ನೀ ಯಾರು ನನಗೆ !?
ಅರಸದೆ ಬಂದ ಅದೃಷ್ಟವೋ?
ಒಲಿಯದೆ ಬಂದ ಉಡುಗೊರೆಯೋ?
ಮುಗಿಯದೆ ಉಳಿದ ಆಸೆಯೋ?
ಮರೆಯದೆ ಉಳಿದ ಬಂಧುವೋ?
ದಿನವೂ ಜರುಗುವ ಉತ್ಸವವೋ?
ನಗುವನಿತ್ತು ಅಪ್ಪಿಕೊಳ್ಳುವ ಸಂಭ್ರಮವೋ?
ಬದುಕಿನ ಗದ್ಯದ ಶೀರ್ಷಿಕೆಯೋ?
ಒಲವಿನ ಪದ್ಯದ ಪರಿವಿಡಿಯೋ?
ನೀ ಯಾರು ನನಗೆ?
ನೀ ಯಾರು ನನಗೆ?-
Why are thoughts so loud
Why are thoughts so loud!?
has always been a quiet thought in my consciousness..
In little naive I learnt people are always unfair to you ,
Either you gave beautiful love or unbeatable time they always judge you as their needs .
It feels like heart is bleeding while thinking of themselves and
If we screem for mental peace it will disturb others
Loud thoughts taught me to love and hug the quietness of our life-
ಬದುಕಿನ ಎಲ್ಲ ಸಂಕಲನಕು
ನಿನ್ನ ನಾಮಪದದ ಸಾರವಿರೆ
ಯಾಕೆ ಬೇಕು ಇತರೆ ಸಂಗತಿ
ಇರುವಾಗ ನಿನ್ನಂತಹ ಸಂಗಾತಿ-
As the sky slowly darkens and the sun dips below the horizon , there is an unbeatable beauty and peace that fills the heart ..
That natural painting in the sky helps to unlock the inner peace
In the shade of goldish sun
I find myself-
ಒಲವೆಂದರೆ ಒಬ್ಬರನ್ನೊಬ್ಬರು
ಬರಿ ಅರಿಯುವಂತದಲ್ಲ
ವರುಷಗಳ ಸಾಂಗತ್ಯವು ಅಲ್ಲ
ಸಂಬಂಧಗಳ ಕಟ್ಟುಪಾಡಿನ ಚೌಕಟ್ಟಂತು ಅಲ್ಲವೇ ಅಲ್ಲ
ಒಲವೆಂದರೆ ಒಬ್ಬರಿಗೊಬ್ಬರ
ಅಪ್ಪುಗೆಯ ಪ್ರೇಮವಲ್ಲ
ವಿಚಿತ್ರ ವೇದನೆಯ ಉನ್ಮಾದವು ಅಲ್ಲ
ಹೊಂದಾಣಿಕೆಯ ಹೆಸರಿನ ಸಹಿಸುವಿಕೆಯಂತು ಅಲ್ಲವೇ ಅಲ್ಲ
ಒಲವೊಂದು ಸಂವಹನವಿರದ ಭಾಷೆ!!
ಸದ್ದಿಲ್ಲದೆ ಸಂಭವಿಸುವ ಛಾಯೆ!!-
ಹರೆಯ ವಯಸ್ಸಿನ ಮಿತಿಯೊಳಗೆ ಮುಂಜಾವಿನಿಂದ ಸಂಜೆಯವರೆಗು ಎಡಬಿಡದೆ ಓಡುವ ಗಡಿಯಾರದ ಗುಲಾಮರಾಗಿ ಘಳಿಗೆಯ ಕಳೆಯುವಾಗ ಬದುಕು ತನ್ನನ್ನೇ ವಿಮರ್ಶಿಸಿಕೊಳ್ಳದೆ ಓಡುತ್ತಿರುತ್ತದೆ.
