QUOTES ON #ಶಿವಧ್ಯಾನಿ

#ಶಿವಧ್ಯಾನಿ quotes

Trending | Latest
23 SEP 2020 AT 17:58

ಗೆಳೆಯ..!!💕
ಸುಖ–ದುಃಖ, ನೋವು–ನಲಿವು,
ಒಲವಲ್ಲೂ–ಹುಸಿಮುನಿಸಲ್ಲೂ
ನೀ ಸದಾ ಜೊತೆಯಾಗಿರಬೇಕಿತ್ತು💕
ಆದರೆ...???

[ ಅಡಿಬರಹವನ್ನು ಓದಿ👇]

-


23 SEP 2021 AT 18:30

ಭಾವನೆಗಳ ಕಡಲು
ವಾತ್ಸಲ್ಯತೆಯ ಒಡಲು❤❤❤
ನನಗಂತೂ "ಅಪ್ಪ"ನೆಂಬ ಅನರ್ಘ್ಯರತ್ನದ ಪ್ರೀತಿಯೇ ಮೇಲು

[ ಅಡಿಬರಹದಲ್ಲಿ ಅಪ್ಪನೊಲುಮೆಯ ಇನ್ನಷ್ಟು ಸಾಲುಗಳು👇 ]

-


4 JUL 2020 AT 9:32

ಶಿಖರದ ತುತ್ತ ತುದಿಯಲ್ಲಿ ನಿಂತು
ಆಳವನ್ನು ನೋಡಿ ಭಯ ಪಡುವುದಕ್ಕಿಂತ,
ಇಷ್ಟು ಎತ್ತರವನ್ನೇರಿದೆನಲ್ಲ ಎಂಬ ಹೆಮ್ಮೆ ಇರಲಿ.
ಹಾಗಂತ ಅಹಂ ಭಾವ ಬಾರದಿರಲಿ..!!

-


21 JUN 2020 AT 13:00

ಪುಟ್ಟ ಪುಟ್ಟ ಕಾಲುಗಳಿಗೆ ಕಾಲ್ಗೆಜ್ಜೆಯ ತೊಡಿಸಿಕೊಂಡಿದ್ದ ಬಾಲ್ಯದ ಕ್ಷಣಗಳು💕
ಅಪ್ಪನ ಕೈ ಬೆರಳ ಹಿಡಿದು ಇಟ್ಟ ಮುದ್ದು ಮುದ್ದಾದ ಹೆಜ್ಜೆಗಳು👣
ಅಪ್ಪನ ಹೆಗಲ ಮೇಲೆ ಕುಳಿತು ಪ್ರಪಂಚವನ್ನೇ ಕಂಡಂತಹ ಅನುಭವಗಳು
ಆ ಸಮಯಕ್ಕೆ ಅವೆಲ್ಲವೂ ಸುಂದರವಾದ ವಿಸ್ಮಯಗಳು!!

ಧೈರ್ಯ, ಆತ್ಮವಿಶ್ವಾಸದ ಅಭಯ ನೀಡುತ್ತಿದ್ದ ಒಬ್ಬ ಉತ್ತಮ ಗುರುಗಳು💙
ನನ್ನೆಲ್ಲಾ ಕನಸುಗಳಿಗೆ ಬೆಂಗಾವಲಾಗಿ ನಿಂತು
ಕನಸುಗಳ ಸಾಕಾರಗೊಳಿಸಿದ ಆ ದಿನಗಳು😍
ಏನೂ ಕೇಳದೆಯೇ ನೀಡುತ್ತಿದ್ದ ಪ್ರೀತಿಯ ಆ ಉಡುಗೊರೆಗಳು🎁
ಒಳಗೊಳಗೆ ಜೀವಂತವಾಗಿ ಉಳಿದಿವೆ ಆ ಸವಿನೆನಪುಗಳು !!

