ಪರಿಣಯದ ಕಲ್ಪನೆ
ಮನಹೊಕ್ಕಿದಂದಿನಿಂದ
ಲಯ ತಪ್ಪಿದ ಹೃದಯ,
ಮರಳಿ ತಹಬದಿಗೆ ಬರುವುದು
ಪರಿಣಯದ ಹೊಸ್ತಿಲಲ್ಲಿ ನಿಂತಾಗಲೆ.
ನನ್ನ ಮತ್ತೆ ಮತ್ತೆ ಬೀಳುವಂತೆ
ಮಾಡಲೆಂದೆ ನಿನ್ನ ಸ್ವಪ್ನಗಳು ನನ್ನ
ಅಟ್ಟಿಸಿಕೊಂಡು ಬಂದು ಕಾಡುವುದು,
ನೀ ಬಂದು ನುಡಿಸಲೆಂದೇ ಮನದ ವೀಣೆ
ತಾಳ ಮರೆತು ನುಡಿಯುವುದು,
ಎಂದಿಗೆ ನಿನ್ನಾಗಮನ ನನ್ನ ಬಾಳಲಿ,
ಎಂದಿಗೆ ಬಂಧಿಯಾಗುವುದು
ನಾ ನಿನ್ನ ತೋಳಲಿ...-
ನಗುವ ನಯನ ಮಧುರ ಮೌನದ
ಅದೆ ಹಳೆ gramaphone
ಗಾನ ಕೇಳಿ ಮತ್ತೆಮತ್ತೆ
ನಿನ್ಮೇಲೆ ಹೊಸತಾಗಿ love ಆದಂತೆ,
ಮೇಘಸಂದೇಶವೊಂದು ಮನದಲ್ಲೆ
ರವಾನೆಯಾದಂತೆ,
ಚಿಗಿತ ಮೊಗ್ಗೊಂದು ಭಾಸ್ಕರನುದಯಕ್ಕೆ
ಕಾದುಕುಳಿತಂತೆ,
ಪ್ರೇಮವೊಂದು ತೇಯ್ದು ಘಮಿಸುವ
ಗಂಧವಂತೆ,
featureಸೆ ಇಲ್ಲದ literaturರೊಂದು
ಒಲವಕಾವ್ಯವಾದಂತೆ,
ನಿನ್ನಾಗಮನದಂದು ಬದುಕೆನಗೆ ಮರಳಿ
ದಕ್ಕಿದಂತೆ ।-
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಎಂದು ನೀ ನನ್ನೆದುರು
ನುಡಿದಾಗೆಲ್ಲ, ನಿನ್ನ
ಮುಂಗುರುಳ ನೋಟಕ್ಕೆ
ಎದೆಯಲ್ಲಿ ಹಿಮ ಸುರಿದ
ಹವಾಮಾನ,
ನೀ ನನ್ನ ಒಲವೆನ್ನುವುದೇ
ನನಗೆ ಬಿಗುಮಾನ,
ಸ್ವಪ್ನದಿಂದೆಚ್ಚರವಾದಾಗ
ಕಾಡುವ ಮತ್ತದೇ ಹಳೆ
gramaphone ಗಾನ ।-
ಜೀವ ಹೂವಾಗಿದೆ
ಭಾವ ಜೇನಾಗಿದೆ with ಮಳೆಯಲಿ,
ಅದೆ ಹಳೆ gramaphone
ಗಾನದ ಜೊತೆಯಲಿ,
ತೊಟ್ಟಿಕ್ಕುವ ಹನಿಗಳೊಂದಿಗೆ
ಚಿಗುರೆಲೆಗಳ ಪ್ರಣಯ,
ಬಾನಾಡಿಯಾದ ಭಾವಗಳೊಳಗೆ
ಮಿಂದ ಒಲವು ಭವ್ಯ,
ದುಂಬಿಯೊಡನಾಟದ ಹೂವೊಂದು
ಗೀಚಿತಂತೆ ಪ್ರೇಮಕಾವ್ಯ ।-
ಎಂದೋ ತುಂಡಾದ ತಂತಿಯಲಿ
ಮತ್ತದೇ ರಾಗ ಹೊಮ್ಮುವುದೇ ?
ಬೆಸೆದ ತಂತುಗಳಲಿ ಝೇಂಕರಿಸಿದ
ರಾಗಗಳಲಿ ನಿನ್ನ ಛಾಯೆ ಇರಬಹುದೇ ?
ನೀ ಮೀಟಿದ ಮಧುರ ರಾಗವದು
ಮತ್ತೊಮ್ಮೆ ಹೊಮ್ಮುವುದೇ.!?-
ಇನ್ನೂ ನಿನ್ನಾಸೆ ನನ್ನಾಸೆ ಒಂದೆ
ಎಂದೂ ನಾವಾಡೊ ಮಾತೆಲ್ಲ ಒಂದೆ,
ಮತ್ತದೇ gramophoneಗಾನ
ಕೇಳುವಾಗ ಕಾಡುವುದಿಷ್ಟೇ...
