ್ತುವೆವು
ಸ್ನೇಹದ ಬೀಜ ಚಿಗುರೊಡೆಯೆ ಮನದಿ ಹರುಷದ ಛಾಯೆ, ಕೆಲವೆಡೆ ತಲೆ ಎತ್ತಿದ ಸ್ನೇಹದಾ ಸಸಿಯು,ಹುಸಿ ಬಾವ ಸ್ನೆಹಪ್ರೀತಿಯ ಶೀತಕೆ ಕಮರಿ ಸಾವನಪ್ಪುವುದು ನಶಿಸಿ ಮಣ್ಣಲಿ ಮಣ್ಣಾಗಿಹೋಗುವುದು
ನಿಜ ಸ್ನೇಹವು ಗರಿಗೆದರಿ ನಮ್ಮೆಲ್ಲ ಹಾವಭಾವ,ನೋವು ನಲಿವಿಗೆ ಭರವಸೆಯ ಬೆನ್ನುಲುಬಾಗಿ,ಪ್ರೀತಿಯ ಹೊಂಬೆಳಕಾಗಿ ಹೆಮ್ಮರವಾಗಿ ನೆರಳಾಗುವುದು..
ದಣಿದ ಮನಕೆ ಸ್ನೇಹದ ಸಿಹಿ ಫಲವನುಣಿಸುವುದು.. 💑👩❤️👨👩❤️👩👨❤️👨
-
4 OCT 2021 AT 12:00