ಮಾರ್ಚ್ 27,2020
ನಮ್ಮೆಲ್ಲರ ಆರೋಗ್ಯ ಕಾಳಜಿ ವಹಿಸುವ
ಪೂರ್ತಿ ವೈದ್ಯಕೀಯ ತಂಡಕ್ಕೆ ಭಾವಪೂರ್ವಕ
ಕೃತಜ್ಞತೆಗಳು. ನಮ್ಮನ್ನು ಕಾಪಾಡುವುದಲ್ಲದೆ
ನೀವೂ ಚೆನ್ನಾಗಿರಬೇಕು, ನಿಮ್ಮ ಆರೋಗ್ಯವೂ
ಫಾಸಿಗೊಳ್ಳದಿರಲಿ!
"Where ever the art of medicine is loved, there is also love of humanity"
-Hippocrates
ಗೀತಾಂಜಲಿ-
ಮಾರ್ಚ್ 25, 2020.
ಇವತ್ತು ಯುಗಾದಿ ಹಬ್ಬ, ಹೊಸವರುಷವನ್ನು 'ಲಾಕ್ ಡೌನ್' ನಿಂದ ಶುರುವಾದದ್ದು ಇತಿಹಾಸ ದಲ್ಲಿ ಇದೆ ಮೊದಲು! ನಾವು ಹೇಗೆ ಬದುಕಬೇಕೆಂಬುದನ್ನು ತಿಳಿಸಿಕೊಡುವ ಪರ್ವದಿವಸ! ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವುದು ಇದೇ ಅರ್ಥದಲ್ಲಿ. "ಇಷ್ಟ -ಅನಿಷ್ಟಗಳು ಬಂದಾಗ ಅದನ್ನು ಸಮಚಿತ್ತದಿಂದ ಎದುರುಗೊಳ್ಳಬೇಕು" ಎಂದು ಗೀತೆ ಹೇಳಿದೆ. ಇಪ್ಪತ್ತೊಂದು ದಿನಗಳ ಗಡುವಿನಲ್ಲಿ ಒಂದು ದಿನ ಮುಗಿದಿದೆ. ಪತ್ರಿಕೆಯಿಲ್ಲದೇ, ಟಿವಿಯನ್ನೆ ಅವಲಂಬಿಸಬೇಕಾಗಿದೆ. ಯಾವ ಸಡಗರವಿಲ್ಲದೆ, ಹೋಳಿಗೆಯಿಲ್ಲದೆ, ಬಣ್ಣಕಾಣದರಂಗೋಲಿ ಹಾಕಿದ ಮೊದಲ ಯುಗಾದಿಯಿದು! ವಿಚಿತ್ರ ಮನಸ್ಥಿತಿಯ ನಡುವೆಯೇ yq ನಲಿ 800 ಕೋಟ್ ದಾಖಲಿಸಿದೆ!
~ಗೀತಾಂಜಲಿ
(Caption ಓದಿ)-
ಏಪ್ರಿಲ್ 3, 2020.
(COVID19-Charles Darwin's Theory)
'Death touches the spring of our
common humanity' -T.S.Arthur
ಪ್ರತಿಯೊಂದು ಜೀವಿಯೂ ಸಾವನ್ನು ಮುಟ್ಟಲೇಬೇಕು. ಜಾಗತಿಕ ಮಟ್ಟದಲ್ಲಿ ಕೋವಿಡ್-19 ಗೆ ಬಲಿಯಾಗುವರ ಸಂಖ್ಯೆ ಏರುತ್ತಲೇ ಇದೆ. ಕೋವಿಡ್-19 ಗೆ ಸಾವನ್ನಪ್ಪಿದವರ ಸಂಖ್ಯೆ 56767. ಸೋಂಕಿತರ ಸಂಖ್ಯೆ 10.6 ಲಕ್ಷ (ಆಧಾರ: ಜಾನ್ಸ್ ಹಾಪಕಿನ್ಸ್ ಯುನಿವರ್ಸಿಟಿ) ಹೀಗೆ ಮುಂದುವರಿದರೆ ಮಾನವ ಜನಾಂಗವೇ ಅಂತ್ಯವಾಗುತ್ತಾ? ನಾಶದ ಮುನ್ನುಡಿನಾ? ಅಳಿವಿನ ಸಂಕೇತನಾ? ಯಾಕೋ ಚಾರ್ಲ್ಸ್ ಡಾರ್ವಿನ್ ಸಿದ್ಧಾಂತ ನೆನಪಾಯಿತು. ಡಾರ್ವಿನ್ ಪ್ರಕಾರ:
(Caption ಓದಿರಿ)-
ಮಾರ್ಚ್ 28, 2020.
