QUOTES ON #ಪ್ರೇಮಂ_ಪೂಜ್ಯಂ

#ಪ್ರೇಮಂ_ಪೂಜ್ಯಂ quotes

Trending | Latest
24 DEC 2021 AT 7:58

ಹಾಲಂತ ಹೃದಯದೊಳಗೆ
ಜೇನಾಗಿ ಬೆರೆಯುವೆನೆಂದ,
ಅಸಲಿಗೆ ಹುಳಿಯಂತೆ
ಒಡೆದ ಮನದವಳು ನಾನು ಎಂದೆ !
ನಿನ್ನಾರಾಧಕಗೆ ಅಭಿಷೇಕವಾಗಿ
ಹರಿಯೋಣ ಎಂದ !!
ನಾ ಹೆಪ್ಪುಗಟ್ಟಿದೆ ।

-


12 MAY 2020 AT 23:33

ನಿನ್ನೊಂದಿಗೆ ಹೆಜ್ಜೆ ಹಾಕಬೇಕಿದೆ..
ಸಂಜೆಯ ಬೆನ್ನಿಗಂಟಿದ
ಇರುಳೊಂದು ಕರಗುವ ತನಕ,
ಮೊಗ್ಗೊಂದು ಅರಳಿ
ಘಮಿಸುವ ತನಕ,
ಲಯವೊಂದು ಮನದ
ತಂತಿಯ ಮೀಟಿ
ತುಟಿಯಂಚಿನ ಗಾನವಾಗುವ ತನಕ,
ಮುಪ್ಪಡರಿ ದೇಹ
ಮಣ್ಣಿಗಿಳಿಯುವ ತನಕ,..

-


30 JUN 2021 AT 21:59

ಕಾಡುಮಲೆ ಒಲವಹೊಳೆ
ನಿನ್ನಾಗಮನದ ಪ್ರತೀಕ್ಷೆಯಲಿ
ನಾ ಬಾಯಾರಿದ ಇಳೆ,
ಹಸಿರು ಚಿಗುರ ಚೈತ್ರಪ್ರೇಮ
ನೀ ಜೊತೆಯಲಿರಲು
ಬದುಕು ಸಾಗರ ಸಂಗಮ ।

-


22 OCT 2020 AT 8:32

ಹೀಗೊಂದು ಒಲವು ಸಾರ್ಥಕ್ಯವಾಗಲಿ...❤
(caption 👇)

-


4 JUL 2020 AT 18:59

ಮನದ ಲಯ ತಪ್ಪಿದಾಗ
ಶೃತಿಯಾಗಿ ನೀ ಬಾ,
ಬಾಳ ಸಂಗೀತಕೆ ನಾ 'ಪಲ್ಲವಿ'ಯಾಗಿ
ಜೊತೆಯಾಗುವೆ,
ನೀ ಚರಣವಾಗಿ ಬೆರೆತುಬಿಡು.
ಬದುಕೊಂದು ಮಾಧುರ್ಯ ತುಂಬಿದ
ಒಲವ ಗೀತೆಯಾಗಿ ಹೊಮ್ಮಲಿ ।

-


12 DEC 2021 AT 17:26

ಹೊಸತೇನು ಹೇಳಲಿ
ಹರವಾದ ಬಾಳಲಿ,
ನೀ ಬಂದು ಸೇರಿದೆ
ನವ ಚೈತ್ರ ಚಿಗುರಿದೆ,
ಬದುಕೀಗ ಮಿನುಗಿದೆ
ಇಡಿ ಜನುಮ ಬೇಕಿದೆ,
ನಿನ್ನೊಂದಿಗೆ ನಡೆಯಲು
ಹೊಸ ಲೋಕ ಬೆಳಗಲು,
ಚಂದ್ರನಿಗು ದಿಗಿಲು
ಹುಣ್ಣಿಮೆಯೆ ನೀನಾಗಿರಲು,
ನೀ ಎನಗೊಲಿದ ಪ್ರೇಮಕಲೆ
ನಾ ನಿನ್ನಸ್ತದಲಿ ಉದಿಸಿದ ನಾಟ್ಯಶಿಲೆ ।

