Sweety   (Swati 💕)
55 Followers · 38 Following

Joined 2 March 2020


Joined 2 March 2020
9 MAY 2023 AT 10:41

ಮನದ ಮಾತೇನು ಬಿಡಿ,
ಉಸಿರಾದ ನೆನಪುಗಳು ಕೂಡಾ
ನಿರ್ಗಮನವಾಗುತ್ತಿವೆ ಬಾಳ ಪಥದಿಂದ
ಕುಳಿತು ಮಾತನಾಡಿದ ಸಿಹಿ ಕ್ಷಣಗಳ
ಸ್ಮೃತಿ ಸಹ ಮಾಸುತಿವೆ ದರ್ಪಣದಿ
ಧೂಳು ಹಿಡಿದ ನೆನಪುಗಳ ಜಾಲರಿಯಿಂದ

-


11 JAN 2023 AT 18:38

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗನು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದಕುಸಿಯೇ ನೆಲವಿಹುದು ಮಂಕುತಿಮ್ಮ ||

-


17 NOV 2022 AT 6:12

ನಮ್ಮವರು ಎನ್ನುವರು ನಮ್ಮನ್ನು ಯಾವುದೇ ಸಂದರ್ಭದಲ್ಲೂ ಕೈ ಬಿಟ್ಟು ಹೋಗುವುದಿಲ್ಲ, ನಮ್ಮವರಂತೆ ನಟಿಸುವವರು ನಮ್ಮನ್ನು ಬಿಟ್ಟು ಹೋಗಲು ಕಾರಣವನ್ನು ಮತ್ತು ಅವಕಾಶಗಳನ್ನು ಹುಡುಕುತ್ತಾರೆ.

ಶುಭೋದಯ

-


13 JUL 2022 AT 9:39

Every person in our life is
GURU
Some teach how to be and
some others how not to be..
Let's opt the best

-


19 JUN 2022 AT 6:27

ಇಬ್ಬನಿಯ ಬೆಳಗು ಹಸಿರಿನ ಮೇಲೆ ಬಿದ್ದು ತೋಯ್ದ
ಪಾರಿಜಾತಗಳ ಕಂಡಾಗಲೆಲ್ಲ ನಿನ್ನದೇ ನೆನಪು
ಅಲ್ಲೆಲ್ಲೋ ಇರುವ ನಿನ್ನ ನೆನಪಿಸಿಕೊಂಡು
ಉಸಿರೆಳೆದುಕೊಂಡರೂ ಮನದ ತುಂಬ ನಿನ್ನದೇ ಘಮ
ಸಂಯಮ ಎಂಬುದು ಗಾಳಿಗೊಡ್ಡಿದ ಸೊಡರು
❤️❤️

-


22 MAY 2022 AT 22:28

ಒಂದು ಹಂತದವರೆಗೆ ನೋವು ಸಹಿಸಿದ
ಮನುಷ್ಯ ಮೌನವಾಗುತ್ತಾನೆ
ಆಮೇಲೆ ಯಾರನ್ನೂ ದೂಷಿಸುವುದೂ ಇಲ್ಲ ಯಾರಿಂದಲೂ ನಿರೀಕ್ಷಿಸುವುದೂ ಇಲ್ಲ

-


22 MAY 2022 AT 22:22

ಈ ಜಗದಲ್ಲಿ ಎಲ್ಲರೂ ಸ್ವಾರ್ಥಿಗಳು
ಉಪಯೋಗವಿಲ್ಲದೇ ಯಾರೂ
ಯಾರನ್ನೂ ಮಾತನಾಡಿಸುವುದಿಲ್ಲ
ನಮ್ಮವರು, ತಮ್ಮವರು, ಪ್ರೀತಿ,
ವಾತ್ಸಲ್ಯ, ಮಮತೆ, ಕರುಣೆ
ಎಲ್ಲವೂ ಸುಳ್ಳು ..

-


22 MAY 2022 AT 22:17

ಸೂರ್ಯನ ಎಳೆ ಬಿಸಿಲ ಮುತ್ತು
ಭೂಮಿಯ ಕೆನ್ನೆಯ ಮೇಲೆ ಬಿತ್ತು
ರಂಗೇರಿ ನಾಚುತ್ತ ಹೂವು ಅರಳಿತ್ತು
ಇಬ್ಬನಿಯು ಮುಗುಳ್ನಕ್ಕು ಬಾಚಿ ತಬ್ಬಿತ್ತು
ನವಜೀವಕೆ ಚೈತನ್ಯದ ಚಿಲುಮೆ ತಂದಿತ್ತು
ಮುಂಜಾನೆ ಮೂಡಿತ್ತು ಚೈತನ್ಯವ ಹೊತ್ತು— % &

-


5 FEB 2022 AT 0:03

ಮನಸ ಮಾತುಗಳ
ಬಿಚ್ಚಿಡು ನನ್ನೆದುರು
ಮನದ ಭಾವಗಳ
ಮೌನದಲಿ ಕೊಲ್ಲದಿರು
ನಿನಗೆ ಇಷ್ಟವಿಲ್ಲದಿರೆ
ಹೇಳಿಬಿಡು ಒಮ್ಮೆ
ಕಾಣದಂತೆ ಹೋಗುವೆನು
ಬರುವುದಿಲ್ಲ ಮತ್ತೊಮ್ಮೆ— % &

-


24 JAN 2022 AT 11:00

Oye!! Baat sun meri
Bahut yaad aati hai teri
❤️💙💚💛🧡💜❤️

-


Fetching Sweety Quotes