ತೆರೆಯದ ಪುಸ್ತಕ ಆಗಿತ್ತು ನನ್ನ ಜೀವನ
ಮನೆ, ಫ್ಯಾಕ್ಟ್ರಿ, ಜಗಳ, ಇಡ್ಲಿ, ಸಿಗರೇಟ್, ಬಿಯರ್ ಪ್ರತಿದಿನ
ಒಡಹುಟ್ಟಿದವರು ಒಡನಾಡಿಯಲ್ಲ ಕಲಿಯುಗದಲಿ
ಬಯಸದೆ ಬಂದೆ ಖಾಲಿ ಪುಟದಲಿ
ರಂಗು ತುಂಬಿ ಚಲನೆ ಕೊಟ್ಟೆ ದಿನಚರಿಯಲ್ಲಿ
ಅವಕಾಶ ಸಿಕ್ಕಿತ್ತು ನನ್ನನ್ನು ನಾ ಕಾಣುವಲ್ಲಿ
ನಿಜವಾದ ಪ್ರೀತಿ ಸಿಕ್ಕಾಗ ಕೊನೆ ಪುಟಕ್ಕೆ ಬಂದೆ ನೀನು
ಶುಭಂ ಎಂದುಕೊಂಡಿದ್ದೆ ನನ್ನ ಕಥೆಯಲ್ಲಿ
ಹಿತವಾದ ಹಿನ್ನುಡಿ ಕಂಡೆ ನಿನ್ನ ಮಗುವಿನಲ್ಲಿ
ಕುತೂಹಲವು ಪ್ರತಿನಿತ್ಯ ನನ್ನಲ್ಲಿ
ಅಮರವಾಗಿಸಿದೆ ಪ್ರೀತಿ ಜಗದಲಿ
ನೆನಪು ಜೀವವಾಗಿರಲು ಜೀವಿಸಬೇಕು ನಿನ್ನಂತ ಜೀವ.
ಚಾರ್ಲಿ, ನಿನ್ನ ಹೆಸರಲ್ಲಿ ನಡೆಯಲಿ ಉಳಿಸಲು ನಿನ್ನಂತ ಜೀವ-
11 JUN 2022 AT 22:05