ನೀ ಬಿಟ್ಟು ಹೋದ ನೆನಪು
ಉರುಳಿ ಎರಡು ವರುಷವಾಯಿತು
ಇದ್ದಾತ ನೀನು ಬಿಟ್ಟುಹೋದೆ
ಇನ್ನುಳಿದವರು ಅಷ್ಟೇ, ಅಗತ್ಯಕ್ಕೆ
ನನ್ನವರು ಯಾರು ಮೌನವೇ?
ವಿರಾಗಿಯಾದೆ ಜಗದಲಿ
ಮಾತಾಡುವ ಮನ ಮೌನವಾಯಿತು.
-
ಎಲ್ಲೋ ಹೊರಟ ಹಾಗೆ
ತಿಳಿಯದೆ ನಂಗೆ ನಾನೆ
ತೆಲಿದೆ ಅಮಲಲಿ
ನೆನೆದಾಗ ನಿನ್ನನೇ
ಸೀರೆಲಿ ಬಂದೇಕೆ ನೀನು
ಮುಚ್ಚಲಿಲ್ಲ ನನ್ ಕಣ್ಣು
ಅಚ್ಚಾಗಿ ಉಳಿದೆ
ನೆನೆದ ಈ ಮನಕೆ
ಉಲ್ಲಾಸವೋ, ಉತ್ಸಾಹವೋ
ನಾ ಬಂದೆ ಹತ್ತಿರ
ಎಲ್ಲದಕ್ಕು ನೀನೀಗ ಉತ್ತರ-
ಚಂದಿರ ಮೊಗದ
ಅಂದದ ಗೊಂಬೆ!!!
ಸಣ್ಣ ಕೈ ಬೆರಳ ತಾಗಿ
ಮುಗುಳ್ನಗೆಗೆ ಕಾರಣವಾದೆ.
ತೋರಲಾಗದ ಹರ್ಷ
ನಲಿದಿದೆ ನನ್ನೊಳಗೆ
ತಂದೆಯಾದಾಗ ನಾನು.
ಎತ್ತಿ ಆಡಿಸುವ ಖುಷಿ
ಅಚ್ಚಾಗಿದೆ ನನ್ನೊಳಗೆ
ಅತ್ತು ಕರೆ ಮಾಡಲು
ಕೈಯ ಜೋಳಿಗೆ ಮೂಡಿತು
ತೂಗಿ ಮಲಗಿಸುವೆ
ನಿದ್ರೆಗೆ ಜಾರುವೆಯ ಜಾಣೆ?-
ಪುಟ್ಟ ಅಂಗಿ
ತೊಟ್ಟಳ ತಂಗಿ
ಗಿಲ ಗಿಲ ಗಿಲಕಿ
ತಂದಳ ಕಾಕಿ,
ಅಳು ನಿಂತಿತು
ನಿದ್ದೆ ಬಂದಿತು-
ಚಂದ ಮಾಮ ಓಡಿ ಬಂದನು
ನಾ ಊಟ ಮಾಡಲು
ಹಾಲು ಕುಡಿದು, ಊಟ ಮಾಡಿ
ನಾ ಮೈಯ ಮುರಿದು
ನಿದ್ದೆ ಮಾಡಲು
ಓಡಿ ಹೋದನು
ಕೆಲಸ ಮಾಡಲು.-
ಸಣ್ಣ ಕೈ ಬೆರಳು
ಅಪ್ಪಿದೆ ನನ್ನ ಬೆರಳು,
ಎಳೆದು ಕೇಳಿದೆ
ಎತ್ತಿ ಕೊಳ್ಳಲು
ಕೈಯ ತೊಟ್ಟಿಲು
ಆಡುತಿರಲು ಮಗಳು
ನೋಡಿ ನಲಿದಿದೆ
ಅಪ್ಪ-ಅಮ್ಮನ ಮನಗಳು.-
ದಸರೆಯ ಅಷ್ಟಮಿ
ಮನೆಗೆ ಬಂದಳು
ನಮ್ಮ ಕುವರಿ,
ತಂದಳು ಹರ್ಷ
ಖಾಲಿಯಾಗದು ಕಳೆದರು
ವರ್ಷ ವರ್ಷ.-
ಸಮಯವ ಕೂಡಿಸಿ
ಕೂತಿದೆ ಕಣ್ಣು ನೋಡಲು
ನಿನ್ನನ್ನೆ.
ಮನಸ್ಸು ಸೆರೆಹಿಡಿದ ಫೋಟೊ
ನೆನೆದ ದಿನವೆಲ್ಲ ಹೋಳಿ ಹಬ್ಬ
ಮನದಿಂದ ನಗುವ ಓ ರೂಪಿಸಿ
ನಿನ್ನ ಧ್ಯಾನಿಸುವುದೇ ನನ್ನೀ ಕೆಲಸ
ನೀ ಹತ್ತಿರ ವಿಹರಿಸಲು
ಎದೆ ಬಡಿತ ಕುಣಿದಿದೆ
ಹೇಳಲು, ಪ್ರೀತಿಸುವೆ ನಿನ್ನನೆ!
ಬಹುಆಯ್ಕೆ ಬೇಡವೆಂದ ಸಂಕಲ್ಪಕ್ಕೆ
ದೇವರು ಕಳುಹಿಸಿದ ಈಕೆಯನ್ನೆ
ತುಂಬಲು ಭೂಲೋಕ ಸುಂದರಿ ಸ್ಥಾನ
ನನ್ನ ಪಟ್ಟದರಸಿ
ಸಂಗಾತಿ ನೀ ರೂಪಿಸಿ!!!-
ಸಪ್ತಸಾಗರ ಹಾರಿ
ಹೊತ್ತುತಂದಾನ ನಗುವ ಬುತ್ತಿ
ಜಿಗಿದು ಕುಣಿದು ಮನೆಯ ತುಂಬ
ಕೊಟ್ಟಾನ ಹೊಸ ವರ್ಷದ ಬುತ್ತಿ
ಮನದಿಂದ ನಗೆಯ ಹಕ್ಕಿ ಹಾರಿ
ಕೇಳಾವ, ಮತ್ಯಾವಾಗ ಡಾಲರ್ ಕುವರನ ಭೇಟಿ?-
ನಾ ಹೋಗುವ ಬಾನದಾರಿಯಲ್ಲಿ
ಮೋಡವಾಗಿ ತಡೆದು
ನನ್ನ ಚಿತ್ತ ಸೆಳೆದ ಮೇಘ ಕನ್ಯೆ.
ಹೋಗುವ ದಾರಿ ಮರೆಸಿ
ಭಾವದಿ ಬಂಧಿಸಿ
ಹೃದಯದಲ್ಲಿ ಜೀವಾವಧಿ ಶಿಕ್ಷೆಯಲ್ಲಿರುವ
ಅದೇ ಪ್ರೇಮಖೈದಿ ನಾ
-