Sushmita Betageri   (Sushmita Betageri)
4 Followers · 3 Following

Dharwad
Joined 11 April 2019


Dharwad
Joined 11 April 2019
5 SEP 2020 AT 14:24

ಅಜ್ಞಾನವೆಂಬ ಕತ್ತಲೆಯಿಂದ
ಸುಜ್ಞಾನವೆಂಬ ಬೆಳಕಿನೆಡೆಗೆ
ಪ್ರೀತಿ ,ಸ್ನೇಹ ಭಾವದಿಂದ
ದಾರಿ ತೋರಿದ ನಿಮಗೆ
ಕೋಟಿ ನಮನಗಳು ಹೃದಯಾಳದಿಂದ

ಅಂಧಕಾರವ ಅಳಿಸುತ
ಅಂದದ ಮೂರ್ತಿ ಮಾಡುವ
ಜ್ಞಾನಜ್ಯೋತಿ ಹಣತೆ ಹಚ್ಚುತ
ಶಿಸ್ತಿನ ಸಿಪಾಯಿಯಾಗಿಸಿದ ನಿಮಗೆ
ಕೋಟಿ ನಮನಗಳು ಹೃದಯಾಳದಿಂದ

ಸನ್ಮಾನವನೆಂದೂ ಬಯಸದೇ
ಶಿಷ್ಯನ ಸಾಧನೆಯ ಕಾಣುತ
ಕೈ ಹಿಡಿದು ಮುಂದೆ ನಡೆಸಿ
ಜೀವನಾದರ್ಶಗಳ ತುಂಬಿದ ನಿಮಗೆ
ಕೋಟಿ ನಮನಗಳು ಹೃದಯಾಳದಿಂದ
_Sushmita B✍️

-


12 AUG 2020 AT 23:15

ನೋವನಿತ್ತು ದೂರವಾದೆ
ನಲಿವಿನೊಂದಿಗೆ..
ಕವನ ಬಿಟ್ಟು ಕಾಣೆಯಾದೆ
ಕನಸಿನೊಂದಿಗೆ..
ಪ್ರೀತಿ ಮರೆತು ಮಾಯವಾದೆ
ಮಾತಿನೊಂದಿಗೆ...

ಓ‌ ಜೀವವೇ ಮರಳಿ ಬಾ
ಈ ಜೀವವ‌ ಸೇರು ಬಾ

-


8 AUG 2020 AT 20:07

ನಿನ್ನೂಮ್ಮೆ ನೆನೆದು,
ಲೇಖನಿಯ ನಾ ಹಿಡಿಯಲು...
ಮನದ ಮಾತುಗಳು ಪದವಾಗಿ,
ಪದಗಳು ಸೇರಿ ಚಿತ್ತಾರವಾಗಿ,
ಮೂಡುವುದು ಒಂದು ಸುಂದರ ಕವನ...

ನಿನ್ನೂಮ್ಮೆ ನೆನೆದು,
ಕನ್ನಡಿಯ ನಾ ನೋಡಲು...
ಅರಿಯದೇ ನಗುವೊಂದು ಅರಳಿ,
ಕಳೆದ ಆ ಸುಂದರ ಕ್ಷಣಗಳು ಮರಳಿ,
ಮೂಡುವುದು ಮೊಗದಲಿ ನಾಚಿಕೆಯ ಭಾವ...

ನಿನ್ನೂಮ್ಮೆ ನೆನೆದು,
ಆ ಮೌನಿ ನಾನಾಗಲು...
ಕಂಡ ಸಾವಿರ ಕನಸುಗಳಿಗೆ,
ರೆಕ್ಕೆ ಕಟ್ಟಿ ಬಣ್ಣ ಹೆಚ್ಚುತ್ತಿರುವ ನಿನಗೆ,
ಕೃತಜ್ಞತಾ ಭಾವದಿಂದ ಮತ್ತೆ ಮೌನಿ ನಾ..❤️
_Sushmita✍️





-


6 AUG 2020 AT 21:43

He is tall, she is short
He is silent, she is talkative
He is matured ,she is childish
He is caring,she is careless
He is cool, she is short-temperd
He likes to create good memories,and she likes to capture them❤️
Makes the perfect pair 😍

-


5 AUG 2020 AT 20:32

"ನನ್ನಾಕೆ"

ಕೊನೆವರೆಗೂ ಜೊತೆಗಿರುವೆ ಎಂದು ಕೈ ಹಿಡಿದಾಕೆ
ಒಂಟಿ ಮಾಡಿ ಹೊರಟಿಹಳು ಮುಪ್ಪಿನ ಕಾಲಕ್ಕೆ..!!ಪ!!

ಆಡಿ ಬೆಳೆದ ಮನೆಯ ತೊರೆದು
ನಮ್ಮನೆಯ ದೀಪ ಬೆಳಗಿದಾಕೆ..
ಬರೀಯ ಹೆಂಡತಿಯಲ್ಲ ನನ್ನಾಕೆ,
ಜೀವನಕ್ಕೊಂದು ರೂಪಕೊಟ್ಟು ಶಿಲ್ಪಿಯಾದಾಕೆ!!೧!!

