*ದೇಶದ ಕೇಸರಿ*
*ದೇಶ ಕಂಡ ದಕ್ಷ ಅಧಿಕಾರಿ
ಜನತೆಗೆ ಪ್ರಿಯನಾದ ಜನನಾಯಕ
ಅದ್ಭುತ ಕಾರ್ಯ ವೈಖರಿಯ ಜೀವಿ
ಸದಾ ಕ್ರಿಯಾಶೀಲ ಪ್ರಧಾನಿ....!
ದೇಶದ ಏಳ್ಗೆಯೇ ಈತನ ಕನಸು
ದೇಶಕ್ಕಾಗಿಯೇ ತನು ಮನವು ಮುಡಿಪು
ತಾಯಿಯ ಹೊರತು ಯಾರಿಗೂ ತಲೆ ಬಾಗಿಲ್ಲ
ತಾಯ್ನಾಡಿಗೆ ಇವರೇ ಕೇಸರಿಯ ಬಿಂದು.!
ಸತತವಾಗಿ ಗೆಲುವು ಸಾಧಿಸಿದ ಶೂರ
ಶಾಂತಿಯುತವಾಗಿ ಯುದ್ಧ ಗೆದ್ದ ವೀರ
ಪ್ರಾಮಾಣಿಕತೆಗೆ ಪ್ರಖ್ಯಾತ ಈ ವ್ಯಕ್ತಿ
ದೇಶವ ಅಭಿವೃದ್ಧಿಗೊಳಿಸಲು ಹೊರಟ ಶಕ್ತಿ..!
ಪ್ರಧಾನಿ ಆದರೂ ಪ್ರೇಮಮಯಿ
ಹಡೆದವ್ವನಿಗೆ ಋಣಿಯಾದ ಕರುಣಾಮಯಿ
ಶತ್ರುಗಳಿಗೆ ಸಿಂಹ ಸ್ವಪ್ನವಾಗಿ
ನಂಬಿವರಿಗೆ ನೆರಳಾಗಿ ಕರ್ತವ್ಯ
ನಿರ್ವಹಿಸಿರುವುದು ಖ್ಯಾತಿಯೇ ಸರಿ...!
ಭ್ರಷ್ಟದ ವಿರುದ್ದ ಸಿಡಿದೆದ್ದ ಸಿಂಹದ ಮರಿ
ಕಾಸಿಗೆ ಆಸೆ ಪಡದೆ ಕಿಸೆ ಇರದ
ವಸ್ತ್ರ ಧರಿಸಿದ ಪ್ರಧಾನ ಮಂತ್ರಿ...
ಸೀದಾ ಸಾದಾ ಸರಳ ವ್ಯಕ್ತಿತ್ವ
ದೇಶ ಕಂಡ ಮಹಾನ್ ಪ್ರಧಾನ ಪಾತ್ರ*...!-
*ಭಾವೈಕ್ಯತೆಯ ಬೀಜಾಂಕುರ*
ಕಾಲಚಕ್ರದಲಿ ಕಾಲವಾದರು ಎಲ್ಲರೂ
ಮೇಲು ಕೀಳು ಎಂಬುದೆಲ್ಲಿದೆ ಇಲ್ಲಿ?
ಬಾಳಿನ ಮೂಲವ್ಯಾವುದಿಲ್ಲಿ...?
ಎಲ್ಲಾ ಕಾಲನ ನಿರ್ಣಯವೇ ಸರಿ...||೧||
ಜಗದಲಿ ಜಾತಿ ಧರ್ಮದ ಭೂತ
ಬೆಂಬಿಡದೆ ಕಾಡುತ, ಗಹ ಗಹಿಸಿ ನಗುತಿದೆ
ನಿತ್ಯ, ತಿಳಿದೂ ತಿಳಿಯದಂತಾಗಿದೆ
ಅಂತರಂಗ ಬಲು ಕಲುಷಿತ....||೨||
ಮಾತು ಮಾತಿಗೆ ಮತದ ಭೀತಿ
ಶುರುವಾಗಿದೆ ಮಾನವರಲಿ
ಜೀತಮಾಡುವಾಗಿದ್ದ ಜಾತಿ
ಜೀವ ಉಳಿಸುವಾಗಿರಲಿಲ್ಲ,
ಆಗ ಮತದ ಮಾತೇ ಬರಲಿಲ್ಲ....||೩||
ಸಮಾಜ ಶುದ್ಧಿಯಾಗಲು ಬಿಡದೆ
ಆದಿ ಅಂತ್ಯಕೂ ಆಗಿದೆ ಗೋಚರ
ಯುವ ಪೀಳಿಗೆಗೂ ಇದರ ಬಿಸಿ
ತಾಗುತಿದೆ ನಿತ್ಯ ನಿರಂತರ...
