ದಾರಿಯೊಂದು ಹುಡುಕುತ್ತಿದೆ ಈ ಪಯಣದ ಕೊನೆಯನು...
ತಿಳಿದರೆ ಹೇಳಿಬಿಡಿ ..
ಭಾವನೆಗಳ ಕೂಡಿಟ್ಟುಕೊಂಡನು ಆ ಬಾನ ಚಂದಿರ
ನಿನ್ನ ನೆನಪುಗಳಿರುವ ಕನಸುಗಳೇ ಎಷ್ಟೊಂದು ಸುಂದರ
ನಗುವಿನ 'ಅರಸ'ನ ನೆನಪುಗಳು
ಅವನ ನಗುವ ಹುಡುಕುವ ನೆಪಗಳು
ಎಂದಿಗೂ ಅಮರ...
'ಗಂಧದಗುಡಿ'ಯಲ್ಲಿ ಅರಳಿದ 'ಬೆಟ್ಟದ ಹೂ'..
'ರಾಜಕುಮಾರ'ನ 'ಅಭಿ'ಮಾನಿಗಳು ನಾವೆಲ್ಲರೂ..
'ಅಂಜನಿ ಪುತ್ರ'ನ 'ಪವರ್' ' ಚಕ್ರವ್ಯೂಹ ' ವನ್ನು ಭೇದಿಸಿ ' 'ಅಜೇಯ' ನನ್ನಾಗಿ ಮಾಡಿತು..
ಕರ್ನಾಟಕದ 'ಯುವರತ್ನ ' ಇವರು..
ಪ್ರತಿ 'ವೀರ ಕನ್ನಡಿಗ'ನ 'ಲಕ್ಕಿಮ್ಯಾನ್' ಇವರು..
'ಪೃತ್ವಿ'ಯ ಪ್ರೀತಿಯ 'ಮಿಲನ'..
'ಭಕ್ತ ಪ್ರಹ್ಲಾದ' ನ ಭಕ್ತಿಗೆ ಮೆಚ್ಚಿ ಭುವಿಗಿಳಿದ ನರಸಿಂಹ..
'ವಂಶಿ'ಯು ಕಂಡ ಕನಸಲ್ಲಿ ಬಂದದ್ದು 'ಚಲಿಸುವ ಮೋಡಗಳು'..
'ದೊಡ್ಡಮನೆ ಹುಡುಗ' ನ 'ನಟಸಾರ್ವಭೌಮ'ತೆ ಮೆಚ್ಚಿದ 'ಹುಡುಗರು '..
'ಆಕಾಶ 'ಕ್ಕೂ ಎತ್ತರ 'ನಮ್ಮ ಬಸವ'
ಮಕ್ಕಳ ಬಾಳಲ್ಲಿ ' ಹೊಸಬೆಳಕು ' ತಂದ 'ಮೈತ್ರಿ'
ಲೈಫ್ ಅಲ್ಲಿ ಬಿಂದಾಸ್ ಆಗಿ ಇರ್ಬೇಕು ಅಂತ ಹೇಳಿದ ' ಮೌರ್ಯ '
ಎಲ್ಲರಿಗೂ ಗೊತ್ತು ' ಅಣ್ಣಾಬಾಂಡ್ ' ನ ಶೌರ್ಯ
'ಯಾರೇ ಕೂಗಾಡಲಿ ' 'ರಾಜ್ ' ಮತ್ತು 'ರಾಮ್ '
ಹೇಳುವರು ಎಲ್ಲವೂ 'ನಿನ್ನಿಂದಲೇ' 'ಪರಮಾತ್ಮ' ಎಂದು ..
'ವಸಂತ ಗೀತೆ'ಯ ಹಾಡುತ 'ಪ್ರೇಮದ ಕಾಣಿಕೆ' ನೀಡಿದ 'ತಾಯಿಗೆ ತಕ್ಕ ಮಗ'..
'ಭೂಮಿಗೆ ಬಂದ ಭಾಗ್ಯವಂತ' 'ಯಾರಿವನು'? ಎಂದು ಕೇಳಿದಾಗ
ಎಲ್ಲರೂ ಹೇಳಿದರು 'ಅಪ್ಪು' ಅವರನ್ನು ಪಡೆಯ ನಾವೇ 'ಭಾಗ್ಯವಂತ'ರು ಎಂದು..
'ಎರಡು ನಕ್ಷತ್ರ 'ಗಳ ಜೊತೆ ಸೇರಿದ 'ರಣವಿಕ್ರಮ' ನ ಕಥೆ ಇದು..
