ಗಳಿಸಲೇನಿದೆ....!!
ಬರುವ ಮುಂಚೆ ಕತ್ತಲು
ಬರುವಾಗ ಬೆತ್ತಲು..
ಹೋಗುವಾಗ ಬೆತ್ತಲು
ಹೋದ ಮೇಲೆ ಮತ್ತೆ ಕತ್ತಲು..
ತಾಯ ಗರ್ಭದಿಂದ
ಭೂಗರ್ಭದ ವರೆಗೆ
ನಡೆಯುವದೆಲ್ಲ
ಬೊಗಸೆ ನೀರಿನಾಟ
ಎಷ್ಟೇ ತುಂಬಿಸಿಕೊಂಡರೂ
ನಿಲ್ಲುವುದಿಲ್ಲ...🙄-
ನಿನ್ನ ಮನಸಿಗೆ
ನೋವಾದಾಗ
ಅತ್ತು ಕ್ಷಮಿಸಿ
ಮುಂದೆ ಸಾಗಲು ಕಲಿ
ನಿನ್ನ ಕಣ್ಣಿಂದ ಜಾರುವ
ಪ್ರತಿ ಹನಿಯೂ
ನೀ ಭವಿಷ್ಯದಿ ನೆಡುವ
ಸಂತಸದ ಸಸಿಗಳಿಗೆ
ನೀರೆರೆದು ಪೊರೆವ
ಸಂಜೀವಿನಿಯಾಗಲಿ-
ನೆನಪಿನಾಳಕ್ಕಿಳಿಯದಿರು ಮರುಳೆ
ಅಲ್ಲಿ ನಿನ್ನ ಕೈಗೆ ಸಿಗುವದು ಬರಿ ಮರಳೇ
ಸುಂದರ ಸ್ವಪ್ನಗಳನ್ನು ಕಂಗಳಿಗಿತ್ತು
ಮುದ್ದಾದ ಮಗುವ ಮಡಿಲಿಗಿಟ್ಟು
ಮಾಯವಾಗುವಾಗ ಎಲ್ಲಿತ್ತು
ಈ ನಿನ್ನ ಹುಸಿಪ್ರೀತಿ....?
ಬಾಳ ಬೆಳಗುವೆನೆಂದು ಬಂದು
ನನ್ನನ್ನೇ ಕತ್ತಲೆಗೆ ದೂಡಿದ ಖಳ ನೀನು
ಹಗಲಲ್ಲಿ ಕಳೆದದ್ದು ಇರುಳಲ್ಲಿ ಹುಡುಕುವ
ಭ್ರಮೆ ಏತಕೆ ನಿನಗೆ,
ತೊಲಗು ಮುಖ ತೋರಬೇಡ ನನಗೆ
ಅಂದದ ಮಾತುಗಳಾಡಿ ಅಂಗನೆಯರ
ಮನ ಸೂರೆ ಮಾಡಿ
ಸಂಗವಗೈದು ಅಂಗಳಕೆಸೆದ
ಮಾನಗೆಟ್ಟ ಮಡಿವಂತನ ಪಾಲಿಗೆ
ನನ್ನ ನೆನಪು ಮಾಯೆಯೇ ಸರಿ..-
ಗಿರಗಿರನೆ ತಿರುಗುವ ಬಣ್ಣದ ಬುಗುರಿ,
ಕಂಡೊಡನೆ ಚಂಗನೆ ನೆಗೆವ ಚಿಗರಿ,
ದಸರಾ ಅಲಂಕೃತ ಮೈಸೂರು ನಗರಿ,
ಕಂಡಾಗ ಎದೆಯಾಗುವದು ನಗಾರಿ..-
ಕೋವಿಡ್ ನಿಂದ ಸತ್ತರೇ
ಅಂತ್ಯಕ್ರಿಯೆಗೂ ಕಷ್ಟ ಮಾರ್ರೆ
- ಕಂಪನ
ಸಾವನ್ನೂ ವರ್ಣಿಸು ಅಂತಿರಲ್ಲ
ಮಾರಾಯ್ರೆ ಇದು ಯಾವ ನ್ಯಾಯ-
ಕನಸುಗಳ ಕೊಂದು ಕೊಂದು
ಕೊಲೆಪಾತಕಿಯಾಗಿರುವೆ ನಾನಿಂದು
ನನ್ನನ್ನೇ ಕೊಂದುಬಿಡು ನೀ ಬಂದು-
ನಮ್ಮವರು ಅಂತಾ ನಾವು
ಅಂದುಕೊಂಡವರೆಲ್ಲಾ..
ನಮ್ಮ ಜೊತೆ ಯಾವಾಗ್ಲೂ
ಒಂದೇ ತರ ಇರ್ಲಿ ಅನ್ನೊದು
ನಮ್ಮದೇ ತಪ್ಪು. ಯಾಕೆಂದರೆ...
ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ
ವೇಗವಾಗಿ ಬದಲಾಗೊದು
ಮನುಷ್ಯನ ಮನಸ್ಸು, ಆಲೋಚನೆ,
ಮತ್ತು ಇಷ್ಟಾನಿಷ್ಟಗಳು ಮಾತ್ರ..
ಶುಭೋದಯ ಎಲ್ಲರಿಗೂ 🙏🏻-
ನೋಟದಲ್ಲೇ ಇಡುತ
ಕಚಗುಳಿ ಮಾತಲ್ಲೇ
ಮಾಡಬಲ್ಲೆ ನೀ ಮೋಡಿ.
ನಿನ್ನ ಕಂಡಾಗ ನನ್ನ
ಮನಸಾಗುವದು
ಹುಚ್ಚುಕೋಡಿ
ನಿನ್ನ ಹೊಗಳಲು ನೀನು
ಅಂದಗಾತಿ ಏನೂ ಅಲ್ಲ,
ಆದರೂ...
ನೀ ಯಾವ ಮೇನಕೆಗೂ
ಕಮ್ಮಿ ಇಲ್ಲ.....-
ಎಷ್ಟೋ ನಿಲ್ದಾಣಗಳು ಸಿಗಬಹುದು,
ಹಾಗಂತ....
ಎಲ್ಲ ನಿಲ್ದಾಣಗಳಲಿ ಇಳಿಯೋಕಾಗುತ್ತಾ?
ಈ ಜೀವನ ಪಥದಲ್ಲಿ ಅನೇಕ ಅಪರಿಚಿತರು
ಸಿಗುತ್ತಾರೆ, ಹಾಗಂತಾ...
ಎಲ್ಲರನ್ನೂ ಪರಿಚಯಿಸಿಕೊಳ್ಳಲಾಗುತ್ತಾ.?-