ಕಷ್ಟ - ದುಃಖದಲಿ ಹೆಗಲು ಕೊಟ್ಟು
ನೋವಿನಲ್ಲೂ ನಲಿವು ತಂದಾಕೆ..
ಬರೀಯ ಹೆಂಡತಿಯಲ್ಲ ನನ್ನಾಕೆ,
ನನ್ ಕನಸಿಗೆ ರೆಕ್ಕೆ ಕಟ್ಟಿ ಗುರುವಾದಾಕೆ!!೨!!

ಕೈ ತುತ್ತು ನನ್ ಬಾಯಿಗೆ ಇಟ್ಟು
ತನ್ನ ಹಸಿವ ನೀಗಿಸಿಕೊಂಡಾಕೆ..
ಬರೀಯ ಹೆಂಡತಿಯಲ್ಲ ನನ್ನಾಕೆ,
ಮಗುವಿನಂತೆ ಮುದ್ದಿಸಿ ತಾಯಿಯಾದಾಕೆ!!೨!!


-


19 JUN 2020 AT 15:09

ಚಿಟ್ಟೆಯಂತೆ ಚಂದವಾಗಿ ಹಾರಾಡುತಿದ್ದ ಹುಡುಗಿ
'ಮೂರು ಗಂಟು' ಎಂಬ ನಂಟಿನಲಿ ಹೆಣ್ಣಾಗುವಳು,
ಹೆತ್ತವರ ಕನಸಿಗಾಗಿ, ನೆಂಟರಿಗೆ ಬೆರಗಾಗಿ
ದೀಪ ಬೆಳಗಿ ಇನ್ನೊಂದು ಮನೆಯ ಕಣ್ಣಾಗುವಳು...

ಆಕಾಶದೆತ್ತರ ಅವಳ ಸಾವಿರ ಕನಸು
ಕೊಟ್ಟಿಹರು ಕೈಯಲ್ಲಿ ಸಂಸಾರದ ಧನಸ್ಸು,
ನನಸಾಗದ ಕನಸುಗಳತ್ತ ಅವಳ ಮುನಿಸ್ಸು
ಸಾಗಿಹಳು ಹಾಕಿ ಮುಗುಳುನಗೆಯ ಮುಖಗವಸು..

ಸಂಬಂಧಗಳ ಬೆಸುಗೆ ಅರಿಯದ ವಯಸ್ಸಿನಲ್ಲಿ
ನಡೆಸಬೇಕಿದೆ ಸಂಸಾರವೆಂಬ ನೌಕೆ,
ಇನ್ನು ಆಸೆ-ಕನಸುಗಳ ಬಂಧಿಸಿ ಮನಸ್ಸಿನಲ್ಲಿ
ಸಮಯದ ಬೊಂಬೆಯಾಗಿ ಸಾಗುವಳು ಆಕೆ...

ಬದುಕಿದ್ದಳು ಇಷ್ಟು ದಿನ ಮಹಾರಾಣಿಯಂತೆ
ತಾನಿರುವ ಮನೆಯನ್ನು ಅರಮನೆಯಾಗಿಸಿ,
ಬದುಕಬೇಕಿನ್ನು ಪಂಜರದ ಗಿಣಿಯಂತೆ
ಇನ್ನೂಂದು ಮನೆಯನ್ನು ತನ್ನದಾಗಿಸಿ...
-Sushmita Betageri




-


22 NOV 2019 AT 22:52

..To A Devine soul..

Those were the days, where she....

Talked to you hours together,
Shown her anger for your hunger,
Adviced you to be Healthier,
Made you happy with silly mistakes,
Tortured you a times being childish,
And cared you like a child too

Now it's the time for her to,,,,,
Pray the God to convey her message,
Pray the God for your hunger,
Pray the God to keep you healthy,
Pray the God to make You happy,
Again she is childish while praying too
And she receives the same replies too...

_Your soul








-


21 NOV 2019 AT 23:31

ಜೀವನವೆಂಬ ನಾಟಕದಲಿ, ಎಲ್ಲರೂ ನಿನ್ನವರೇ
ಓ ಪಾತ್ರಧಾರಿಯೇ ಹೇಳು, ನೀ ಯಾರ ದೂರುವೆ?

ಕಣ್ಣೆದುರು ಹೊಗಳಿದವರು
ಬೆನ್ನ ಹಿಂದೆ ತೆಗಳುವವರು,
ಬಣ್ಣ ಬಣ್ಣದ ಮಾತುಗಳಲಿ
ನಿನ್ನ ಕತ್ತ ಕೊಯ್ಯುವರು,ನಿನ್ನ ಹಿತೈಷಿಗಳಿವರು
ನೀ ಯಾರ ದೂರುವೆ? ಎಲ್ಲರೂ ನಿನ್ನವರೇ..

