QUOTES ON #ಜಗವಿಮೋಚಕ

#ಜಗವಿಮೋಚಕ quotes

Trending | Latest
24 DEC 2019 AT 9:13

ಜಗವಿಮೋಚಕ - ೬೧
================================
ಅಕ್ಷರಜ್ಞಾನವಿದ್ದರೇನು ಫಲ ? ಅರಸನಾಗಿ ಬಾಳದಿರೆ
ಮಣದ ಹಣವಿದ್ದರೇನು ಫಲ? ಹಸಿವಿಗೆ ಜಿಪುಣನಾದರೆ
ಸೌಂದರ್ಯವಿದ್ದರೇನು ಫಲ ? ಸದ್ಗುಣನಾಗಿ ಬಾಳದಿರೆ
ಊರಿಗೆ ಓಡೆಯನಾದರೇನು ಫಲ? ಉಪಕಾರಿಯಾಗದಿರೆ
ಮಂತ್ರವ ಪಠಿಸಿದರೇನು ಫಲ? ಮಾನವೀಯತೆ ಮರೆತರೆ
ಗುಡಿಯ ಸುತ್ತಿದರೇನು ಫಲ ? ಗುಣವಂತನಾಗದಿರೆ
ಬೆಳಕಿದ್ದರೇನು ಫಲ ? ಬಾಳಲಿರುಳು ಮೆರೆಯುತ್ತಿದ್ದರೆ
ಇರಬೇಕು ಎಂದೆಂದೂ ನಾವು ನಡೆಯುವ ದಾರೀಲಿ
ಮಗದೊಬ್ಬ ಮನದುಂಬಿ ನಗುನಗುತಾ ಹರಸಬೇಕು
ಜನುಮವದು ಸಫಲವೋ ತಿಳಿಯೋ ಜಗವಿಮೋಚಕ...

-


21 APR 2020 AT 9:48

ಜಗವಿಮೋಚಕ - ೧೩೦
===============
ಅವಶ್ಯಕತೆಗೂ
ಅನಿವಾರ್ಯತೆಗೂ
ಅರ್ಥವೂ
ಅಜಗಜಾಂತರ
ಅವಶ್ಯಕತೆ
ಅವಕಾಶವಾದರೆ
ಅನಿವಾರ್ಯತೆಯು
ಆಕಾಂಕ್ಷೆಯಾಗತ್ತದೆ...

-


14 NOV 2019 AT 18:59

ಜಗವಿಮೋಚಕ - ೪೧
==================
ತುಟಿ ಬಿಚ್ಚಿ ಮಾತಾಡವದರಲ್ಲಿ
ಮನ ಬಿಚ್ಚಿ ಮಾತಾಡುವುದೇಕೋ
ಮೌನದಲ್ಲೆ ಕೊಚ್ಚಿ ಕೊಂದವರನ್ನು
ಮಾತಿನಲ್ಲಿ ಚುಚ್ಚಿ ಕೊಲ್ಲುವುದೇಕೋ
ಮೌನಕೆ ಶರಣಾದ ಮನಕೆ
ಮಾತಿನ ಮಹಲಿನ ಹಂಗೇಕೋ
ಮೌನದಲೆ ಮರುಗುವ ಮನಕೆ
ಮಾತಿನ ಒಲವಿನಲಿ ಶರಣಾಗೋ
ಮನ ಚುಚ್ಚಿ ಕೊಂದರೆ ತನುವ
ಚುಚ್ಚಿ ಕೊಂದಂತೆ ಆ ಕರ್ಮ ನಿನಗೇಕೋ
ಅನುಸರಿಸು ಧರ್ಮ‌ ಅರಿತು ಮರ್ಮ
ತಿಳಿಯೋ ನೀ ಜಗವಿಮೋಚಕ

-


11 JUL 2020 AT 14:25

ಜಗವಿಮೋಚಕ - ೧೬೮
=============================
ನದಿಯ ತೆರಗಳಂದದಿ‌ ಬೆದಕುತಿರುವುದು ಲೋಕ
ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು
ನಲಿವೇನು ನೋವೇನು ಸುಖವೇನು ಕಷ್ಟವೇನು
ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ
ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ
ಮನಸೋತು ಬರಿದಾದರೆ ಮುಗಿದೀತೂ ಯಾತ್ರೆ
ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ
ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ
ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ..

-


6 JUL 2020 AT 12:58

ಜಗವಿಮೋಚಕ - ೧೬೩
================
ನಕ್ಕರೆ ಅದು ಸ್ವರ್ಗದ ಬಾಗಿಲು
ಅತ್ತರೆ ಅದು ನರಕದ ದೇಗುಲ
ನಗುವ ಅಳುವ ಸುಖವೋ
ದುಃಖವೋ ಅವನಿಚ್ಚೆಯಂತೆ
ಬಾಳು ಬೆಳಗಿ ಇರುಳು ಕಳೆಯುವುದೋ
ಪರರನ್ನೂ ತನ್ನಂತೆ ಬಗೆದರೆ
ಬದುಕು ಬಂಗಾರವಾಗುವುದೋ..

-


10 DEC 2019 AT 8:17

ಜಗವಿಮೋಚಕ - ೫೮
=============================
ಅಸಾಧ್ಯವಾದುದು ಎಂದು ಆಶಿಸುತ್ತಾ ‌ಕೊರಗಿ
ಕೂರುವ ಬದಲು ಸಾದ್ಯವಾಗಿರುವುದನ್ನು ಸಾಧಿಸಿ
ಸಾಧನೆ ಮಾಡುವುದು ಉತ್ತಮರ ಲಕ್ಷಣ...

