ಕಿಟ್ಟಿ ಕಥೆ -17
ಕಿಟ್ಟಿ ತಂದೆ : ಲೋ ಮೂರ್ತಿ, ಈ ಕೊರೊನಾಗೆ ನಾನು
ಥ್ಯಾಂಕ್ಸ್ ಹೇಳಲೇಬೇಕು ಕಣೋ.
ಮೂರ್ತಿ : ಲೋ ನಿನಗೇನಾದ್ರೂ ತಲೆ ಕೆಟ್ಟಿದಿಯಾ?
ಕೊರೊನಾದಿಂದ ಎಷ್ಟೆಲ್ಲಾ
ಪ್ರೋಬ್ಲಂಮ್ಮಾ ಆಗಿದೆ ಅಂತದ್ರಲ್ಲಿ
ನೀನೂ....
ಕಿಟ್ಟಿ ತಂದೆ : ಲೋ ಪ್ರೋಬ್ಲಂಮ್ಮಾ ಆಗಿರೋದು
ನಿಜ. ಅದರ ಜೊತೆ ಒಳ್ಳೆಯದು ಆಗಿದೆ
ಕಣೋ.
ಮೂರ್ತಿ : ಅಂಥದ್ದೇನು ಒಳ್ಳೆಯದಾಗಿರೋದು
ನಿನಗೆ?
ಕಿಟ್ಟಿ ತಂದೆ : ನನ್ನ ಮಗ ಕಿಟ್ಟಿ ಸ್ಕೂಲೂ ಅಂದ್ರೆ ಸಾಕು
ಅಳ್ತಿದ್ದೊನು ಈಗ ಪ್ರತಿದಿನ ದೇವರ
ಹತ್ರ ಸ್ಕೂಲ್ ಬೇಗ ಶುರುವಾಗ್ಲಪ್ಪ
ಅಂತ ಬೇಡ್ಕೊಳ್ತಿದ್ದಾನೆ. ಇದಕ್ಕಿಂತ
ಒಳ್ಳೆಯದು ಬೇರೆದೇನಿದೆ ನನಗೆ.-
ಕಿಟ್ಟಿ ಕಥೆ -15
ರಾಕಿ : ಲೋ, ಕಿಟ್ಟಿ ಯಾಕೋ ಬೇಜಾರಲ್ಲಿದ್ದೀಯಾ?
ಅಪ್ಪ ಅಮ್ಮ ಏನಾದ್ರೂ ಅಂದ್ರಾ?
ಕಿಟ್ಟಿ : ಹೂಂ, ಕಣೋ. ಮೊದ್ಲೆಲ್ಲಾ ಮೊಬೈಲ್
ನೋಡುದ್ರೇ ಸಾಕು ಬೈತಿದ್ರು, ಅದಕ್ಕೆ
ಮೊಬೈಲ್ ನೋಡೊದನ್ನೆ ಬಿಟ್ಬಿಟ್ಟೆ. ಆದರೆ
ಇವಾಗ ಮೊಬೈಲ್ ನೋಡ್ತಿಲ್ಲಾ ಅಂತ
ಬೈತವ್ರೇ. ನಾನೇನ್ ಮಾಡಿದ್ರು ಬೈತಾನೇ
ಇರ್ತಾರೆ ಕಣೋ.
ರಾಕಿ : ಹೌದಾ!!! ಅಲ್ಲಾ ಯಾವಾಗ್ಲೂ ಮೊಬೈಲ್ನಲ್ಲೇ
ಮುಳುಗಿರ್ತಿದ್ದ ನೀನು, ಈ ಮೊಬೈಲ್
ನೋಡೋದ್ದನ್ನ ಯಾವಾಗಿಂದ ಬಿಟ್ಬಿಟ್ಟೆ?
