ಹುಟ್ಟೋದೆಲ್ಲ ಅಮ್ಮನ ಗರ್ಭದಲ್ಲಿ,
ಸಾಯೋದೆಲ್ಲ ಭೂತಾಯಿಯ ಮಡಿಲಲ್ಲಿ,
ಏರಿಳಿತಗಳು ಕಾಣೋದು ಈ ಬದುಕಲ್ಲಿ,
ಬದುಕು ಕಟ್ಟುವುದು ನೂರಾರು ಕನಸಲ್ಲಿ,
ಕನಸುಗಳು ನನಸಾಗದೆ ಉಳಿಯುವುದು ಈ ಜನ್ಮದಲ್ಲಿ,
ಬಂದಂತೆ ಬದುಕಿ ಬಿಡಬೇಕು ಈ ಜೀವನದಲ್ಲಿ,
ಕಾರಣ,ಆಗಲೇ ಬರೆದು ಬಿಟ್ಟಿದ್ದಾನೆ ಆ ಬ್ರಹ್ಮ ನಮ್ಮ ಹಣೆಯಲ್ಲಿ..!!-
ನನ್ನ ಬಗ್ಗೆ ತಿಳಿಯದೆ..,
ಯೋಚಿಸಿದಾಗ••••
ನನ್ನ ಬಗ್ಗೆ ಯೋಚಿಸುವ ವಿಧಾನ ಸ... read more
ನನಗರಿವಿಲ್ಲದೆ ಮನದಲಿ ಬಂಧಿಯಾದೆ ನೀನು,
ನಿನಗರಿವಿಲ್ಲದೆ ನನ್ನ ಕಾವಲುಗಾರನಾದೆ ನೀನು,
ನನ್ನ ಮನಸಿನ ಭಾವನೆಯನರಿತ ಮಿಂಚಾದೆ ನೀನು,
ನನ್ನ ನಗು ಅಳುವಿನ ಸಾಗರದಲಿ ಅಲೆಯಾದೆ ನೀನು,
ಏನೇ ಆದರೂ ನನ್ನ ಮನದ ಮನೆಗೆ ಸಾಹುಕಾರ ನೀನು..!!
-
ನಿಂತಿರುವೆ ನಾ ಬರೆದ ಅಕ್ಷರಗಳ ಅರ್ಥ ತಿಳಿಯಲು,
ಆದರೆ,ನನಗೆ ಅರಿವಿಲ್ಲದೆ ಪ್ರತೀ ಅಕ್ಷರವೂ ಸಹ..
ನಿನ್ನ ನೆನಪಿನ ಜೊತೆ,ನನ್ನ ಮನಸಿನ..
ಅಂತರಾಳದ ಭಾವನೆಯಾಗಿದೆ..!!-
...ನಾನು, ನನ್ನ ಮನಸ್ಸು...
ನನ್ನವರು ಅಂದ್ರೆ ನನ್ನ ಉಸಿರು
ನಿಲ್ಲುವವರೆಗೂ ಜೊತೆ ಇರ್ತೀನಿ...
ನನ್ನವರೇ ಅನ್ಯವ್ಯಕ್ತಿಯರಾದಾಗ
ಅವರ ಉಸಿರಿನ ಗಾಳಿ...
ನನ್ನ ಬಳಿಬಾರದೆ ಕಾಯುತ್ತೀನಿ..!!-
ಹಾರಿ ಹೋಗುತ್ತಿದೆ ಈ ನನ್ನ ಉಸಿರು...
ರೆಕ್ಕೆ ಮುರಿದು ಹೋಗಿರುವ ಚಿಟ್ಟೆಯಂತೆ..!!
ಆಸೆಯಾಗುತ್ತಿದೆ ಮತ್ತೆ ಬರಲೆಂದು ಈ ಉಸಿರು..
ರೆಕ್ಕೆಯಿರುವ ಚಿಟ್ಟೆಯಾಗಿ ನಿನ್ನ ಕಾಣುವಂತೆ..!!
ಮುರಿದು ಹೋಗುತ್ತಿದೆ ಈ ನನ್ನ ಮನಸು...
ಬಡಿತವಿಲ್ಲದ,ಕೋಣೆಯಿಲ್ಲದ ಹೃದಯದಂತೆ...!!
ಚಿಗುರುತ್ತಿದೆ ಮತ್ತೆ ಈ ನನ್ನ ಮನಸು...
ನಿನ್ನ ಹೃದಯದಲಿ ಬಡಿತದ ಸದ್ದು ಕೇಳುವಂತೆ...!!
-
ಜೀವದಾಸೆಯ ಜೊತೆಗೆ...
ಉಸಿರು ನೀನಾಗಿರುವಾಗ...!!
ಒಂಟಿ ಅಂತ ಯೋಚಿಸೋಲ್ಲ,
ಕಷ್ಟ ಇದೆ,ಮುಂದೆ ಬರುತ್ತೆ ಅಂತ ಅನಿಸೋಲ್ಲ,
ಸಾವು ಹತ್ತಿರವಿದೆ ದೂರ ಆಗ್ತೀನಿ ಅಂತ ಎದರೋಲ್ಲ,
ಕನಸು ನನಸಾಗದೆ ಹೋಗುತ್ತೆ ಅಂತ ನೋವು ಪಡೋಲ್ಲ,
ದುಃಖ ಬಂದಾಗ ಖುಷಿ ಬಾರದೆ ಇರುತ್ತೆ ಅಂತ ಬೇಜಾರಾಗೊಲ್ಲ,
-
ನಿನ್ನ ನೋಡಲೆಂದೇ ಕಾಯುತ್ತಿರುವ...
ನಾನಿಂದು ಏಕೆ ಕುರುಡಿಯಾಗಿರುವೆ,
ನೀನೆ ನನ್ನ ಪ್ರೀತಿಯ ಬಡಿತವಾಗಿರುವೆ ಎಂದ!??
ನಿನ್ನ ನೆನೆಯುವುದೇ ನನ್ನ ಮನವಾಗಿರುವ...
ನಾನಿಂದು ಏಕೆ ಮೌನಿಯಾಗಿರುವೆ,
ನೀನೆ ನನ್ನ ಉಚ್ವಾಸ ನಿಚ್ವಾಸ ಎಂದ!??
-
ಹೂವಿನ ದಳಗಳು ಉದುರದೆ ಇದ್ದಾಗ ಸುಂದರ...
ಮನಸ್ಸು ಮುರಿಯದೆ ಇದ್ದಾಗ ಸುಂದರ...!!
ಹೂ ಬಾಡಿದಾಗ ಮುಳ್ಳುಗಳಿಂದ ಕಟುಕರ...
ಮನಸು ಬಾಡಿದಾಗ ಭಾವನೆಗಳಿಂದ ಕಟುಕರ...!!-
ಕಳೆದು ಹೋಗಿರುವ ವ್ಯಕ್ತಿಯನ್ನು ಹುಡುಕಬಹುದು....
ಆದರೆ, ಕಳೆದು ಹೋದ ವ್ಯಕ್ತಿಯ ನಂಬಿಕೆಯನ್ನು ಹೇಗೆ ಹುಡುಕುವುದು...!!-