#ಮಂದಾನಿಲರಗಳೆ #ವಿಶ್ವಾವಸು೨೦೨೫ #ಯುಗಾದಿ೨೦೨೫
ಹಬ್ಬದ ಛವಿಯಿದು ಮನೆಯಲಿ ತುಂಬಿತು
ತೋರಣ ಕಟ್ಟಿದ ಬಾಗಿಲು ಮೆರೆದಿತು
ಮಾವಿನ ಜೊತೆಯಲಿ ಬೇವನು ಸೇರಿಸಿ
ರುಚಿಗಳು ಬಾಳಿನ ಸಾರವು ತೋರಿತು
ಪಾಡ್ಯದ ಭಾಗ್ಯದಿ ದೇವನ ನೆನೆಯುವ
ವತ್ಸರ ಪೂರ್ತಿಯ ವಾತಾವರಣವ
ರಾಶಿಯ ಫಲಗಳು ನಾಡಿನ ಕ್ಷೇಮವ
ತಿಳಿಯುತ ನಾವೆಲ್ಲ ಹರಿದಿನ ನಡೆಸುವ
ಹೋಳಿಗೆ ಭೋಜನ ಸವಿಯಲು ಸಡಗರ
ಪೂಜೆಯು ಮಾಡಿದ ಹಿರಿಯರಿಗಾದರ
ಹೊಸ ಹೊಸ ಬಟ್ಟೆಯ ತೊಡಗುವ ನಂದವು
ಮನೆಮನೆಯೊಳಗಿಂದು ಸುಂದರ ಸಂಭ್ರಮ
ವಿಶ್ವಾವಸು ನಾಮ ಸಂವತ್ಸರದ ಶುಭಾಶಯಗಳು
🍃🪴🌿🎉🤩-
29 MAR AT 10:54