ತೊಲಗಬೇಕಿದೆ ಈ ಪೆಡಂಭೂತದ
ಪಿಡುಗು ಬಲು ಭಯಂಕರ, ಮೂಡಬೇಕಿದೆ
ಮನುಜರಲಿ ಭಾವೈಕ್ಯತೆಯ ಬೀಜಾಂಕುರ ||೪||
ವಿಶ್ವ ತೋಟದಲ್ಲಿವಿಧ ವಿಧ ಹೂಗಳು ವಿರಾಜಿಸುತಿಹವು,
ವಿವಿಧತೆಯಲಿ ಏಕತೆಯ ತೋರುತಿಹವು..
ವಿಶ್ವ ಮಾನವತೆಯ ಸಾರುತಿಹವು ಮನುಜರ ಮನಕೆ
ಮಂಕು ಬಡಿದಿದೆಯೋ ಕಾಣೆ .? ಮಾನವೀಯತೆಯ
ಮರೆತ ಮತಾಂಧರಾಗಿಹರು.||೫||
-
ಸುಗ್ಗಿ ಬಂದಿತೆಂದು ಹಿಗ್ಗಿ ಕುಣಿದಾನೋ ರೈತ
ಭೂ ತಾಯಿಗೆ ತಲೆ ತಗ್ಗಿಸಿ ದುಡಿದನೋ....
ಮೈ ಬಗ್ಗಿಸಿ ಬೆವರಿಳಿಸಿ ಹಮ್ಮು ಬಿಮ್ಮು ತೋರದೆ
ತಾ ಹಿಗ್ಗಿ ನಲಿದನೋ......!
ಫಲ ಪಡೆಯಲು ಹಗಲಿರುಳು ಶ್ರಮಿಸಾನೋ
ಬೆಳೆ ಬರಲು ತಾ ಬೆಳಗೆದ್ದು ದೈವವ ನೆನದಾನು..
ಕಳೆ ಕಿತ್ತಿ ಬರುವಾಗ ಕಳೆಗುಂದಾದಂಗ ನಾಟಿಗೆ
ದೃಷ್ಟಿಯ ಗೊಂಬಿ ನೆಟ್ಟಾನ....!
ರಾಶಿಯ ಕಾಳು ಎಣಿಸಲು ಆದೀತೇ..?
ತೆನೆ ಬಾಗಿ ನಿಂತಾಗ ಎಸೆಂದು ಎಣಿಸುವನು
ತಾಸಿನ ಬುದ್ಧಿ ರಾಶಿಯ ಎಣಿಸೀತು..
ಕಾಸಿಗೆ ಆಸೆ ಪಡಲಿಲ್ಲ ರೈತ.. ಜಗದ ಹಸಿವನ್ನ
ಹಿಂಗಿಸಿದಾತ...ಅನ್ನದಾತ.....!!🙏-
ಮೊದಲಾದ ಒಲವಿನ ಕಥೆಯ
ಕೊನೆಯು ಈ ದಿನ.....
ಒಲಿದಂತ ಒಲವೇ ದೂರಿದೆ ನನ್ನನ್ನ......
ಕಾರಣವದು ತಮಾಷೆಗೂ ಅರಿತಿಲ್ಲ...
ಒಲವೇ ಮೂಡಿರಲಿಲ್ಲವಂತೆ ಇನ್ನ....!