ಅಪ್ಪುವಿನ ಅಪ್ಪುಗೆಗಾಗಿ ಕಾಯುತ್ತಿರುವ ಅಭಿಮಾನಿ ನಾನು✨🤍
-
ಬಣ್ಣ ಬಣ್ಣದ ಮಾಸ್ಕಿನ
ಮಧ್ಯೆ ಚೆಂದದೊಂದು ನಗು
ಕಿತ್ತು ತಿನ್ನುವ ಬಡತನದ
ಮಧ್ಯೆ ಮುಗ್ದ ತಾಯಿಯ ಪ್ರೀತಿ
ಕಂಡಿಲ್ಲ ಯಾರು ಅವರ ನೋವನ್ನು
ಕೇಳಲೇ ಇಲ್ಲ ಅವರ ದುಃಖವನ್ನು
ಲೇಖನಿ ಹಿಡಿವ ಕೈಯಲ್ಲಿ
ಗುದ್ದಲಿ,ಸಲಕೆ
ಪುಸ್ತಕ ಹೊರುವ ಬೆನ್ನ ಮೇಲೆ
ಸಿಮೆಂಟಿನ ಮೂಟೆ
ಲೇಖನಿಯ ಮಸಿಯ ಕಲೆಯನ್ನು
ಪಂಚರ್ ಶಾಪಿನ ಗ್ರೀಸು ಕಿತ್ತುಕೊಂಡಿತ್ತು...
ಎಲ್ಲರ ಜೊತೆ ಸೇರಿ ಆಡುವ ಕೈಗಳನ್ನು
ಮದರಂಗಿ ಅರಶಿನ ಕಿತ್ತುಕೊಂಡಿತ್ತು...
ಕಾಂಕ್ರೀಟ್ ಚಾವಣಿಯಲ್ಲಿ
ಬಡ ಮಕ್ಕಳ ಬೆವರು ಮೆತ್ತಿಕೊಂಡಿತ್ತು...
-
The Right people come along with us
And others just teaches the life lessons.
Yes,we need both🙂-
Nothing goes permanent..!
Our smile...
Our pain...
Our happiness...
Our sorrow...
Yes, even us
Time flies!-
NSS camp ನಡಿಲಿಲ್ಲ
AIT Virtual ಅಂತೆ
ನಮ್ಮ seniors ತರನೇ ನಮಗೂ Virtual RAWE ಆಗ್ದೇ ಇದ್ರೆ ಸಾಕು
ನಿನ್ನೆ ಮೊನ್ನೆ ಹತ್ತಿದಹಾಗಿದೆ degree ಮೆಟ್ಟಿಲು
ನೂರಾರು Happy momentsನ Add ಮಾಡ್ಕೊಂಡಿದೆ ನೆನಪಿನ ಬಟ್ಟಲು
Juniorsಗೆ ಒಂದ್ fresher's day ಮಾಡ್ಲಿಲ್ಲ
ಪ್ರೀತಿಯ seniorsಗೆ ಒಂದ್ sendoff ಕೊಡಾಕ್ ಆಗ್ಲಿಲ್ಲ
Roomates ಜೊತೆ Group photo ಕಮ್ಮಿ
Midnight ಅಲ್ಲಿ ಮಾಡಿದ maggie ಮಾತ್ರ yummmieee
1st sem ಅಲ್ಲಿ ಯಾಕ್ ಈ course ಗೆ join ಆದ್ವಿ ಅಂತ ಗೊತ್ತಾಗ್ಲಿಲ್ಲ..
2nd sem ಅಲ್ಲಿ ಏನ್ ಓದೋದು ಅಂತ ಗೊತ್ತಾಗ್ಲಿಲ್ಲ..
3rd sem ಅಲ್ಲಿ First ಇಂದನೇ neat ಆಗಿ ಓದಿದ್ರೆ CGPA ಇನ್ನೂ ಚೆನ್ನಾಗಿರ್ತಿತ್ತು ಅನ್ನೋ ಭಾವನೆ..
4th semಗೆ ಮನೆ ಸೇರಿದ ನಾವು ಮತ್ತೆ college ನೋಡೋ Hopesನ ಕಳ್ಕೊಂಡಾಗಿತ್ತು..
5th semಗೆ online class ಕೇಳಿ offline exam ಬರಿಬೇಕಾಗಿತ್ತು..
5th sem ಅಲ್ಲಿ ಉಳಿದ assignments ನ 6th sem ಅಲ್ಲಿ submit ಮಾಡಿ ಅಂತ ಹೇಳಿದ profsu..