ಕಿಟ್ಟಿ : ಓ ಅದಾ.. ಆನ್ಲೈನ್ ಕ್ಲಾಸ್ ಶುರುವಾದಗಿಂದ.-
ಕಿಟ್ಟಿ ಕಥೆ -9
ಪುಟ್ಟ : ಹುಟ್ಟು ಮತ್ತು ಸಾವಿಗೂ ಇರುವ ವ್ಯತ್ಯಾಸ
ಹೇಳು ಮಾಮ.
ಕಿಟ್ಟಿ : ವ್ಯತ್ಯಾಸ ಏನೂ ಇಲ್ಲಾ ಕಣೋ. ಹುಟ್ಟಿದಾಗ
ನಮಗೆ ಒಂದು ಹೆಸರಿಟ್ಟು ಖುಷಿಗೆ
ಎಲ್ಲರಿಗೂ ಊಟ ಹಾಕಿಸ್ತಾರೆ. ಸತ್ತಾಗ್ಲೂ
ಇಟ್ಟಿರು ಹೆಸ್ರನ್ನ ತೆಗೆದು ಶವ ಅಂತ ಕರೆದು
ತಿಥಿ ಮಾಡಿ ಎಲ್ಲರಿಗೂ ಊಟ ಹಾಕಿಸ್ತಾರೆ
ಅಷ್ಟೇ.-
ಕಟ್ಟಿ ಕಥೆ -11
ಮೇಸ್ಟ್ರು : ಪ್ರತಿಯೊಬ್ಬ ಮಕ್ಕಳ ಪಾಲಿಗೂ ತಂದೆನೇ
ಹೀರೋ. ಈ ಪ್ರಪಂಚದಲ್ಲಿರುವ ಅತ್ಯಂತ
ಗ್ರೇಟೆಸ್ಟ್ ವ್ಯಕ್ತಿ ಅಂದ್ರೆ ಅದು ಅಪ್ಪ.
ಕಿಟ್ಟಿ : ತಪ್ಪು ಸರಿ. ನಮ್ಮ್ ಅಪ್ಪನಿಂತ ಗ್ರೇಟೆಸ್ಟ್
ವ್ಯಕ್ತಿಯೊಬ್ಬರು ಇದ್ದಾರೆ ಸರ್.
ಮೇಸ್ಟ್ರು : ಹೌದಾ! ಯಾರಪ್ಪ ಅದು ಆ ಗ್ರೇಟೆಸ್ಟ್
ವ್ಯಕ್ತಿ.
ಕಿಟ್ಟಿ : ವಿಜಯ್ ಮಲ್ಯ ಸರ್. ನಮ್ಮಪ್ಪ
ಬ್ಯಾಂಕಿನಲ್ಲಿ ತೆಗ್ದಿರೋ ಐವತ್ತ್ ಸಾವಿರ
ಲೋನ್ ತೀರ್ಸೋಕ್ಕೋಸ್ಕರ ಹಗಲು
ರಾತ್ರಿ ಕಷ್ಟಪಟ್ಟು ದುಡಿತಾರೆ. ಆದ್ರೆ ಆ
ಮಲ್ಯ ಕೋಟಿ ಕೋಟಿ ಲೋನ್ ಇದ್ದ್ರು
ತಿರಿಸ್ದೆ ವಿದೇಶದಲ್ಲಿ ಆರಾಮಾಗಿದ್ದಾನೆ
ಅಂದ್ರೆ ಅವ್ನು ಎಲ್ಲರಿಗಿಂತ ಗ್ರೇಟ್ ಅಲ್ವಾ
ಸರ್.-
ಕಿಟ್ಟಿ ಕಥೆ -10
ಮೇಸ್ಟ್ರು: ಲೋ ಕಿಟ್ಟಿ, ನಮ್ಮ ಮುಖ್ಯಮಂತ್ರಿ ಯಾರು
ಹೇಳು ನೋಡೋಣ?
ಕಿಟ್ಟಿ : ಸುಜನ್, ಸರ್.