ಜಲಪಾತದ ನೀರಹನಿಗಳನ್ನು ಕುಡಿವಂತೆ,
ನಕ್ಷತ್ರಗಳನ್ನು ಕಿತ್ತು ತಂದು ಬಿಡುವಂತೆ,
ಕತ್ತಲೆಯನ್ನು ಸೀಳಿಕೊಂಡು ಬೆಳಕ, ಹುಡುಕುವಂತೆ ಹದಿವಯಸ್ಸು
ಇದೀಗ ರೆಕ್ಕಗಳ ಕತ್ತರಿಸಿ ಹಾಕಿದಂತಾಗಿದೆ!
(Caption ಓದಿರಿ)
-
ಮಾರ್ಚ್ 26, 2020
ನಾನಾಗ ಶಾಲೆಗೆ ಹೋಗುವ ಹುಡುಗಿ ನನಗೆ ಕತೆ ಕೇಳುವುದೆಂದರೆ ಪಂಚಪ್ರಾಣ. ನನ್ನಜ್ಜಿ ಕತೆಹೇಳುವುದರಲ್ಲಿ ನಿಸ್ಸೀಮಳು. ನನ್ನ ದಟ್ಟತಲೆ ಕೂದಲೊಳಗೆ ಬೆರಳಾಡಿಸುತ್ತಾ ಕತೆ ಹೇಳುತ್ತಿದ್ದರೆ ಹಾಗೆ ನಿದಿರೆಗೆ ಜಾರುತ್ತಿದ್ದೆ. ಮಹಾಭಾರತ, ರಾಮಾಯಣ, ಜಾನಪದ, ಅರೇಬಿಯಾನ್ ನೈಟ್ಸ್ ಕತೆಗಳ ಜೊತೆಗೆ ಅವರಕಾಲದಲ್ಲಿ ಬಂದಿದ್ದ ಪ್ಲೇಗ್ ಮಹಾಮಾರಿಯ ಕತೆಗಳನ್ನು ಹೇಳುತ್ತಿದ್ದರು. ಪ್ಲೇಗ್ ವಿಷಯನೂ ಕತೆನೇ ಅನ್ನುವುದು ನನ್ನ ಅಂದಿನ ಬಾಲ್ಯದ ಮುಗ್ಧತೆ!
(Caption ಓದಿರಿ)-
ಏಪ್ರಿಲ್ 13, 2020.
Thanks giving❤️
ಡೈರಿ ಬರಿಯುವುದೆಂದರೆ ನಮ್ಮೊಳಗೆ ನಾವೇ ಸಂಭಾಷಣೆಗೆ ಇಳಿದಂತೆ. ಇಲ್ಲಿ ಕಲ್ಪನೆಗಳಿಗೆ ಅವಕಾಶವೇ ಇಲ್ಲ. ವಾಸ್ತವದ ಚೌಕಟ್ಟಲ್ಲೇ ಬರೆಯಬೇಕು. ಈ ಕೊರೋನಾ ವೈರಸ್ ನಿಂದಾದ ಕಷ್ಟದ ಸಮಯದಲ್ಲಿ ದೇವರೇಕೆ ಮೌನವಾಗಿದ್ದಾನೆ ಎನಿಸುವಾಗೆಲ್ಲಾ, ಎಲ್ಲೋ ಓದಿದ ಸಾಲು ನೆನಪಾಗುತ್ತದೆ. ಪಾಠ ಹೇಳಿಕೊಟ್ಟ ಶಿಕ್ಷಕರು ನಾವು ಪರೀಕ್ಷೆ ಬರಿಯುವಾಗ ಮೌನವಾಗಿರುತ್ತಾರೆ. ಈ ಪರೀಕ್ಷೆಯಲ್ಲಿ ಮನುಕುಲ ಗೆದ್ದು ಬರಲಿ, ತನ್ನ ತಪ್ಪುಗಳನ್ನೆಲ್ಲ ತಿದ್ದುಕೊಳ್ಳುವಂತಾಗಲಿ.
(Caption ಓದಿರಿ)-
ಏಪ್ರಿಲ್ 11, 2020.
