ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆ
ಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ....-
ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....
ಆದರೆ
ಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು-
ಹಾಕದಿರೂ.. ಕೈಯನ್ನು ಬಲವಂತವಾಗಿ ಹೆಣ್ಣಿನ ಸೆರಗಿಗೆ,
ಮರೆಯದಿರು ಒಂದು ಹೆಣ್ಣೇ.... ಕಾರಣ ನಿನ್ನ ದೇಹದಲ್ಲಿರುವ ಉಸಿರಿಗೆ-
ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲು
ಈಗಲೂ ಶಿಕ್ಷೆಯೇತಕೆ ಅರಿಯೆ ನಾ.......
ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು-
ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..
ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ....-
ನಮ್ಮ ನಿಜವಾದ ಅಭಿಮಾನಿ ಯಾರೆಂದರೆ
ಅದು ನಮ್ಮ
ಮಾತ್ರ.....
ಏಕೆಂದರೆ
ಅದೊಂದೇ ನಮ್ಮನ್ನು ಹುಟ್ಟಿನಿಂದ ಸಾಯುವವರೆಗೂ FOLLOW ಮಾಡುತ್ತಲೇ ಇರುತ್ತದೆ...-
ಪ್ರಶ್ನೆಗಳ ರುದ್ರಭೂಮಿಯಲ್ಲಿ ಉತ್ತರಗಳೆಲ್ಲ ಮೌನದಿ ಚಿರನಿದ್ರೆಗೆ ಜಾರಿರಲು...
ಹುಡುಕಲು ಹೋದಷ್ಟು ಉತ್ತರವೆಂಬ ಪಳೆಯುಳಿಕೆಗಳು ಮಾತ್ರ ದೊರೆಯುವುದೇ ಹೊರತು, ಜೀವಂತ ಕುರುಹುಗಳಲ್ಲ...-
ನಿನ್ನನ್ನು
ನಿಷ್ಪ್ರಯೋಜಕ ನೆಂದು ದೂರುವ ಜನರ ನಡುವೆ ಬದುಕುವುದು ಹೇಗೆ...?
ಶ್ರಮದಿ ದುಡಿದು ಬದುಕಿ ತೋರಿಸು ನಿನ್ನತ್ತ ಬೆರಳು ತೋರಿಸದ ಹಾಗೆ.....-
ಆದಿ ಅಂತ್ಯದ ನಡುವೆ ಅಹಂಕಾರವೇಕೆ,
ಮರಳಿಬಾರರೂ ಕಳೆದು ಹೋದವರು ಒಂಟಿತನವೇ ನಿನಗೆ ಶಿಕ್ಷೆ........-
ಪ್ರತಿನಿತ್ಯ ಕನಸಿನ ಪರದೆಯಲ್ಲಿ ಕಾಡುವ ಜಾಹೀರಾತಿನಂತೆ.
ಮನಸ್ಸು ಹಾತೊರೆಯುತ್ತಿದೆ ನಿನ್ನ ನಿರೀಕ್ಷೆಯ ಕುರಿತಾಗಿ....
ಹುಚ್ಚನಂತೆ-