ಕಣ್ಣಂಚಲಿ ಕಂಬನಿ ಜಾರುತ್ತಿದೆ ಮೆಲ್ಲಗೆ😢
ಕಣ್ಣೀರೊರೆಸಲು ನೀವಿಲ್ಲ ಅಪ್ಪ ನನ್ನೊಂದಿಗೆ❣️
ಅರಗಿಸಿಕೊಳ್ಳುವುದು ಕಠಿಣವಾಗಿದೆ ನಿಮ್ಮಗಲಿಕೆಯ ನೋವು😔
ಒಲುಮೆಯ ಅಪ್ಪ❤ ಎಂದೂ ಚಿರಸ್ಮರಣೀಯ ನೀವು🙏

-


26 SEP 2021 AT 19:14

'ಪ್ರೀತಿ'ಯ ವರದಿ ಒಪ್ಪಿಸಿರುವೆ ಹುಡುಗಾ;
ನನ್ನೆದೆ ಮನವಿಯ ಆಲಿಸಿ,
ಪರಿಹಾರ ದೊರಕಿಸಿಕೊಡುವೆಯಾ ಬೇಗ?

-


4 OCT 2020 AT 17:33

ಹೇ..!
ಪ್ರಕೃತಿ ತಾಯೇ
ನೀನೊಂತರ ಮಾಯೆ
ವಿಸ್ಮಯವೇ ಸರಿ ನಿನ್ನ ಜಗತ್ತು
ಎದುರಾಗದಿರಲಿ ನಿನಗ್ಯಾವುದೇ ಆಪತ್ತು
ಕಂಗೊಳಿಸುತಿರುವೆ ಹಸಿರು💚ಸಿರಿಯ ಹೊದ್ದು
ಎಲ್ಲರನ್ನು ಕೈಬೀಸಿ ಕರೆಯುವೆ ಸ್ವತಃ ನೀನೇ ಖುದ್ದು...!!
ಭೂರಮೆಯ ಮುಕುಟಕ್ಕೆ ಕಿರೀಟ ಕಲಶವಿಟ್ಟಂತೆ ನಿನ್ ಸೌಂದರ್ಯ
ಉಯ್ಯಾಲೆಯ ಕಟ್ಟಿ ಜೋಕಾಲಿಯಾಡಲು ಬಯಸಿದೆ ನನ್ನಾಂತರ್ಯ❤

-


11 JAN 2021 AT 8:55

ನಿನ್ನೆಯ ಅನುಭವಗಳಿಂದ ಕಲಿತು
ಇಂದಿನ ನಿರೀಕ್ಷೆಗಳಲ್ಲಿ ಜೊತೆಯಾಗುತ್ತಾ
ನಾಳೆಯ ಭರವಸೆಯೊಂದಿಗೆ ಬದುಕಬೇಕಾಗಿದೆ..!!

-


10 AUG 2021 AT 19:28

ಹೇ ಸಾಗರವೇ... ಮೌನದಲ್ಲೇ ನಿನ್ನ ಸುಂದರವಾದ ಅಲೆಗಳನ್ನೆಬ್ಬಿಸಿ
ತಟದವರೆಗೂ ಚಾಚಿ ಎಲ್ಲರೊಂದಿಗೆ ಬೆರೆಯುತಿರುವಾಗ;
ನಾನೇಕೆ ಯಾರಿಗೂ ಅರ್ಥವಾಗದೇ ನಿಗೂಢ ರಹಸ್ಯವಾಗಿರುವೇ..!?

-


16 AUG 2021 AT 18:02

ನೆನಪುಗಳ ಸಂತೆಯಲ್ಲಿ ಕಳೆದ್ಹೋದ
'ಖರೀದಿದಾರಳ' ಕುರುಹುಗಳನ್ನು
ಹೃನ್ಮನದ ಬೀದಿಯಲ್ಲಿ ಹುಡುಕಲ್ಹೊರಟ
'ಮಾಲೀಕ' ಅವನು💙— % &

-


4 JUL 2021 AT 21:27

ಅಕ್ಷರಸ್ಥರು ಓದಿ ತಿಳಿದುಕೊಂಡದ್ದಕ್ಕಿಂತ;
ಅನಕ್ಷರಸ್ಥರು ಅಕ್ಷರ ಜ್ಞಾನವಿಲ್ಲದಿದ್ದರೂ
ಲೋಕ ಜ್ಞಾನ ಅರಿತುಕೊಂಡ ನಿಪುಣರು!

-