-


8 AUG 2021 AT 18:02

ಅನುಮಾನಿಸಿ, ಅವಮಾನಿಸಿ
ಕಟುನುಡಿಗಳಿಂದಲೆ ನನ್ನ ಕಲ್ಲಾಗಿಸಿದೆ..
ನಾ ಅಹಲ್ಯೆಯಲ್ಲ.!!
ನಿನ್ನ ತುದಿಬೆರಳ ಸ್ಪರ್ಶದ
ಸೋಗಿಗಾಗಿ ತಪಸ್ಸಿನಂತೆ ಕಾದೆ..
ನಾ ಅಹಲ್ಯೆಯಲ್ಲ.!!
ಮನದಂಗಳದಿ ನಿನ್ನ ಪಾದಸ್ವರ್ಶದ
ಮಾತ್ರದಿಂದಲೆ ಬಂಧಮುಕ್ತಳಾದೆ..
ನಾ ಅಹಲ್ಯೆಯಲ್ಲ.!!

-


4 JAN 2022 AT 23:55

ನಿನ್ನೊಂದು ಸ್ಪರ್ಶಕೆ ಹಪಹಪಿಸುತ
ಉಸಿರು ಬಿಗಿಹಿಡಿವವಳು ನಾನು,
ನನ್ನೊಳಡಕವಾಗಿಹ ನಿನ್ನ
ಪ್ರೇಮವದು ಹಾಲುಜೇನು,
ನೀನಿರದೆ ಚಿಗುರಲೆನಗೆ ಚೈತನ್ಯವಿಲ್ಲ
ನಮ್ಮೀರ್ವರ ಸಮ್ಮಿಲನದಿ
ಅಡಗಿಹುದು ಸೃಷ್ಟಿಯ ಆಧಾರವೆಲ್ಲ,
ಈ ಪ್ರಕೃತಿಯ ಹೆಣ್ಣಾಗಿಸುವ
ಓಂಕಾರದೊಳಗಿಹ ಪುರುಷ ನೀನು,
ನಿನ್ನರ್ಧ ದೇಹದಲಿ ಬೆರೆತೋದ ಶಕ್ತಿನಾನು !
ಘಮಿಸುವೊಲವ ಕಾವ್ಯಕೆ ಮುನ್ನುಡಿ
ನಾನು...ಮತ್ತು ನನ್ನೊಳಗಿನ ನೀನು ।

-


6 JUL 2021 AT 23:16

ಅವನೋ
ಭೋರ್ಗರೆಯುವ
ಕಡಲಂತವನು,
ನಾನೋ ತಟಸ್ಥ
ತೀರದಂತವಳು,
ಅಗಣಿತ ಭಾವಗಳನು
ಅಲೆಗಳಲ್ಲಡಕವಾಗಿಸಿ
ತಂದೊಪ್ಪಿಸುವವನವನು,
ಅವನೊಲವ
ಉಕ್ಕುವಿಕೆಗಾಗಿ ಕಾಯುವ
ಹುಣ್ಣಿಮೆಯಂತವಳು
ನಾನು ।

-


12 NOV 2021 AT 17:12

ಕ್ಷೀರಪಾಕದಿ ಆ ದೇವರು ನಿನ್ನ
ಎರಕಹೊಯ್ದನೇನು ?
ಅನಂತ ತಾರೆಗಳ ಹೊಳಪೇನು,
ಪ್ರತೀಕ್ಷಣವೆನ್ನ ಕಾಡುವ ಅಚ್ಚರಿ ನೀನು,
ನೀ ಬರುವ ಹಾದಿಯಲೆ ಕಾಯುತಿರುವೆ ನಾನು,
ಮನದ ಹಾದಿಯಲೊಮ್ಮೆ
ಹಾಗೆ ಹಾದುಹೋಗು ನೀನು ।

-