ದುಃಖದ ಜೊತೆ ಯಾರು ಬರುವರು,
ಸುಖವಿರಲೂ ಎಲ್ಲಾ ಇರುವರು,
ಒಡಹುಟ್ಟಿದವರು ಅದು ನಿನ್ನದು,
ಇದು ನನ್ನದು ಎನ್ನುವರು,
ಮಕ್ಕಳು ಆಸ್ತಿಯಲಿ ಪಾಲು ಕೇಳುವರು,
ಸಂತೋಷದಲಿ ಸ್ನೇಹಿತರು ಸಾವಿರಾರು
ಸಂಬಂಧಗಳ ತರುವರು,
ಕಷ್ಟದಲಿ ನೋಡು ನೋಡುತಾ
ಎಲ್ಲಾ ಕಣ್ಮರೆಯಾಗುವವರು,
ಇಲ್ಲಿ ಯಾರು ನಿನ್ನೋರು?
ಇಲ್ಲಿ ಯಾರು ತನ್ನೋರು?
ನಿಮ್ಮ ನೋವಿಗೆ ನೀವೇ ಹೊಣೆಗಾರರು,
ಯಾರನೂ ಮಾಡದಿರಿ ನೀವು ಹೊಣೆಗಾರರು...-
ನಿನ್ನ ಕಿರು ಬೆರಳು ಹಿಡಿದು
ನಾ ನಡೆಯಲಿಲ್ಲ,
ನಿನ್ನ ಮಡಿಲಲಿ ನೆಮ್ಮದಿಯಾಗಿ
ನಾ ನಿದ್ರಿಸಲಿಲ್ಲ,
ನಿನ್ನ ಅಕ್ಕರೆಯ ಸಿಹಿ ಕೈ ತುತ್ತು
ನಾ ತಿನ್ನಲಿಲ್ಲ,
ನಿನ್ನ ಅಂದ ಚೆಂದದ ಮೊಗವ
ನಾ ಕಾಣಲಿಲ್ಲ,
ಯಾರನು ಕೇಳಿದರೂ, ಊರಿಗೆ
ಹೋಗಿಹಳು ಎಂದರಲ್ಲ
ಇಂದು ಬರುವಳು ನಾಳೆ ಬರುವಳು
ಎಂದು ಕಾದೆನಲ್ಲ,
ಕಾರಣವ ಹೇಳದೆ ನನ್ನ ಒಂಟಿಯಾಗಿ
ಬಿಟ್ಟುಹೋದೆಯಲ್ಲ.
ಮಲತಾಯಿಯ ಧೋರಣೆಯನ್ನು
ಅನುಭವಿಸಿದೆನಲ್ಲಾ.
ನನ್ನಂತಹ ದುರದೃಷ್ಟವಂತ
ಇನ್ನೊಬ್ಬನಿಲ್ಲ
ಅಮ್ಮಾ, ಅಮ್ಮಾ, ಅಮ್ಮಾ...-
ಗಜಪತಿ ಗಜಾನನ
ಎಂಥ ಚಂದ ಎಂಥ ಅಂದ
ನಿನ್ನ ಸುಂದರ ವದನ
ನಿನ್ನ ನೆನೆದು ನಡೆದರೆ
ಎಂಥ ದುಗುಡಗಳು
ಕ್ಷಣಾರ್ಧದಲ್ಲಾಗುವವು ದಮನ
ವಿದ್ಯೆಗೆ ಭೂಷಣ ನೀನು,
ಪೂಜೆಗೆ ಅಗ್ರಗಣ್ಯ ನೀನು
ಗಣನಾಥ ಗಜವದನ
ನಿನ್ನ ಅಭಯವಿಲ್ಲದೆ,
ಇರದಯ್ಯ ದೇವ
ಸಕಲ ಚರಾಚರದ ಜೀವನ
ಸಕಲರನು ಸಲಹು ತಂದೆ,
ಕಷ್ಟ ಕಾರ್ಪಣ್ಯಗಳ ಕೊಂದು
ಬದುಕಾಗಿಸಯ್ಯ ಪಾವನ-
ಆಭರಣಪ್ರಿಯನಲ್ಲ,
ಅಲಂಕಾರ ಪ್ರಿಯನೂ ಅಲ್ಲ.