ನಿನ್ನ ಸಾಧನೆಯ ಮೆಚ್ಚಿದವರು
ಹೊಟ್ಟೆಕಿಚ್ಚ ಪಡುವವರು
ಬೆನ್ನು ತಟ್ಟಿ ಮೇಲಿರಿಸಿ
ಏಣಿಯನೇ ಎಳೆಯುವರು, ಕೈ ತಟ್ಟಿ ನಗುವವರು
ನೀ ಯಾರ ದೂರುವೆ? ಎಲ್ಲರೂ ನಿನ್ನವರೇ..

ಬಾಳಲಿ ಬೆಳಕಾಗಲೆಂದು ಬಂದವರು
ಭತ್ತಿ ಇಟ್ಟು ಓಡುವವರು
ಅದಕೆ ಹಣೆಬರಹದ ನೆಪಕಟ್ಟಿ
ನಿನ್ನ ಪರಿಶ್ರಮವ ಕೊಲ್ಲುವವರು, ಹೀಗಿರುವಾಗ
ನೀ ಯಾರ ದೂರುವೆ? ಎಲ್ಲರೂ ನಿನ್ನವರೇ..
_Sushmita Betageri

-


15 NOV 2019 AT 22:34

"ಪ್ರಕೃತಿಯ ಕಿವಿಮಾತು..."

ಕೇಳು ಮಾನವ, ಕಿವಿಮಾತು ಹೇಳುವೆ
ನನ್ನ ಅಳಿವು ನಿನಗೂ ಅಳಿವೇ...

ಗಿಡವ ಕಡಿದು ನೀ ರಸ್ತೆ ಮಾಡಿದೆ
ಕೆರೆಯ ಮುಚ್ಚಿ ಮೈದಾನ ಮಾಡಿದೆ
ಮಾನವೀಯತೆಯ ಮರಿತ ನೀನು,
ಇತರ ಜೀವಿಗಳ ನಾಶಮಾಡಿದೆ..

ಹೆಚ್ಚುತ್ತಿರುವ ನಿನ್ನ ಸಂಕುಲಕೇ
ಕಾಡು ಉರುಳಿಸಿ ನಗರ ಕಟ್ಟಿದೆ
ನಿನ್ನ ಭವಿಷ್ಯವನೇ ಮರಿತ ನೀನು,
ಅಲ್ಪಾವಧಿಯ ಸುಖವ ಬಯಸಿದೆ..

ಹಸಿದು ಬಂದಾಗ ಹಣ್ಣು ಕೂಟ್ಟಿರುವೆ
ಬಿಸಿಲಲ್ಲಿ ಬೆಂದಾಗ ನೆರಳು ಕೂಟ್ಟಿರುವೆ
ನಾ ವರದಾನವೆಂಬುದ ಮರಿತ ನೀನು,
ಮಾನ ಬಿಟ್ಟಂತೆ ವತಿ೯ಸುತಿರುವೆ..

ನನ್ನ ನೀನು ಉಳಿಸಿ ಬೆಳೆಸಿದರೆ,
ಬಿಡುವುದಿಲ್ಲ ನಾ ನಿನ್ನ ಕೈ
ಇನ್ನಾದರೂ ಬದಲಾಗು ಮನುಜ,
ನನ್ನ ತಾಳ್ಮೆಗೂ ಮಿತಿ ಇದೆ...
_ Sushmita Betageri.



-


6 JUL 2019 AT 9:38

ಈ ಮುಂಗಾರಿಗೂ ನಿನ್ನ ನೆನಪಿಗೂ
ಅದೇನು ಸಂಬಂಧವೋ ತಿಳಿಯದಾದೆ,
ಮುಂಜಾನೆಯ ಮಂಜಿಗೂ ಹಕ್ಕಿಗಳ ಹಾಡಿಗೂ
ಇರುವ ಅನುಬಂಧದಂತಿದೆ..

ಚಿಗುರೆಲೆಯ ಮೇಲಿನ ಹನಿಯು
ಅಣುಕಿಸುವಂತಿದೆ, ನೋಡಿ ನನ್ನ ಒಂಟಿತನವ
ಮೈ ಸೋಕಿದ ಈ ಚಳಿಯು
ಬಯಸುತಿದೆ ನಿನ್ನ ಸನಿಹವ..

ಘಮಘಮಿಸುವ ಈ ಭೂಮಿಯು
ನೆನಪಿಸಿದೆ ನಿನ್ನ ಮೊದಲ ಸ್ಪಷ೯ಸುಖವ
ನಿನ ತೋಳಲಿ ಮೈ ಮರೆಯುವಾಸೆ ಕೇಳು,
ಸವಿಯುತ್ತಾ ಪ್ರಕೃತಿ ಸೌಂದರ್ಯವ..

-


Fetching Sushmita Betageri Quotes