ಕಣ್ಣಬಿಂದುಗಳಿಗಷ್ಟೆ
ಸಖನಾಗಲು ನೀ ಬಂದೆಯ,
ಅಂದು ಜೊತೆಯಾಗಿ
ಹೆಜ್ಜೆ ಬೆಸೆಯುತ್ತಾ ನೀಡಿದ
ವಾಗ್ದಾನಗಳೆಲ್ಲ, ಬರಿಯ
ಮಾತುಗಳಾಗಷ್ಟೆ ಉಳಿದಿದ್ದಾರು
ಏಕೆ ಗೆಳೆಯ !?
ನೀ ನನ್ನ ಪ್ರೇಮಿಸಿದೆ ಎಂಬುದು
ನನ್ನ ಕಲ್ಪನೆಯ ಕಾವ್ಯವಾಗೆ
ಉಳಿದುಬಿಡುವುದು ಸರಿಯ..?-
ಬಾಕಿಯಿರುವ ಆಡದ ಮಾತುಕತೆ,
ಕಣ್ಣಳತೆ ಮೀರಿದ ಸಾಗುವ ಹಾದಿ,
ಯುಗ ಯುಗಗಳೆ ಸಾಗಲಿ
ನಮ್ಮ ಪ್ರೇಮ ಶಾಶ್ವತ ಎಂದು,
ನಮ್ಮೊಲವ ಯುಗಳಗೀತೆ
ಉಸುರುವ ಅದೆ ಹಳೆ
gramophone ಗಾನ,
ಜೊತೆಗೆ ನಿನ್ನಾಗಮನಕೆ
ಕಾಯುತ್ತಿರುವ ಮನ ।-
ಇಲ್ಲೆ ಇಲ್ಲೆ ಎಲ್ಲೊ
ನೀ ನನ್ನೆ ಕೂಗಿ ಕರೆದಂತೆ,
ರಾತ್ರಿಯ ಕಡುಗಪ್ಪು
ಹೊದಿಕೆಗೆ ಚುಕ್ಕೆಗಳ
ರಂಗೋಲಿಯ ಮುತ್ತಲೆ
ಬರೆದಂತೆ,
ನಭದಡಿ ನಿಂತು ನಿನ್ನೆನಪ
ಹೊಳಪು ಫಳಫಳಿಸುವಾಗ
ಆಕಾಶ ದೀಪವು ನೀನು,
ನಿನ್ನ ಕಂಡಾಗ ಸಂತೋಷವೇನು
ಎಂಬ ಹಾಡೊಂದು
ಅನಾಯಾಸವಾಗಿ ನನ್ನುಸಿರಲೆ
ತೇಲಿ ಬಂದಂತೆ, ಮತ್ತದೇ
ಹಳೆ gramophoneಗಾನಕ್ಕೆ
ಜೊತೆಯಾದ ನೀನು
ಹಿತವಾದ ಜೇನು ।-
ಮುಂಗುರುಳ ಸರಿಸುವ
ನೆಪದಲಿ
ಶೃಂಗಾರಕೆ ಕರೆದಂತೆ,
ನೊಸಲಿನ ಸಿಂಧೂರ
ತುಸು ಜಾರಿದಂತೆ,
ಮಲ್ಲಿಗೆ ಹಿಂಡು
ಮುಡಿಸೇರಿ ಘಮಿಸಿದಂತೆ,
ಕಾಲ್ಗೆಜ್ಜೆಯ ಸುಪ್ರಭಾತಕೆ
ಲಜ್ಜೆಯ ರಂಗೋಲಿ,
ಕೊರಳ ದನಿಯಿಲ್ಲಿ
ಕರಿಮಣಿಯ ದಣಿ,
'ಸಂಗಾತಿ ನಿನ್ನ ಸಂಪ್ರೀತಿಯಲ್ಲಿ'
ಗುನುಗುವ gramophoneಗಾನದ
ಗಮಕಗಳು ಅವಳಧರಗಳ
ರಂಗಾದ ಬಣ್ಣದಲ್ಲಿ...— % &-
ಆ ನಿನ್ನ ನಗುವೆ ವರದಾನ
ಈ ನಿನ್ನ ಸ್ಪರ್ಶ ವರಮಾನ,
ನೀ ಎಂದೆಂದಿಗೂ ನನ್ನೊಳಗೆ
ಅನುರಣಿಸುವ ಪ್ರೇಮಗಾನ,
ಚಲನೆಯಿದು ಜಗದ ನಿಯಮ
ಸೃಷ್ಟಿಯೆ ಬದಲಾದರು
ನೀನೆಂದಿಗೂ ನನ್ನೊಳಗೆ
ಸ್ಥಿರವಾದ 'ಅಭಿಜ್ಞಾನ ಸಖ'
ನಾ ನಿನಗಾಗಿ ಮತ್ತೆಮತ್ತೆ
ಅವಿರ್ಭವಿಸುವ 'ಆತ್ಮಸಖಿ'
ನಮ್ಮ ಈ ಬಂಧನ
ಇದು ಸುರ ಗಾಯನ,
ನೀ ಎನಗೆ ಮತ್ತದೇ ಕಾಡುವ
gramophone ಗಾನ !!-