ಸತ್ಯ ಹೇಳಲು ಹಿಂಜರಿಯದಿರು ಮನವೇ,
ಆದರೆ,
ನಮ್ಮವರ ಮನದ ಬೇಸರಕೆ ಕಹಿ ಸತ್ಯವ,
ಅಡಗಿಸಿಡು,
ಸಹನೆಯಿಂದ ಹೇಳೋ ಸತ್ಯ ಒಪ್ಪವಾಗುವುದು .-
ನಾನೊಬ್ಬಳು ಗೃಹಿಣಿ,ಮುದ್ದಾಗಿರೋ ಮಗಳಿದಾಳೆ,
ಬರಹಗಾರ್ತಿ ಏನಲ್ಲ,ಸುಮ್ನೆ... read more
ಮನದ ಮಾತುಗಳ ಹೇಳಲು,
ಕನಸು ನನಸಾಗಿಸಿಕೊಳ್ಳಲು,
ಮೌನ ಮಾತುಗಳಾಗಲು,
ಕಲ್ಪನೆ ವಾಸ್ತವತೆಗೆ ಹೊರಡಲು,
ಮನಸು ಮಾಡಬೇಕು ಮೊದಲು,
ಸತತ ಪ್ರಯತ್ನ ಇರಲು,
ಕಾಲ ಕೂಡಿ ಬರವುದು,
ದಾರಿ ಸುಲಭವಾಗುವುದು.-
ನಮಸ್ಕಾರ ಪ್ರಿಯನಿಗೆ ವಂದಿಸೋಣ
ವಿಘ್ನಗಳ ದೂರ ಮಾಡೆಂದು ಬೇಡೊಣ,
ಸಕಲರನು ಪೊರೆಯುವನು ಗಜಾನನ
ಶುದ್ಧ ಮನದಿ ನಿತ್ಯ ಪೂಜಿಸೋಣ
ಬಾಳ ಪಥದಿ ನಗುವ ಗರಿಕೆ ಹುಟ್ಟಲೆಂದು ಗರಿಕೆಯನ್ನೆ ಸಮರ್ಪಿಸೋಣ.
-
ಭಾವನೆಗಳು ಪರೀಕ್ಷಿಸುತ್ತಿದೆ,
ಆಂತರ್ಯವ ತೆರೆದಿಟ್ಟೆ,
ತುಟಿಯಂಚಲ್ಲಿನ ನಿಷ್ಕಲ್ಮಶ ನಗುವೇ ಉತ್ತರವಾಯ್ತು.-
ನಿನ್ನ ಮುದ್ದು ಮೊಗವನೊಮ್ಮೆ ತೋರೊ,
ನಿನ್ನ ಜೊತೆಗೂಡಿ ಕಣ್ಣಮುಚ್ಚಾಲೆ ಆಡುವಾಸೆ
ತುಂಟಾಟ ಆಡುವುದ ಕಂಡು ನಾ ಮಗುವಾಗುವಾಸೆ
ನಗುವ ನಿನ್ನ ನಯನದಿಂದ ನಿದ್ದೆಯನು ಕದಿಯುತಿರುವೆ
ಮೌನವಾಗಿ ನಿಂತು ಎನ್ನ ಹೃದಯವನೆ ಗೆಲ್ಲುತಿರುವೆ,
ನಿನ್ನ ಚೇಷ್ಟೆ ಬಲ್ಲೆ ನಾನು ಎಂದಳಾ ಯಶೋಧೆ
ನಿನ್ನಂತ ಸ್ನೇಹಿತನಿಲ್ಲ ಎನ್ನುವಳು ಆ ರಾಧೆ
ಏಳು ಜನುಮದಲ್ಲೂ ನಿನ್ನ ಒಲವ ಮಳೆಯ ಹರಿಸು
ಮೀರಾಳಂತ ಪ್ರೇಮವಿದು ಸದಾ ಕಾಣುತಿರುವೆ ನಿನ್ನದೇ ಕನಸು.-
*ಗಜಲ್*
ನೀನೊಬ್ಬನೆ ಬದುಕುವುದಾದರೆ ಸ್ವತಂತ್ರವಾಗಿ ಬದುಕಿಬಿಡು
ಸಂಬಂಧಗಳ ತೊರೆದು ದೂರ ಬಲುದೂರ ಉಳಿದುಬಿಡು,
ಎಲ್ಲರನು ಉದ್ಧರಿಸುವವ ನೀನೆ ಎನ್ನುವ ಭ್ರಮೆ ಬಿಟ್ಟು ಬಿಡು
ನಿನಗೆ ಉಪಕಾರ ಮಾಡಿದವರ ಮರೆತದ್ದು ಸರಿಯೇ ಹೇಳಿಬಿಡು,
ಎಲ್ಲರಿಗೂ ಕನಸುಗಳಿವೆ ನಿತ್ಯ ಕಟ್ಟುವರು ಆಸೆಯ ಗೂಡುಗಳ
ನಿನ್ನ ಮನದೊಳಗೆ ಮೆತ್ತಿರುವ ಅಹಂ ತೊರೆದು ಒಮ್ಮೆ ನಕ್ಕುಬಿಡು,
ಹಣ ಒಂದೆ ಬದುಕಲ್ಲ ಕಲ್ಮಷ ಇರದ ಮನಸು ಬಯಸಲ್ಲ ಕೇಡು
ಕಾಲ ಚಕ್ರ ಗಿರ ಗಿರನೆ ತಿರುಗಿದರೆ ನೀನು ಕೆಳಗಿರುವೆ ತಿಳಿದುಬಿಡು
ಇದ್ದಷ್ಟು ದಿನ ನಗುವ ಹಂಚು ನಿನ್ನ ಸುತ್ತಲೂ ಪ್ರೀತಿಯನ್ನೇ ಹರಡು
ಕೊನೆಯಾಗದ ಬಾಳಿನ ನೆಮ್ಮದಿಯ ಜೊತೆಗೆ ಹೊರಟುಬಿಡು.-
ಜೀವನವೇ ಒಂದು ಸ್ಪರ್ಧೆಯಾಗಿರಲು
ಸೋಲನ್ನೂ ಹಗುರವಾಗಿ ಸ್ವೀಕರಿಸಬೇಕು ಗೆಲುವಿನಷ್ಟೇ
ಭವಿತವ್ಯದಿ ವಿಜಯದ ಮುಗುಳ್ನಗು ಬೀರಲು.-