QUOTES ON #ಸುಮನಷಟ್ಪದಿ

#ಸುಮನಷಟ್ಪದಿ quotes

Trending | Latest
12 DEC 2024 AT 2:31

#ಗೀತಾಜಯಂತಿ೨೦೨೪ #ಸುಮನಷಟ್ಪದಿ

ಜೀವನದ ಛಾಯೆಯಿದು
ದಿವ್ಯವಾಣಿಯಾಗಿದು
ಭಗವಂತನ ಮುಖದಿಂ ಪಂಚಮವೇದ
ವೇದಗಳ ಸಾರವನು
ಅಜ್ಞಾನವನಳಿಸುವ
ಜ್ಞಾನಾಮೃತದ ಧಾರೆ ಭಗವದ್ಗೀತೆ

🎊🙏🏻ಗೀತಾಜಯಂತಿಯ ಶುಭಾಶಯಗಳು ೨೦೨೪ 🙏🏻🎊

-


10 JUL AT 21:19

#ಸುಮನಷಟ್ಪದಿ #ವ್ಯಾಸಪೂರ್ಣಿಮಾ೨೦೨೫
ಶಿಶುವಂತೆ ಕೈಪಿಡಿದೆ
ಅಜ್ಞಾನವಳಿಸೆಂದೆ
ನಿಂದೆನ್ನ ಸಲಹಿದರು ಗುರುಮಧ್ವರೇ
ಕರೆದವರ ಬಳಿ ಬರುವ
ಬಾಂಧವರು ಗುರುವೆಂದು
ಬಂದೆನ್ನ ಕರಪಿಡಿದು ನಡೆಸುವರೇ।

ಶರಣಾಗಿ ಪದಹಿಡಿದೆ
ರಾಯರೇ ನನಗೆಂದೆ
ದುರಿತಗಳ ತೊರೆಯುವರು ಪ್ರಹ್ಲಾದರೇ
ನೀನಿರುವೆ ಭಯವೇಕೆ
ಕಷ್ಟಗಳು ಓಡಿದವೆ
ಪೊರೆಯುವವ ಜಗದ್ಗುರು ಶ್ರೀಕೃಷ್ಣನೇ।

ವ್ಯಾಸ ಪೂರ್ಣಿಮೆಯ ಶುಭಾಶಯಗಳು 🙏🏻

-