ಲಾಕ್ ಡೌನ್ ಸಮಯದಲ್ಲಿ ಎಸೆನ್ಷಿಯಲ್ ಸೇವೆಯೆಂದು ವೈದ್ಯಕೀಯ, ಪೋಲಿಸ್ , ಮಾಧ್ಯಮಗಳು, ಬ್ಯಾಂಕ್ ಗಳು, ಮೆಡಿಕಲ್ ಶಾಪ್ ಗಳು ಇವೆಲ್ಲನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ ಈ ಎಲ್ಲಾ ಸೇವೆಗಳಿಗೆ ಬೆನ್ನೆಲುಬಾಗಿ ನಿಲ್ಲುವುದು ಟೆಲಿಕಾಮ್ ಸೇವೆ. ಅದರಲ್ಲೂ ಸರ್ಕಾರಿ ಸ್ವಾಮ್ಯದಲ್ಲಿರುವ BSNL. ಬೇರೆ ಬೇರೆ ಖಾಸಗಿ ಕಂಪನಿಗಳು ಮೊಬೈಲ್ ಸೇವೆ,ಬ್ರಾಡ್ ಬ್ಯಾಂಡ್ ನೀಡುತ್ತವೆ. ಆದರೆ BSNLಈ ಸೇವೆಗಳ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಕೆಲಸಗಳಿಗೆ BSNL ಲಿಂಕ್ ಬೇಕೆ ಬೇಕು. CORE ಬ್ಯಾಂಕಿಂಗ್ ಕೆಲಸಗಳು ನಡೆಯುವುದು ಇದೇ BSNL ಸರ್ಕ್ಯೂಟ್ಗಳಿಂದಲೇ. ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಗಳ ಮ್ಯಾನೇಜ್ಮೆಂಟ್ ಕೂಡ ಇವರದೇ ಆಗಿರುತ್ತದೆ. ಟ್ರಾಫಿಕ್ ಸಿಗ್ನಲ್ ಹಾಕಿರುವ ಕ್ಯಾಮೆರಾ ಕೆಲಸವೂ BSNL ನೆಟ್ವರ್ಕ್ ನಿಂದ ನಡೆಯುತ್ತದೆ. ಇಂದಿನ ದಿನಗಳಲಿ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರಿಗೆ ಇಂಟರ್ನೆಟ್ ಬೇಕೇ ಬೇಕು. ಇವತ್ತು ಮೊಬೈಲ್ ಪೋನ್ ಇಲ್ಲದವರೇ ವಿರಳ. ಬೇರೆ ಬೇರೆ ಖಾಸಗಿ ದೂರ ಸಂಪರ್ಕ ಕಂಪನಿಗಳಿಗೆ BACK HAUL ಒದಗಿಸುವುದು BSNL ಇಲಾಖೆಯ ಕೆಲಸ. ದೂರಸಂಪರ್ಕ ಇಲಾಖೆಯ ಸೇವೆಯು ಆಮೋಘವಾದದ್ದು. BSNL ತಾಂತ್ರಿಕ ವರ್ಗವು ರಜೆ ಹಾಕದೆ ತನ್ನ ಕೆಲಸ ನಿರ್ವಹಿಸುತಿದೆ. ಇವರಿಗೆ ನನ್ನದೊಂದು ಸೆಲ್ಯೂಟ್!
-
ಏಪ್ರಿಲ್ 12, 2020.
ಗೋರಿಪಾಳ್ಯದ ಗಲ್ಲಿ-ಗಲ್ಲಿಗಳಲ್ಲಿ ಗದ್ದಲ ಗಪ್ಪಾಗಿದೆ...
(Caption ಓದಿರಿ)-
ಏಪ್ರಿಲ್ 2, 2020.
ಕೋವಿಡ್ - 19 , ಸೋಂಕಿತರ ಆರೈಕೆ ಮಾಡುವ ನರ್ಸ್ ಗಳು, ಆಶಾ ಕಾರ್ಯಕರ್ತೆಯರಲ್ಲಿ ಕೆಲವರು ಸ್ವಯಂನಿರ್ಬಂಧ ಹೇರಿಕೊಂಡಿದ್ದಾರೆ..
(Caption ಓದಿರಿ)
-
ಏಪ್ರಿಲ್ 1, 2020.
ಯಾರೂ ಅರಿಯದ ನೇಗಿಲಯೋಗಿಯೇ
ಲೋಕಕೆ ಅನ್ನವನೀಯುವನೋ
ಹೆಸರನು ಬಯಸದೆ, ಅತಿಸುಖಗಳಿಸದೆ
ದುಡಿವನು ಗೌರವಗಾಶಿಸದೇ
ನೇಗಿಲ ಕುಲದೊಳಗಡಗಿದೆ ಕರ್ಮಾ,
ನೇಗಿಲ ಮೇಲೆಯೇ ನಿಂತಿದೆ ಧರ್ಮಾ
-ಕುವೆಂಪು
(Caption ಓದಿರಿ)
-