ವಿರಹಿಸುತಿನು ವಿರಹದ
ಬೇಗೆಯಲಿ ನಾನೀಗ...
ವಿರಸವಿರದ ಒಲವಿಂದು ಹಾಡಿದೆ
ಮನದಲ್ಲಿ ಶೋಕ ರಾಗ.....
ಕೈ ಜಾರಿ ಹೋಯಿತೇ?
ಕಂಗಳೇರಡು ಬೆರೆತ ಅನುರಾಗ.......!
ಒಪ್ಪಿಕೊಂಡ ಹೃದಯವದು
ಅಪ್ಪಿಕೊಂಡು ನಡೆವಾಗ ತಪ್ಪಿರದಿದ್ದರೂ ದೂರುತಿಹುದು...
ಯಾವುದು ಶಾಶ್ವತ ಅಲ್ಲವೆಂಬ ವಿಷಯ ಅರಿವಾಗುತಿಹುದು...
ಅಳುವಿಗೂ ಅಪ್ಪಿ ತಪ್ಪಿ ಅಳಬಾರದು ಎಂಬ
ಎಚ್ಚರಿಕೆಯ ನೀಡುತಿಹುದು...
ಒಲವಿನ ಗಾಳಿ ಸುಳಿಯದೇ ಇಂದು ಉಸಿರುಗಟ್ಟಿದಂತಾಗುತಿಹುದು....!😁
-
ಬಿಟ್ಟೋದವರನ್ನು ಬಿಟ್ಟು ಬಿಡು
ಬಲವಂತವಾಗಿ ಗಟ್ಟಿ ಹಿಡಿಯದಿರು....
ಪ್ರೀತಿಯ ಮುಷ್ಟಿಯಲಿ ಉಸಿರಾಡಲು ಕಷ್ಟವಾದೀತು...?
ಸ್ವಾರ್ಥವನು ಸುಟ್ಟು ಬಿಡು....
ಇಷ್ಟವಿರದವರ ಜೊತೆ ಇರುವುದಕ್ಕಿಂತ
ನಿನ್ನ ಮಟ್ಟಿಗೆ ನೀ ಇದ್ದು ಬಿಡು...
ಒಲ್ಲದವರ ಜೊತೆ ಇರುವುದು ಏನ್ ಚೆಂದ....?
ಅಪ್ಪಿದವರನ್ನು ಒಪ್ಪಿಬಿಡು
ತಪ್ಪಾದರೂ ಒಮ್ಮೆ ತಬ್ಬಿ ನಡೆದು ಬಿಡು....
ಅವರು ಇಷ್ಟವಿಲ್ಲದೆ ಹೊರಟು
ನಿಂತರೆ ಅವರ ಇಚ್ಛೆಗನುಸಾರ
ಬೀಳ್ಕೊಟ್ಟು ಬಿಡು....
ಇದ್ದು ಇಲ್ಲದಂತಿದ್ದರೆ ಏನ್ ಚೆಂದ.....?
ನಿನ್ನಿಂದಾದರೆ ಪ್ರೀತಿಸಿಬಿಡು
ಇಲ್ಲದಿರೆ ಸುಮ್ಮನಿದ್ದು ಬಿಡು
ಇಲ್ಲಿ ನೀನೊಬ್ಬನೇ ನಿನ್ನೊಟ್ಟಿಗೆ ಎಂಬ
ಸತ್ಯವ ಅರಿತು ಬಿಡು....
ಒಲ್ಲದ ಮನಸ್ಸನ್ನ ಕಾಡಿ ಬೇಡಿ
ಒಲಿಸಿಕೊಂಡರೆ ಏನ್ ಚೆಂದ....?-
ಭರವಸೆಯ ಬದುಕಿನ ಅದೆಷ್ಟೋ
ಅಧ್ಯಾಯಗಳಿಗೆ ಮುನ್ನುಡಿ
ಬರೆದವರೇ ಉಪಾಧ್ಯಯರು....
ಬದುಕು ಬರಹದ ನಡುವೆ
ಬಂಧ ಬೆಸೆದವರೇ ಬೋಧಕರು....