-


6 JUL 2020 AT 10:40

ಜಗವಿಮೋಚಕ - ೧೬೦
==================
ನಾನೆಂಬುದೆ ಗರ್ವ ನಾವೆಂಬುದೆ ಧರ್ಮ
ನೀನೆಂಬುದೆ ಮರ್ಮ ನನಗೆಂಬುದೆ ಕರ್ಮ
ಬದುಕಿನ ನಿಜಧರ್ಮ ನೀ ಅರಿಯದಿದ್ದರೆ
ನಾನು ನಾವು ನೀನು ನನಗೆಲ್ಲವೂ ಬರೀ
ಕ್ಷಣಿಕ‌ ಕಾಲದಿ ಕುಣಿಸಿದಂತೆ ಕುಣಿಸಿ ಕಾಲನ
ಕರೆಗೆ ಕೊರಳೊಡ್ಡುವಾಗ ಕೆಣಕಿ ಕಣ್ಮಂಜದಾಗ
ಪರದೆಯಂಚಿನ ನಾಟಕದಂತೆ ಈ ಬದುಕೋ..

-


19 JUN 2020 AT 8:25

ಜಗವಿಮೋಚಕ - ೧೫೭
================
ಬೊಗಸೆಯಷ್ಟೇ ಬದುಕು
ಬಯಸಿದ್ದನ್ನೆಲ್ಲಾ ಹುಡುಕು
ಬೇಕೆ ಬೇಕೆಂದು ಬಡಿದಾಡದಿರು
ಬೊಬ್ಬಿಡಿದರೆ ಬರಿದಾಗುವುದು
ಇರುವುದನ್ನೇ ಸವಿಯೋ ನೀ
ಸವಿದಷ್ಟೇ ಬಾಳು ಸಿಹಿಯೋ..

-


23 MAR 2020 AT 17:48

ಜಗವಿಮೋಚಕ - ೧೦೭
========================
ಜನರ ಕಂಗಳಲ್ಲಿ ಕೊರೋನಾ ಕಂಬನಿ
ಜಗದ ತುಂಬೆಲ್ಲಾ ಸೊಂಕಿನ ಹಾವಳಿ
ಅಭಿವೃದ್ಧಿಯ ಹೆಸರಲ್ಲಿ ಕೊಳ್ಳೆ ಹೊಡೆದರು
ಪರಿಸರದ ಮಾತನ್ನು ಕೇಳದೆ ಹೋದರು
ಭೂತಾಯಿಯ ಒಡಲನ್ನು ಸೀಳಿದರು
ಕಾಡನ್ನು ಕಬಳಿಸಿ ಕಟ್ಟಡ ಕಟ್ಟಿದರು
ವಿನೋದದಿ‌ ವಿಚಾರವ ಮರೆತವರು
ವಿಷಾದಕೂ ಮರುಗದೆ ಹೋದವರು
ಮೋಜಿನ ಮಹಲಿಗೆ ಮಾರು ಹೋದರು

ಅರಮನೆಯಲ್ಲಿ ಅಡಗಿದರು ಬಿಡದಿನ್ನು
ಮಾಡಿದ ತಪ್ಪಿಗೆ ಬೇಡುತ್ತಿದೆ ಶುಂಕವನ್ನು
ನಾನೆಂದು ಮೆರೆದವರು ಹೆಣವಾದರು
ನಾವೆಂಬ ಮಂತ್ರವ ಕಲಿಸುತಿಹುದು
ಅರಿಯದೆ ಹೋದರೆ ಅಂತ್ಯದ ಹಾಡು
ಸಾಲು ಸಾಲಿನ ಮೆರವಣಿಗೆ ಕೊನೆಗಿನ್ನು
ತುಳಿಯೋ ಮನುಜ ಮಾನವತೆಯ ಹಾದಿ
ಬಂದರೂ ಹೆದರಿ ಹೋಗುವುದು ನಿನಗಿನ್ನು...

-


28 JUL 2020 AT 12:21

ಜಗವಿಮೋಚಕ - ೧೭೪
================
ಜಗವನ್ನು ದಿಕ್ಕರಿಸಿ ದಕ್ಕಿಸಿಕೊಂಡುದದ್ದಾರೇನೂ
ಜನರನ್ನೆಲ್ಲಾ ಹಿಂಸಿಸಿ ನೀ ಸಹಿಸಿದಿದ್ದಾರೇನೂ
ಮನುಜನರ ಮೋಸದಿ ಗಳಿಸಿದಿದ್ದಾರೇನೂ
ಮನಸ್ಸಿನ‌ ದ್ರೋಹದಿ ಉಳಿಸಿದಿದ್ದಾರೇನೂ
ಕಡುಮಾತಿನ ಕೋಪದಿ ಪಡೆದಿದ್ದಾರೇನೂ
ಬಾಂಧವ್ಯಗಳ ಬಿರುಕು ಬೆಸದಿದ್ದಾರೇನೂ
ಜಗದೊಳಿನ‌ ಜನರನ್ನೆಲ್ಲಾ ಮನುಜರಂತೆ
ಕಾಣು ನೀ ಮೃದು‌ ಮನಸ್ಸಿನ ನುಡಿಗಳು
ಬೆಸೆಯುವುವು ಬಂಧು‌ ಬಾಂಧವ್ಯಗಳ
ನಗು‌ನಗುತಾ ಸ್ವಾಗತಿಸು ಅಳಿಯುವ ಮುನ್ನಾ..

-