ಮೇಸ್ಟ್ರು: ಸುಜನ್ನಾ! ಅದ್ಯಾರೋ?
ಕಿಟ್ಟಿ : ಅಷ್ಟು ಗೊತ್ತಿಲ್ವಾ ಸರ್. ಏಳನೇ ಕ್ಲಾಸ್
ಸುಜನಣ್ಣ. ನಮ್ಮ್ ಸ್ಕೂಲ್
ಮುಖ್ಯಮಂತ್ರಿ ಅವ್ನೇ ಸರ್.-
ಕಿಟ್ಟಿ ಕಥೆ -8
ಪುಟ್ಟ : ನೀರಾವರಿ ಸಚಿವನಿಗೂ ಮತ್ತು ಅಬಕಾರಿ
ಸಚಿವನಿಗೂ ಇರೋ ವ್ಯತ್ಯಾಸ ಏನು
ಮಾಮ?
ಕಿಟ್ಟಿ : ಒಬ್ಬರು ಬಾಟಲಿ ತುಂಬಿಸಿದ್ರೆ,
ಇನ್ನೊಬ್ಬರು ಬಾಟಲಿ ಖಾಲಿ ಮಾಡಿಸ್ತಾರೆ
ಅಷ್ಟೇ ವ್ಯತ್ಯಾಸ ಕಣೋ.-
ಕಿಟ್ಟಿ ಕಥೆ -18
ರಾಜು : ಲೋ ಕಿಟ್ಟಿ, ನಿಂಗೆ ಹತ್ತು ಲಕ್ಷ ಲಾಟರಿ
ಹೊಡೆದರೆ ಏನೋ ಮಾಡ್ತೀಯಾ?
ಕಿಟ್ಟಿ : ಸುಮ್ನಿರೋ ನಮಗೆಲ್ಲಾ ಯಾವ ಲಾಟರಿ
ಹೊಡೆಯುತ್ತೋ.
ರಾಜು : ಅಕಸ್ಮಾತ್ ಹೊಡೆದರೆ ಏನೋ
ಮಾಡ್ತೀಯಾ?
ಕಿಟ್ಟಿ : ಅದರಲ್ಲಿ ಅರ್ಧ ನಿನಗೆ ಕೊಡ್ತಿನೋ.
ರಾಜು : ಥ್ಯಾಂಕ್ಯೂ ಕಣೋ ನನ್ನ ಮೇಲೆ ಇಷ್ಟೊಂದು
ಪ್ರೀತಿ ಇಟ್ಟಿರೋದಿಕ್ಕೆ. ನಿನ್ನಂಥ ಫ್ರೆಂಡ್ಗೇ
ಏನ್ ಕೊಟ್ಟರು ಕಡಿಮೆನೇ.
ಕಿಟ್ಟಿ : ಅದೆಲ್ಲಾ ಏನೂ ಬೇಡ ಮೊನ್ನೆ ತಗೊಂಡ
ಐನೂರುಪಾಯಿನ ಮೊದ್ಲು ವಾಪಾಸ್
ಕೊಡು ಸಾಕು.-
ಕಿಟ್ಟಿ ಕಥೆ -16
ಕಿಟ್ಟಿ : ಹೇ ಬಾಯ್ ಕಣೋ ರಾಕಿ. ನಾಳೆ ನಾನು
ನಮ್ಮ ಅಜ್ಜಿ ಊರಿಗೆ ಹೋಗ್ತಿದ್ದೀನಿ.
ರಾಕಿ : ಅಜ್ಜಿ ಊರ್ಗಾ!!?!! ಲೋ ಅಲ್ಲಿಗೆ
ಹೋಗೋಕೆ ನಿನಗೆ ಇಷ್ಟ ಇರಲಿಲ್ಲ ಅಲ್ವಾ?
ಯಾವ ರಜೇಲೂ ನೀನು ಅಲ್ಲಿಗೆ ಹೋಗ್ತಾನೆ
ಇರಲಿಲ್ಲ.