ಅರಿವೇ ಗುರುವೆಂದು ತಿಳಿಸಿ
ಅಕ್ಷರ ಲೋಕದ ಅವಿಸ್ಮರಣೀಯ
ಅಮೃತವುಣಿಸಿದ ಅಧ್ಯಾಪಕರು....
ಸರಿ ತಪ್ಪುಗಳ ವಿಮರ್ಶೆಕಾರ
ಮಕ್ಕಳ ಮನಸ್ಸಿಗೆ ಬಿತ್ತಿದ ಬೀಜಾಕ್ಷರ...
ಮಾತೃ ಮಮತೆಯ ಮಮಕಾರ
ಮಗುವಿನ ಸಾಧನೆಗೆ ಇವರದೇ ಹರ್ಷೋಧ್ಗಾರ...
-
ಮೀರಾ ಬಯಸಿದ್ದು ಕೃಷ್ಣನನ್ನೇ ಆದರೂ
ಕೃಷ್ಣ ಪ್ರವೇಶಿಸಿದ್ದು ರುಕ್ಮಿಣಿಯ ಜೀವನಕ್ಕೆ ....
ಕೈ ಹಿಡಿದಿದ್ದು ರುಕ್ಮಿಣಿಯನ್ನೇ ಆದರೂ
ಕೃಷ್ಣನ ಮನ ಸೋತಿದ್ದು ರಾಧೆಯ ಅಗಾಧ ಪ್ರೇಮಕ್ಕೆ...
ಪಟ್ಟದರಸಿ ರುಕ್ಮಿಣಿಯೇ ಆದರೂ,
ಅನಂತ ಕಾಲಕ್ಕೂ ಕೃಷ್ಣನ ಮನದರಸಿ
ರಾಧೆಯೇ ಆಗಿರುವಳು..... ❤
-
ಕನಸುಗಳು ಅಗಸದಲ್ಲಿನ ಚುಕ್ಕಿಯಂತೆ ಮೀನುಗಬೇಕು..
ಭಾವನೆಗಳಿಗೆ ಯಾವ ಬಂಧವು ಇರಬಾರದು..
ನಕ್ಷತ್ರಕ್ಕೂ ಮಿಗಿಲಾದ ಹೊಳಪು ಕನಸುಗಳ
ನನಸಾಗುವಿಕೆಯತ್ತ ಸಾಗಬೇಕು...
ಪ್ರತಿ ಆಕಾಶಕಾಯದ ಸೊಗಸು ಆತ್ಮ ವಿಶ್ವಾಸದಲ್ಲಿರಬೇಕು... ಅಂದಾಗಲೆ ಗಗನದಲಿ ಗಾಢವಾಗಿ ಮಿನುಗಲು ಸಾಧ್ಯ...-
*ರೇಶಿಮೆಯ ಕೇಶ ರಾಶಿಯ
ನಡುವೆ ದುಂಡು
ಮಲ್ಲಿಗೆಯ ಮುಡಿದು.
ಮುಗುಳ್ನಗೆಯಬೀರುತ
ಮುಗುರುಳು ನಾಚುವಂತೆ
ಸಂಭ್ರಮಿಸಿದೆ ಗೆಳತಿ......
ನಿನ್ನ ನಯನಗಳ ಕಾಂತಿ.
ಕುಡಿಹುಬ್ಬಿನ ಮೆರಗು ಹೆಚ್ಚಿಸಿದೆ.
ಬೆಡಗಿ ಕಿವಿ ಓಲೆಯ
ಜುಮುಕಿ ಕಣಿ ಹೇಳಲು ಹೊರಟಂತಿದೆ.
ಕೈ ಬಳೆಗಳ ಸದ್ದು ಸುತ್ತಲೂ
ಕೇಳಿದೆ ಗದ್ದಲದೊಳಗು
ನಿನ್ನೊಲವ ಸುದ್ದಿ ಮಾಡಿದೆ ಗೆಳತಿ
ಕೊನೆವರೆಗೂ ಅದು ರದ್ದಾಗದು*.... 😊😁-