ಜೀವಿತದ ಕಾಲದಲ್ಲಿ ವ್ಯಕ್ತಿಯೊಂದಿಗೆ ಮಾತನಾಡದೆ,
ಮರಣದ ನಂತರ ಯಾಕೆ ಮಾತನಾಡುತ್ತಿಲ್ಲವೆಂದು
ಅಲುಗಾಡಿಸಿ ಅಲುಗಾಡಿಸಿ ಪ್ರಶ್ನಿಸುತ್ತಾರೆ ಜನ...-
ಈ ರಾತ್ರಿಯೇ
ಕೊನೆಯ ರಾತ್ರಿಯಾದರೆ ಏನು ಮಾಡುವೆ...?
ನಾಳೆಯೇ ನಾವಿಲ್ಲವಾದರೆ...?
ಮುನಿಸಿಕೊಂಡು ಏನು ಸಾಧಿಸುವೆ...?-
ನಮ್ಮವರೆಂದು ನಂಬಿ,
ಏನ್ ಅಂದ್ರು ನಡಿಯುತ್ತೆ ಅಂತ
ನುಡಿದರೆ ಅದಿನ್ನೂ ಕಷ್ಟ.-
ಯಾವ ಲೇಖನಿಯಿಂದ
ನನ್ನ ಹಣೆ ಬರಹ ಬರೆಯಲಾಗಿದೆಯೋ ಗೊತ್ತಿಲ್ಲ.
ನಾನ್ಯಾವಾಗ್ಯಾವಾಗ ಖುಷಿಯಿಂದ ಇರಲು ಪ್ರಯತ್ನಿಸುತ್ತೀನೋ
ಅವಾಗವಾಗ ನವ ನೂತನ ನೋವುಗಳು ಲಭಿಸಿ ಬಿಡುತ್ತವೆ.-
ನಮ್ಮವರು ಯಾರೆಂದು
ಖಂಡಿತ ಕಣ್ಣ ಹನಿಗಳಿಗೂ ಗೊತ್ತು.
ಅದಕ್ಕೆ ಅಲ್ವಾ ಅವು ನಮ್ಮವರೆದುರು ಜಾರೋದು?
ಮುಗುಳ್ನಗುವಿಗೇನಿದೆ ???
ಅದಂತೂ ಅಪರಿಚಿತರಿಗೂ ಮೋಸ ಮಾಡಬಹುದು...— % &-
ಎಲ್ಲಿಯವರೆಗೆ ನಿಜವಾದ ಪ್ರೀತಿ ನಮ್ಮ
ಮೇಲಿರುತ್ತದೋ ಅಲ್ಲಿಯವರೆಗೆ
ನಾವೇನೇ ಅಂದರೂ, ನಮ್ಮಿಂದ ಏನೇ ತಪ್ಪಾದರೂ ಸಹಿಸಿಕೊಂಡು, ಹೊಂದಿಕೊಂಡು ಇರುತ್ತಾರೆ.
ಯಾವಾಗ ನಮ್ಮ ಮೇಲಿನ ಪ್ರೀತಿ, ಕಾಳಜಿ ಕಡಿಮೆಯಾಗುತ್ತದೋ ನಮ್ಮ ಸಣ್ಣ ಪುಟ್ಟ ತಪ್ಪುಗಳೂ ಸಹ ದೊಡ್ಡದಾಗಿ ಕಾಣಲಾರಂಭಿಸುತ್ತವೆ.
ಆವಾಗಲೇ ಹೆಚ್ಚು ನೋವಾಗೋದು...— % &-
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ
ನಾವು ಯಾರನ್ನು ನಮ್ಮವರೆಂದು ನಂಬಿದ್ದೆಯೋ ಅವರು ಸದಾ ಜೊತೆಗಿದ್ದಿದ್ದರೆ
ಸಂಶಯ ಅನ್ನೋದು ಬರದಿದ್ದರೆ
ಮನೋಭಾವ ಸಂಕೂಚಿತವಾಗದಿದ್ದರೆ
ಮನಸ್ಥಿತಿ, ಯೋಚನೆಗಳು, ಯೋಜನೆಗಳು,
ಕಂಡ ಕನಸುಗಳು, ಆಡಿದ ಪಿಸು ಮಾತುಗಳು ಇದ್ಯಾವುದೂ ಬದಲಾಗದಿದ್ದರೆ
ಸಮಸ್ಯೆಯೇ ಇರುತ್ತಿರಲಿಲ್ಲ...— % &-
ಯಾವಾಗ ಶುರುವಾಯಿತೋ ತಿಳಿಯದಾದೇನು
ಅದರ ಮೂಲ ಹುಡುಕುತ ಹೊರಟ ನಾನೇ
ಹುಡುಕಿ ಹುಡುಕಿ ಕಳೆದು ಹೋದೆನು...— % &-