ಕಿಟ್ಟಿ : ಆವಾಗೆಲ್ಲಾ ಆನ್ಲೈನ್ ಕ್ಲಾಸ್ ಇರಲಿಲ್ವಲ್ಲೋ.
ರಾಕಿ : ಆನ್ಲೈನ್ ಕ್ಲಾಸ್ಗೂ ಊರಿಗೆ ಹೋಗೋಕು
ಏನೋ ಸಂಬಂಧ?
ಕಿಟ್ಟಿ : ಅಷ್ಟು ಗೊತ್ತಾಗಲಿಲ್ವೇನೋ? ನಮ್ಮ ಅಜ್ಜಿ
ಊರಲ್ಲಿ ನೆಟ್ ವರ್ಕ್ ಸಿಗಲ್ಲ.-
ಕಿಟ್ಟಿ ಕಥೆ -14
ಅಮ್ಮ : ರೀ, ಕೊರೊನಾ ವೈರಸ್ ಬಂದಾಗಿಂದ ಕಿಟ್ಟಿ
ಗಲಾಟೆ ಕಡಿಮೆಯಾಗಿದೆ. ಅಕ್ಕ ಪಕ್ಕದ
ಮನೆಯವರ್ಯಾರು ಅವನ ಬಗ್ಗೆ ಈಗ
ಕಂಪ್ಲೇಂಟೇ ಮಾಡ್ತಿಲ್ಲ.
ಅಪ್ಪ : ಹೌದೇನೋ ಕಿಟ್ಟಿ? ಅಷ್ಟೊಂದು ಒಳ್ಳೆ
ಬುದ್ಧಿ ಬಂದಿದಿಯಾ ನನ್ನ ಮಗನಿಗೆ! ಗುಡ್.
ಕಿಟ್ಟಿ : ಇದರಲ್ಲಿ ನಂದೇನು ಇಲ್ಲಾ ಅಪ್ಪ. ಎಲ್ಲಾ
ಕ್ರೇಡಿಟ್ಟು ಮಾಸ್ಕ್ ಗೆ ಹೋಗ್ಬೇಕು.
-
ಕಿಟ್ಟಿಗೆ ಇವತ್ತು ಎಷ್ಟು ಹೊತ್ತಾದರು ನಿದ್ರೆನೇ ಬರುತ್ತಿಲ್ಲ. ಆ ಕಡೆಯಿಂದ ಈ ಕಡೆ ಹರಿದ ಚಾಪೆ ಮೇಲೆ ಉರುಳಾಡುತ್ತಿದ್ದ. ಅವನ ನಿದ್ರೆ ಕದ್ದಿದ್ದು ಹರಿದ ಚಾಪೆ ಅಲ್ಲಾ. ಅಥವಾ ಅರೆ ಹೊಟ್ಟೆಯ ಹಸಿವು ಅಲ್ಲ. ನಾಳೆ ಬೆಳಿಗ್ಗೆ ಅದು ಯಾರು ಅವನ ನೆಚ್ಚಿನ ಚಿತ್ರಾನ್ನವನ್ನ ಹಂಚುತ್ತಾರೆಂದು ಅವನ ಪಕ್ಕದ ಜೋಪಡಿಯ ಪುಟ್ಟ ಹೇಳಿದ್ದ. ಅದರ ಕನವರಿಕೆ ಅವನ ನಿದ್ದೆ ಕೆಡಿಸಿತ್ತು. ಕಿಟ್ಟಿ ಆದಷ್ಟು ಬೇಗ ನಿದ್ದೆ ಹತ್ತಿ, ಬೆಳಕು ಬೇಗ ಹರಿಯಲಿಯೆಂದು ದೇವರನ್ನು ಬೇಡುತ್ತಾ ಕಣ್ಮುಚ್ಚಿ ಮಲಗಲು ಪ್ರಯತ್ನಿಸುತ್ತಿದ್ದಾನೆ.
-