ಹಂಬಲಿಸುವ ಮನಸಿಗೆ ಈಗ ನೀವು ಸಮಯ ಕೊಡದಿದ್ದರೆ, ಮುಂದೊಂದು ದಿನ ನೀವು ಸಮಯ ಕೊಟ್ಟರು ಆ ಹಂಬಲಿಸುವ ಮನಸೇ ನಿಮ್ಮ ಹತ್ತಿರ ಇರುವುದಿಲ್ಲ
-
ಅರ್ಥವಾಗದ ಮನಸಿನೆದುರು ಹೇಳಿದ ಅರ್ಥವಾಗದ ಅರ್ಥವೂ ಅನರ್ಥವಾಗುವುದು, ವ್ಯರ್ಥವೂ ಆದಂತೆ. ಅರ್ಥಕ್ಕೆ ಅರ್ಥ ಸಿಗಬೇಕೇ ಹೊರತು ಅಪಾರ್ಥವಲ್ಲ. ಅರ್ಥವಿರುವ ಮಾತೇ ಆಗಲಿ, ಮೌನವೇ ಆಗಲಿ, ನೋವೇ ಆಗಲಿ, ನಗುವೇ ಆಗಲಿ ಅರ್ಥವಾಗುವ ಮನಸಿಗೆ ಅರ್ಥೈಸುವ ಪ್ರಯತ್ನ ಮಾಡಬೇಕು ವಿನಃ ಅರ್ಥವೇ ಆಗದ, ಅರ್ಥವಾದರೂ ಆಗದಂತೆ ನಟಿಸುವ ಮನಸಿನೆದುರು ಅಲ್ಲ...
-
ಅರ್ಥ ಮಾಡ್ಕೊ ಮನಸೇ..!!
ನಿನ್ನಿಂದ ಏನಾದರೂ ಸಿಗುತ್ತೆ
ಅಂತಾದ್ರೆ ಮಾತ್ರ ಸಂಬಂಧಗಳು
ನಿನ್ನ ಜೊತೆ ಇರುತ್ತೆ.
ಯಾವತ್ತೂ ನಿನ್ನಿಂದ ಏನೂ ಸಿಗಲ್ಲ
ಅಂತ ಗೊತ್ತಾಗುತ್ತೋ ಆ ಕ್ಷಣನೇ
ಆ ಸಂಬಂಧ ನಿನ್ನನ್ನ ತೊರೆದು
ಹೋಗೋಕೆ ಪ್ರಯತ್ನ ಮಾಡುತ್ತೆ.
ವಾಸ್ತವ ಸತ್ಯ-
ಕಣ್ಣೀರು ಯಾರಿಗೂ ಬೇಡವಾದದ್ದು
ಆದ್ರೆ ನಗು ಎಲ್ಲರೂ ಬಯಸೋದು.
ಅದ್ಕೆ ಯಾವತ್ತೂ ನಗ್ತಾ ಇರಿ.
ಕಣ್ಣೀರು ಯಾವತ್ತೂ ನಿಮಗಷ್ಟೇ ಇರ್ಲಿ.
ಅದನ್ನ ಯೋಗ್ಯತೆ ಇಲ್ದೆ ಇರೊರ್ ಮುಂದೆ ಹಾಕ್ಬೇಡಿ.
ಇಲ್ಲಾಂದ್ರೆ ಆ ಕಣ್ಣೀರು ಬೆಲೆ ಕಳ್ಕೊಳ್ಳುತ್ತೆ.
ನೀವು ಬೆಲೆ ಕಳ್ಕೊತೀರಾ.-
ಫೇಸ್ ಟು ಫೇಸ್ ಮಾತನಾಡುವುದು ಫೇಸ್ ಬುಕ್ ನಲ್ಲಿ ಮಾತನಾಡುವುದಕ್ಕಿಂತ ತುಂಬಾ ಒಳ್ಳೆಯದು...
-
ಕನ್ನಡ ಭಾಷೆಯ ಉಳಿವು: ಓದು, ಬರಹ ಮತ್ತು ಮಾತನಾಡುವುದರಲ್ಲಿದೆ...
ಕನ್ನಡ ಮನಸುಗಳಿಗೆ ರಾಜ್ಯೋತ್ಸವದ ಶುಭಾಶಯಗಳು...-
ಮನುಷ್ಯ ಹಾಳಾಗುವುದು ಎರಡು ವಿಷಯಗಳಿಂದ: ಒಂದು, ಯಾರೋ ಹೇಳಿದ್ದನ್ನು ಕೇಳಿ. ಇನ್ನೊಂದು, ಕೇಳಿದ್ದನ್ನು ಮತ್ತೊಬ್ಬರಿಗೆ ಹೇಳಿ.
-