QUOTES ON #LAXMIRAVINDRANATH

#laxmiravindranath quotes

Trending | Latest
29 JUL 2023 AT 21:24

ಮನವೆಂಬೊ ಹೊಲದಲ್ಲಿ
ಆತ್ಮವೆಂಬೊ ಮಣ್ಣಲ್ಲಿ
ಭಕುತಿಯ ಬೀಜ ಬಿತ್ತಿ
ಸತ್ಸಂಗದ ಉದಕವನೆರೆದು
ಮೋಹವೆಂಬೊ ಕಳೆ ಕಿತ್ತಿ
ನಿರ್ಲಿಪ್ತಭಾವದ ಗೊಬ್ಬರವ ಹಾಕಿದರೆ
ಸಾಕ್ಷಾತ್ಕಾರದ ಹೂವರಳಿ
ಮೋಕ್ಷದ ಗಂಧವ ಬೀರದಿರುವುದೆ..!?

-


4 OCT 2023 AT 20:13

ಆರು ತಿಂಗಳ ಕಂದಮ್ಮನ ತೊದಲುನುಡಿ
ಅರವತ್ತರ ಮುದಿಯಜ್ಜಿಯ ಅರೆಮರೆವಿನನುಡಿ
ಎರಡು ನುಡಿ ಬೇರಾದರು ಮುಗ್ಧತೆ ಒಂದೆ

-


30 JAN 2024 AT 15:13

ಧಮನಿಯ ದನಿಯಾನಿಸಿ
ಗರ್ವವ ದಹಿಸಿ
ಪೂರ್ಣತೆಯ ಪರಿಭಾಷೆಯ
ಮನನಿಸುವುದೆ ನಿರ್ಲಿಪ್ತತೆ

-


26 JUN 2023 AT 20:40

ಹೇಳದೆ ಹೂತಿಟ್ಟ ಭಾವನೆಗಳ, ಹಂಚದೆ ಮುಚ್ಚಿಟ್ಟ ಖುಷಿಗಳ, ನಾವರಿತ ಜೀವನ ಸಾರಕ್ಕು ಅಕ್ಷರಾರ್ಥ ಕೊಡುವುದು ಪದ್ಯಗಳೆ!!

-


19 JAN 2024 AT 22:10

ಬದುಕಿನ ತೇರೊಂದು ಹೊಳೆಯುವ ನಕ್ಷತ್ರವ
ಅಲಂಕರಿಸಿಗೊಂಡು ಮಿಂಚುತಿದೆ ರಾತ್ರಿ ಹಗಲು..
ಬೆಚ್ಚಗೆ ಅನುರಾಗದೊಳು ಅವಿತ ಅಪೂರ್ಣಮನ
ಹಪಹಪಿಸುತಿದೆ ನಿನ್ನೊಲವ ಕುಂಚದ ವರ್ಣದೊಳು ಒಂದಾಗಲು..
ನನ್ನೊಳಗಿನ ನಿನ್ನ ಹೆಕ್ಕಿ ಹಾರಿಸುವುದು
ಸೃಷ್ಟಿಯೊಳಗೊಂದಾದ ಪ್ರೇಮಾಂಕುರದ ಸಂಜ್ಞೆಯ ಉಯಿಲು..

-


31 JUL 2023 AT 21:01

ಇರುಳುರುಳಿ ಅರಳುವ ಕಾನನ
ಕೊಯಾಲಾಟವಾಡಿ ಜಿನುಗುವ ಕವನ
ತಂಬೆಲರ ಜೋಗುಳಕ್ಕಾಗಿ ಕಾಯ್ವ ಮನ
ಗರಿಗೆದರಿ ಹೊಮ್ಮಿಸುವುದು ಮಯೂರನರ್ತನ

-


5 JUN 2023 AT 22:03

ಮೋಡದ ಹಿಂದೆ ಮರೆಯಾಗುವ ಭಾಸ್ಕರ
ತುಸು ನಸುಗಂಪಿನ ಕಿರಣ ಬೀರುವ ಚಾಮರ
ತುಂತುರು ಸುರಿಸುವ ಮೇಘರಾಜನ ಆಲಿಂಗನ
ಉರಿ ಕಾರುವ ನೇಸರನಿಗು ತಂಪಿನ ಅಭ್ಯುಂಜನ
ನವೋಲ್ಲಾಸದಿ ಕಂಗೊಳಿಸುವ ಪ್ರಕೃತಿಮಾಯಿ
ಸರ್ವಶಕ್ತಳಾದರು ಪ್ರೀತಿ ಸೂಸುವ ಕರುಣಾಮಯಿ

-


9 JAN 2024 AT 10:31

ಮುಳುಗದಿರು ನೀ ರವಿಯೇ
ನೀನಿದ್ದಾಗ ಕಾಣದ ಭಾದೆಗಳು
ನೀ ಕಣ್ಮರೆಯಾಗುತ್ತಲೆ
ಶತ್ರುವಿನ ರೂಪತಾಳಿ
ನಿದಿರೆಯ ನೂಕಿ ಅಟ್ಟಹಾಸದಿ
ನಲಿಯುತಿಹವು

-


2 OCT 2023 AT 11:45

ನಿನ್ನ ನೆನಪಿನ ಮಳೆಯಲಿ ತೊಯ್ದ
ಅಪ್ಪುಗೆಯ ಕ್ಷಣಗಳ ಓಡಾಟದ ಪರಿಗೆ
ಬಿಸಿಯಿಂದ ಕಾವೆರಿದ ಪ್ರೇಮಯಾನದಿ
ಶೀರ್ಷಿಕೆಯಿಲ್ಲದ ಅಪರೂಪದ ಪದ್ಯವೊಂದು
ಕಾಣದ ಕನಸಿನಂತೆ ಮಿಂಚಿ ಮರೆಯಾಗುತಿಹುದು

-


24 SEP 2023 AT 18:47

ಆತ್ಮಸಂಗಾತಿಯ ಸಂಗಡ
ಆತ್ಮದೊಡೆಯನ
ಅನಂತರೂಪದ ದಿಸೆಯೆಡೆ ಸಾಗಬಯಸುತ್ತಿರುವವಳು ❤️

-