ವರುಷಗಳು ಕಳೆದು ಮುಂದೊಂದಿನ ಮನದಲ್ಲಿನ ತಳಮಳ ಜ್ಞಾಪಿಸಬಹುದು ನೀನು ಬದುಕಿದ ಬದುಕು ಹಗಲಿರುಳಿನ ಅರ್ಥವಿರದ ನಿರಂತರ ಓಟವೆಂದು..
ಜೀವನದ ರೈಲು ಬಂಡಿಯಲ್ಲಿ ಪಯಣಿಸುವಾಗಲೇ ಬದುಕಿನ ಮೌಲ್ಯಗಳು ಮತ್ತು ಬದುಕಿದ ಶೈಲಿಯ ಅರಿವು ನಮಗಿದ್ದರೆ ಊಹಾಪೋಹಗಳಿಂದ ಭವಿಷ್ಯ ಬರಡಾಗದು..-
In the darkest corners , there is always voice
That mutters by adjusting it's tone
No Teacher,No parent, No friend or No companion can decide
What's right for you!!
In the era of faultfinder , Be at your own tranquil state
Choosing responding is far better than Reacting to challenges as catalysts
Accept what really unfolds around you
Be the crown of your life !!
-
ಓ ನೆಮ್ಮದಿಯೇ!!
ಕಣ್ಣೆದುರು ಸಾವಿರ ದಾರಿಗಳ ಹಾಸಿಗೆ ಹಾಸಿಬಿಟ್ಟೆ
ಒಂದರ ಹಿಂದೆ ಸಾವಿರ ಮೈಲಿಗಳ ಹೆಜ್ಜೆ ಹಾಕಿಸಿಬಿಟ್ಟೆ
ಪದವಿ ಪಡೆದು ನೌಕರಿಯ ಗಿಟ್ಟಿಸಿಕೊಂಡುಬಿಟ್ಟೆ
ಪೈಸೆ ಪೈಸೆ ಕೂಡಿಟ್ಟು ಮನೆ ಕಾರು ಗಳಿಸಿಕೊಂಡುಬಿಟ್ಟೆ
ನಂತರವು ಅನುಭವಿಸಲಾಗದ ಅನುಭೂತಿಯಾಗಿಬಿಟ್ಟೆ
ಮೋಹಮಾಯಗಳ ಅಂತರವರಿಯುವ ಅರಿವನ್ನೇ ನುಂಗಿಬಿಟ್ಟೆ
ಸುಖದ ನೆರಳಡಿ ವೈರಾಗ್ಯ ಮರೆವ ಶಾಪ ಹಾಕಿಬಿಟ್ಟೆ
ಗಳಿಸಿದ್ದೆಲ್ಲ ಕಳೆದು ಹೋಗುವದೆಂಬ ಪಾಠವ ಮರೆಸಿಬಿಟ್ಟೆ
ಪ್ರಶ್ನೆಗಳ ಉತ್ತರವರಸಿ ಅಲೆಯುವದ ಇಲ್ಲವಾಗಿಸಿಬಿಟ್ಟೆ
ಕಡೆಗೂ ಭಗವಂತನ ಮರೆತ ಮರುಳನಾಗಿಸಿಬಿಟ್ಟೆ-
ನಿನ್ನ ಜೊತೆ ಹೆಜ್ಜೆ ಹಾಕಿದ ಕರ್ಮ
ಕೈ ಕುಲುಕಿ ಸನಿಹವ ಸರಿಸಿ ಮುನ್ನಡೆದು
ಜಗವೆಲ್ಲವ ಅಳೆದು ಮೌನ ಮುರಿದು
ನಿನ್ನೊಂದಿನ ಸಾಂಗತ್ಯವ ಮರೆಯದೆ
ನಿನ್ನನ್ನೇ ಅರಸಿ ಬಾಗಿಲು ತಟ್ಟಿದ ದಿನ
ನಿನ್ನಂತರಾತ್ಮ ಅದೇ ಕರ್ಮವ
ಸ್ವಾಗತಿಸಿ ಸಂತೈಸಲು ಮರುಗದಿರಲಿ
-