ರಾಯರ ಬೃಂದಾವನ 😍😍
-
11 NOV 2022 AT 11:00
ದರುಶನವೆನಗಾಯಿತು
ರಾಯರ ದರುಶನವೆನಗಾಯಿತು
ಕರೆದೊಯ್ಯಿತು ನಮ್ಮನು
ನಡುರಾತ್ರಿ ಯಲಿ
ಮಂತ್ರಾಲಯ ನೋಡಬೇಕೆಂಬ
ತವಕ
ಸ್ವಚ್ಚಂದದ ರಾಯರ
ಸನ್ನಿದಿಗೆ ತಲುಪಿ
ಬಹುದಿನದ ಬಳಿಕ ಮಾಡಿದೆವು
ನದಿಯ ಸ್ನಾನ
ತುಂಗೆಯ ತೀರದಲ್ಲಿ
ಸೂಯ೯ದೇವನಿಗೆ ನಮಸ್ಕರಿಸಿ
ನಡೆದವು ರಾಯರ ದರುಶನಕ್ಕೆ
ಯೋಗಯೋಗವೆಂಬಂತೆ ಅಲ್ಲಿ
ದೊರೆತರು ರಾಯರ ಪರಮಬಕುತರಾದ
ನಮ್ಮ ವಿದ್ಯಾರ್ಥಿಯ ಪರಿವಾರದವರು
ಅವರ ಉಪಕಾರದಿಂದ
ಅತ್ಯಂತ ಸನಿಹದಿಂದ ರಾಯರ
ದರುಶನ ಮಾಡುವ
ಅವಕಾಶ ದೊರೆಯಿತು
ಇರಲಿ ಅವರ ಪರಿವಾರದ ಮೇಲೆ
ರಾಯರ ಕೃಪೆ ಸದಾ
ನಮದೊಂದು ಧನ್ಯವಾದ
ಅವರ ಪರಿವಾರದವರಿಗೂ
ನನ್ನ ಕರೆತಂದು ಸುಂದರ
ಕತೆಗಳ ಮೂಲಕ ಈ ಊರ
ಪರಿಚಯಿಸಿದ ನನ್ನ ವಿದ್ಯಾರ್ಥಿ
ಬಳಗಕ್ಕೆ..
-