ಸವಿತ ಗೌಡ  
477 Followers · 143 Following

read more
Joined 13 March 2019


read more
Joined 13 March 2019

ದ್ವೇಷಿಸುವವರನ್ನು ಪ್ರೀತಿಸುತ್ತಾ
ಪ್ರೀತಿಸುವವರನ್ನು ಆರಾಧಿಸುತ್ತಾ
ದ್ವೇಷ ಮರೆತು ಪ್ರೀತಿ ಹಂಚುತ್ತಾ
ಹೊಸ ದಾರಿಯಲಿ ನಡೆಯೋಣ....!!

ಕಳೆಯಲಿ ಹಳೆ ವರ್ಷದ ಕಹಿ ನೆನಪುಗಳು
ಮಣ್ಣಾಗಲಿ ಹಳೆಯ ದುರ್ಘಟನೆಗಳು
ಸೃಷ್ಟಿಯಾಗಲಿ ಸಂತಸದ ಸವಿ ಕ್ಷಣಗಳು
ನವ ಬದುಕಿನೆಡೆಗೆ ಸಾಗಲಿ ಜೀವನದ ಪಯಣ.....!!

ಅನುಭವಗಳು ಕಲಿಸಿದ ಪಾಠವನ್ನು ಅಳವಡಿಸಿಕೊಂಡು
ಎಲ್ಲರ ಜೊತೆ ನಮ್ಮವರೊಂದಿಗೆ ನಮ್ಮವರಿಗಾಗಿ ಹೊಸ ವರ್ಷದ ಜೊತೆ ಹರುಷದಿಂದ ಬಾಳೋಣ....!!

-


21 DEC 2024 AT 11:51

ಜನಗಳ ಸಂಪಾದಿಸಲಾಗದವರು
ಧನ ಎಷ್ಟು ಗಳಿಸಿದರೇನು ಫಲ....

ಪ್ರೀತಿ ಪಡೆದುಕೊಳ್ಳಲಾಗದವರು
ಆಸ್ತಿ ಎಷ್ಟು ಸಂಪಾದಿಸಿದರೇನು ಫಲ....

ಪ್ರಾಮಾಣಿಕತೆ ಇಲ್ಲದವರು
ಪ್ರವಚನ ಮಾಡಿದರೆ ಎಲ್ಲವೂ ವಿಫಲ.... #

-


19 OCT 2024 AT 14:13

ತಾಯಿ ಆದವಳು ಮಗನಿಗೆ ಎಷ್ಟು ಸಂಸ್ಕಾರ ಹೇಳಿ ಕೊಟ್ಟಿದಾಳೆ ಅನ್ನೋದು ಮಗ ಹೆಂಡತಿಯನ್ನು ಹೇಗೆ ಗೌರವಿಸುತ್ತಾನೆ ಅನ್ನೋದರಲ್ಲಿ ಗೊತ್ತಾಗುತ್ತೆ....

-


5 OCT 2024 AT 19:33

ಪ್ರೀತ್ಸೆ ಅಂತ ಹಿಂದೆ ಬಿದ್ದವರನ್ನೆಲ್ಲ
ಕಣ್ಣೆತ್ತಿ ಸಹ ನೋಡಲಿಲ್ಲ
ಆದರೆ ಮನಸು ನಿನ್ನ ಕಡೆ ವಾಲಿತು
ಹೃದಯ ನಿನ್ನ ಪ್ರೀತಿ ಒಪ್ಪಿತು
ಇಬ್ಬರ ಭಾವನೆಗಳು ಒಂದಾದವು
ಬಿಟ್ಟಿರಲಾರದಷ್ಟು ಅನುಬಂಧ ಬೆಳೆಯಿತು
ಆದರೆ ಪ್ರೀತಿಯಲ್ಲಿ ಒಂದಾದ ನಮ್ಮಿಬ್ಬರನ್ನ
ಒಂದಾಗಿ ಬಾಳುವ ಅದೃಷ್ಟನ
ಆ ದೇವರು ಹಣೆಬರಹದಲ್ಲಿ ಬರೆಯಲಿಲ್ಲ

-


5 OCT 2024 AT 19:22

ಪರರ ನಿಂದಿಸಿ
ಪರಶಿವನ ಜಪಿಸಿದರೇನು ಫಲ... #

ಮೆಚ್ಚುಗೆಗಾಗಿ ಪೂಜಿಸಿ
ಚುಚ್ಚಿ ಮಾತನಾಡಿದರೇನು ಫಲ... #

ಅಹಂಕಾರ ಬಿಂಬಿಸಿ
ಅಭಿಷೇಕ ಮಾಡಿದರೆ ಮೆಚ್ಚನಾ ಪರಶಿವ... # #

-


4 OCT 2024 AT 20:18

ದುಃಖದಲ್ಲಿ ಇದ್ದಾಗ ಕೊರಗಬಾರದು
ಸುಖದಲ್ಲಿದ್ದಾಗ ಕಷ್ಟಪಟ್ಟಿದ್ದನ್ನ
ಮರೆಯಬಾರದು

-


19 SEP 2024 AT 16:27

ಹೆತ್ತವರ ಕಷ್ಟ ಸುಖಕ್ಕೆ ಸಹಾಯ ಮಾಡುವ ಮಕ್ಕಳನ್ನ ಹೆತ್ತವರು ಕಡೆಗಣಿಸ್ತಾರೆ....ಇನ್ನೆಲ್ಲೋ ಆರಾಮಾಗಿ ತನಗೆ ಸಂಬಂಧಿಸಿಲ್ಲದಂತೆ ಇರೋ ಮಕ್ಕಳ ಮೇಲೆ ಅದೇ ಹೆತ್ತವರು ಅತಿಯಾದ ಪ್ರೀತಿ ಕಾಳಜಿ ತೋರಿಸ್ತಾರೆ

-


10 SEP 2024 AT 20:09

ಸುಖದಲ್ಲಿದ್ದಾಗ ಬಂದು ಬಾಯಿ ಸಿಹಿ ಮಾಡಿಕೊಳ್ಳುವ ಜನರಿಗಿಂತ
ದುಃಖದಲ್ಲಿ ಇದ್ದಾಗ ಕಣ್ಣೀರು ಒರೆಸಿ ಮನಸು ಸಿಹಿ ಮಾಡುವವರೇ ಆತ್ಮೀಯರು

-


10 SEP 2024 AT 20:05

ಮರೆಯಲಾಗದೆ ಕಣ್ಣೆದುರು ಬರುವ ನೆನಪಿಗೆ
ಮರೆತಂತೆ ಮರೆಯಲು ಸಾಧ್ಯವಾಗದ ನೆನಪು

-


10 SEP 2024 AT 19:56

ಅವಶ್ಯಕತೆಗಾಗಿ ಬಳಸಿಕೊಳ್ಳುವ
ಸಂಬಂಧಗಳು
ಅನುಕೂಲಕ್ಕೆ ತಕ್ಕಂತೆ ಬದಲಾಗುವ
ಬಂಧುಗಳು
ಅವಕಾಶಕ್ಕಾಗಿ ಕಾಯುತ್ತಿರುವ
ಬಳಗದವರು
ಇವರೆಲ್ಲರಿಂದ ದೂರ ಇದ್ದರೆ ನೆಮ್ಮದಿ
Forever

-


Fetching ಸವಿತ ಗೌಡ Quotes