ವಿಭೂತಿ ಭಸ್ಮವನ್ನು ಇಟ್ಟು
ಹುಲಿಯ ಚರ್ಮವನ್ನು ಉಟ್ಟು,
ದಿವ್ಯ ಆಯುಧ ತ್ರಿಶೂಲವ ಹಿಡಿದು
ಸತ್ಯ, ಧರ್ಮಗಳ ರೂಪದಲಿ ನಡೆದು
ತ್ರಿಲೋಕ ಸಂಚಾರಿ ತ್ರಿಮೂರ್ತಿಯೂ
ಸರಳ, ಸೌಮ್ಯ ,ಸ್ಮಶಾನವಾಸಿಯೂ
ಮುಕ್ತಿದಾಯಕನು ಶುಭದಾಯಕನು
ಭಕ್ತಪ್ರಿಯನು ಬೇಡಿದ್ದನ್ನೆಲ್ಲಾ ನೀಡೋ
ಕರುಣಾಮಯನು ಪರಮೇಶ್ವರನು-
ಮನದೊಳಗಿನ ಅಜ್ಞಾನವ ಅಳಿಸೋ
ಮರುಭೂಮಿಯಲೂ ಹೂವು ಅರಳಿಸೋ
ಕತ್ತಲೆಯಿಂದ ಬೆಳಕಿನೆಡೆಗೆ ದಾರಿಯ ತೋರಿಸೋ
ಬ್ರಹ್ಮ ಬರೆದ ದುಜ್ಜನನ ಸಹ ಸಜ್ಜನನಾಗಿಸೋ
ಆ ದಿವ್ಯ ಆಯುಧವೇ ಗುರುವು-
ಬದುಕಿಗೊಂದು ಸ್ವಯಂ
ಶಿಸ್ತು ರೂಪಿಸಿಕೊ,
ಕೋಪವನ್ನು ಯಾವಾಗಲೂ
ನಿಯಂತ್ರಣದಲ್ಲಿರಿಸಿಕೋ,
ಮನಸನ್ನು ಏಕಾಗ್ರತೆಯಿಂದ ಕಾಪಾಡಿಕೋ,
ಅನ್ಯರ ಆಡಿಕೆ ಮಾತುಗಳಿಗೆ
ಕಿವಿಯ ಮುಚ್ಚಿಟ್ಟುಕೋ,
ಕನಸಿನ ಭಾವನೆಗಳಿಗೆ
ರಂಗು ರಂಗಿನ ಬಣ್ಣವ ಹಚ್ಚಿಕೋ,
ಯಾವುದೇ ವಿಚಾರಕೇ ಅನುಗುಣವಾಗಿ
ಕಾರ್ಯತಂತ್ರ ತಿಳಿದುಕೋ,
ಪ್ರಯತ್ನದ ಹಾದಿಯಲ್ಲಿ ಸವಾಲುಗಳು,
ಸಮಸ್ಯೆಗಳು ಎದುರಾಗುತ್ತವೆ ಎಚ್ಚೆತ್ತುಕೋ,
ಅವುಗಳ ಎದುರಿಸಲು ಪ್ರಯತ್ನ,
ಸಾಧಿಸುವ ಛಲ ಕೂಡಿಟ್ಟುಕೋ.
