The First Meet
[Read the Caption]-
1 MAR 2018 AT 19:32
ಜೇನು ದುಂಬಿಯು ಹೂವಿನ ಮಕರಂದವ ಹೀರುತ ಹೇಳುತಿದೆ,
ಮುಂಜಾನೆಯ ಮಂಜು ತಂಪಾಗಿ ಸೂಸಿ ಹೇಳುತಿದೆ,
ಸಂಜೆಯ ಸವಿ ಗಾಳಿಯು ಇಂಪಾಗಿ ಹೇಳುತಿದೆ,
ಇಂದಿನ ದಿನ ಸೊಗಸಾಗಿದೆ ಎಂದು
ಕೋಗಿಲೆಯು ಇಂಪಾಗಿ ದ್ವನಿಗೂಡಿದೆ,
ನವಿಲು ಕುಣಿದು ಕುಪ್ಪಳಿಸಿದೆ,
ಪ್ರಕೃತಿಯು ಸಾರಿ ಸಾರಿ ಹೇಳುತಿದೆ,
ಗಿಡಮರಗಳು ಉಸಿರೊಡೆದಿವೆ
ಇಂದೇನೋ ವಿಶೇಷವೆಂದು
ಎಲ್ಲೆಂದರಲ್ಲಿ ಸಾರುತಿದೆ
ಇಂದು ನನ್ನಣ್ಣನ ಜನುಮದಿನವೆಂದು ,
ನಾ ಆಶಿಸುವೆ ನೀವು ನೂರ್ಕಾಲ ನಗುನಗುತ ಇರಲೆಂದು
ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ
-