ಈ ಕಪಟನಾಟಕದ
ಪರಿಯೇತಕೆ ಕೇಶವ,
ನೂರು ಚೆಲುವೆಯರಿದ್ದರೂ
ನನ್ನ ನೆನೆಯುತ ನುಡಿಸು
ಮುರುಳಿಯ ಸಾಕೆನಗದೆ ಮಾಧವ!
ವೃಂದಾವನದ ಹೂವಬನದಲಿ
ನಿನ್ನ ಉಸಿರಿನ ಕಂಪಿದೆ,
ನೂರು ಸಖಿಯರ ನಗುವ ಮರೆಯಲಿ
ನನ್ನ ನೀ ಮರೆತಂತಿದೆ!
ನನ್ನ ಕಂಗಳ ಕೆಂಪು ಮಾಡುತ
ಮರುಳು ಮಾಡದಿರು ಮೋಹನ,
ನಿನ್ನ ಉಸಿರಿನ ಪರಿಯು ತಾಕಲು
ಮರೆತು ತೇಲ್ವುದು ಮೈ ಮನ!-
28 SEP 2020 AT 17:12
28 MAY 2021 AT 8:30
ಶ್ಯಾಮನ ಕಿರುಉಸಿರೂ
ತಾಗದ ಅದ್ಯಾವ
ಕಾಡುಬಿದಿರಿನ ಶಾಪವೋ,
ಅವಳು ದೂರಾದಂತೆಲ್ಲ
ಕೇಶವನ ಕೊಳಲೂ
ಸಹ ಉಸಿರುಗಟ್ಟುತ್ತದೆ!-
20 JUN 2020 AT 10:05
ಪ್ರೀತಿಸಿದವರು ಸಿಗಲೇ ಬೇಕೆಂದು ಎಲ್ಲಿ ಬರೆದಿದೆ?
ಹೃದಯದಿಂದ ಪ್ರೀತಿಸಿದ ಕೃಷ್ಣನಿಗೆ ಸಿಕ್ಕಿದಳೆ ರಾಧೇ?-
31 DEC 2019 AT 17:17
ಕೆಂದಾವರೆಯಂತಹ ನಿನ್ನಯ ಮೃದು
ಪಾದಗಳಿಂದೊಮ್ಮೆ ಎನ್ನಂತರಾತ್ಮವ
ಸೋಕಿಸಿ ಉಲ್ಲಸಿತಗೊಳಿಸಿಬಿಡು
ಘಾಸಿಗೊಂಡಿಹ ಈ ತನುಮನವ!-
16 MAY 2020 AT 19:13
ಭಾವದೆಲೆಯ ಸಂಪಿಗೆಯಂತೆ ನಿನ್ನ ಪ್ರೇಮದ ಘಮಲು..
ತೀರದ ಮಾತುಗಳಲ್ಲಿ ತುಂಬಿದೆ ನಿನ್ನೊಲವ ಅಮಲು!
ಮಾಧವನ ಹಾದಿಗೊಂದಷ್ಟು ಕಾಯುವಿಕೆಯ ಪದಗಳ ಅಲಂಕಾರ...
( In caption..)-
6 JAN 2020 AT 19:55
ನಿಸರ್ಗದೊಡಲಲಿ ಇಂದೋಕೋ
ಸಂಭ್ರಮವಂತೆ ನೋಡೆನ್ನ ಒಡೆಯ!
ನಿನ್ನಾಗಮನದ ಘಮಲು ಭೂರಮೆಯ
ಹಸಿರಿನಹುಲ್ಲಿಂದ ಹಿಡಿದು ಆಕಾಶದ
ಕನಕಾಂಬರಕೂ ತಾಕಿದೆಯಂತೆ!
ಹೂಗಳಿಂದೋಕೋ ಹುಚ್ಚೆದ್ದು
ನಲಿದಿವೆ ನಿನ್ನಾಮಂದಾರ ಪಾದವ ಸೋಕಲು!
ಸರ್ವಾತುರತೆಯಿಂದ ನಿನ್ನದೆ ದರುಶನಕೆ
ತನುಮನಗಳೆರೆಡು ತುದಿಗಾಲಲಿ ನಿಂತಿವೆ!-