ನೀ ಗೆದ್ದ ಬಂದ ಮೇಲೆ
ಬಂದ ದಾರಿಯ ನೆನಪಿಟ್ಟುಕೋ,
ನಿನ್ನಂತೆಯೇ, ಹತ್ತಾರು ಜನಕೇ
ಮಾರ್ಗದರ್ಶಕನಾಗಿ, ಗುರುವಾಗಿ ನಿಂತುಕೋ...-
ನಾವು ಆಡುವ ಮಾತು
ಮಾಡುವ ಕೆಲಸ
ನೋಡುವ ನೋಟ
ನಡೆಯುವ ನಡೆ
ನಮ್ಮ ಅಂತರಂಗ ಒಪ್ಪಿದರೆ ಸಾಕು,
ಬೇರೆಯವರು ಕೊಡುವ "ಪ್ರಮಾಣಪತ್ರ" ವಲ್ಲ-
ಕಂಠವಿಲ್ಲದೇ ಹೋದರೂ
ಮಾತನಾಡಿಸುವುದು,
ಕೈಗಳಿಲ್ಲದೇ ಹೋದರೂ
ಆಡಿಸುವುದು,
ಕಾಲ್ಗಳಿಲ್ಲದೇ ಹೋದರೂ
ನಡೆಸುವುದು,
ಇಲ್ಲದ ಸಂಬಂಧಗಳ
ಬೆಳೆಸುವುದು,
ಇರುವ ಸಂಬಂಧಗಳ
ಅಳಿಸುವುದು,
ಇದು ಮನಸು ಇರದ ದುಡ್ಡು
ಮನುಷ್ಯ ಸೃಷ್ಟಿಸಿದ ದುಡ್ಡು
ಮನಸನ್ನು, ಮನುಷ್ಯನನ್ನು
ಕುಣಿಸುತ್ತಿರುವ ದುಡ್ಡು...
-
ಜೀವನವೆಂದರೆ ಒಂದು
ಸುಂದರ ಜೋಕಾಲಿಯಂತೆ
ತೂಗುವುದು ಅದರ ಕೆಲಸ
ಬಡವನಾದರೇನು?
ಶ್ರೀಮಂತನಾದರೇನು?
ರೋಗಿಯಾದರೇನು?
ಬೋಗಿಯಾದರೇನು?
ನೋವಿನಿಂದ ನಲಿವಿನ ಕಡೆ
ನಲಿವಿನಿಂದ ನೋವಿನ ಕಡೆ
ಅವಮಾನದಿಂದ ಸನ್ಮಾನದ ಕಡೆ
ಜನನನಿಂದ ಮರಣದ ಕಡೆ
ಮರಣದಿಂದ ಜನನದ ಕಡೆ
ತಿರುಗುವುದೇ ಜೀವನ
ಬದಲಾವಣೆ ಜಗದ ನಿಯಮ
ಪೂರಕವಾಗಿರಬೇಕು ಶಿಸ್ತು ಸಂಯಮ
-
ಬದುಕಿನ ಅನ್ವೇಷಣೆಯಲಿ
ಬೊಮ್ಮ ಜನ್ಮ ಬರೆಯುವನು
ಅಮ್ಮ ಜೀವ ನೀಡುವಳು
ತಂದೆ ಪ್ರೋತ್ಸಾಹ ಕೊಡುವನು
ಗುರುವು ದಾರಿ ತೋರುವನು
ಗೆಳೆಯರು ಸಾಂತ್ವನ ಹೇಳುವರು
ಹಿತಶತೃಗಳು ಚೂರಿ ಹಾಕುವರು
ಬಂದು ಬಳಗ ಹಣವಿದ್ದಾಗ ಸೇರುವರು
ಯಾರು ಏನೇ ಮಾಡಿದರೂ,
ಎಷ್ಟೆ ಸಾವು ನೋವಾದರೂ
"ಮಡದಿ"
ಮೈಯೆಲ್ಲಾ ಕಣ್ಣಾಗಿ, ಬೆನ್ನೆಲುಬಾಗಿ,
ಕಾವಲುಗಾರಳಾಗಿ ಕಾಯುವಳು.-