6th sem ಅಲ್ಲಿ online class ಮಾಡಿ
7th sem ಅಲ್ಲಿ offline exam ಮಾಡ್ತೀವಿ ಅಂತ ಹೇಳಿದ Universitieesu..
ತಲೇಲಿ Knowledge ಇಲ್ಲ
Grade sheet ಅಲ್ಲಿ Neat ಆಗಿ grade ಇಲ್ಲ
ಎಷ್ಟೋ practicals ಮಾಡ್ಲಿಲ್ಲ
Field Visit ಗೆ ಹೋಗಲೇ ಇಲ್ಲ !
ಲಾಸ್ಟ್ ಅಲ್ಲಿ ಒಂದ್ ಮಾತು
ಜೀವ ಇದ್ರೆ ಜೀವನ ಸ್ವಾಮಿ..🙂
-
ಹುಡುಕುತ ಸಾಗಿಹೆ
ನನ್ನೊಳಗಿನ ನನ್ನ
ಎಲ್ಲವೂ ಕತ್ತಲಾಗಿದೆ
ಕಾಣದಾಗಿದೆ ಬಣ್ಣ-
ಸೀಲಾಗಿದೆ ಕಾಲೇಜು!
ಲಾಕಾಗಿದೆ ಹಾಸ್ಟೆಲ್ ಗೇಟು
ಎಲ್ಲರ ಮನ ಹೇಳುತ್ತಿದೆ ಹೇಗಾದರೂ ಕಂಪೌಂಡ್ ದಾಟು..
ಮತ್ತೆ ಬೇಸರ ತರಿಸುವ ಆನ್ಲೈನ್ ಕ್ಲಾಸು
ಮಂಪರು ಮುಖದ ಹಾಸ್ಟೆಲ್ ಗರ್ಲ್ಸು..
ವೇಸ್ಟ್ ಆಗದೆ ಎಲ್ಲರ ಹೊಟ್ಟೆ ಸೇರಿದ ಹಾಸ್ಟೆಲ್ ಊಟ
ಮತ್ತೆ ಹೊರಬಂದಿವೆ ಬಾಲ್ಯದಲ್ಲಿ ಆಡುವ ಆಟ
ಆದರೂ ಮತ್ತೆ ಶುರುವಾಯಿತು ಆನ್ಲೈನ್ ಪಾಠ
ಎಷ್ಟಿದ್ದರು ತಪ್ಪುವುದಿಲ್ಲ ನೆಟ್ವರ್ಕಿನ ಕಾಟ..
ಎಲ್ಲರದೂ ಒಂದೇ ಹಾಡು
ಕೇಳುವರಾರು ನಮ್ಮ ಪಾಡು
-
ಮಾಸಿದ ನಗು..!
ಎಂದೂ ಮಾಸದ ನಗು
ಮಾಸ್ಕಿನ ಅಡಿ ಅಡಗಿತ್ತು
ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ
ಮೊಬೈಲಿನ ಮೆಸೇಜ್ ಒಂದರಲ್ಲಿ ಅಡಗಿತ್ತು
ಹಚ್ಚ ಹಸಿರಿನ ಹಂದಿರದಲ್ಲಿ
ಮಾಸ್ಕಿನೊಳಗಿನ suffocative ಉಸಿರು ಅಡಗಿತ್ತು
ಕೆಮ್ಮಿದ್ದೆಲ್ಲ ಕೊರೊನಾ ಆಗಬಹುದಿತ್ತು
ಸೀನಿದರೆ ಶೀತ ಬರಬಹುದಿತ್ತು
ಮತ್ತೆ ಆ ನಗುವ ನೋಡುವಾಸೆ
ಮತ್ತೆ ಸ್ವಚ್ಚನೆಯ ಗಾಳಿಯಲಿ ಉಸಿರಾಡುವಾಸೆ
ಓ ಕೊರೊನಾ ನಿನ್ನಲ್ಲಿ ಒಂದು ರಿಕ್ವೆಷ್ಟು
ಈಗಲೇ ಹೋಗಿಬಿಡು ಇದೆಲ್ಲವ ಬಿಟ್ಟು.....!-
FROM ಯಾವ ಮಾಸ್ಕಿನ ಹಿಂದೆ ಯಾವ ಮುಖವಿದ್ಯೋ...!
TO ಯಾವ ಮಾಸ್ಕಿನ ಹಿಂದೆ ಯಾವ Report ಇದ್ಯೋ.....!
We all grew up.
#Justourgirls'hostelthings😷-