ಕನಸುಗಳು ಹೊಸ ದಾರಿ ಹುಡುಕುತಿದೆ..!!
ಕಾದ ಕಬ್ಬಿಣದ ಹಾಗೆ ಆಗಿದೆ ಜೀವನ
ಚಿಂತೆ ಇಲ್ಲ ಈಗ, ಹೊಂದಿ ಬದುಕುವೆ ನಾ..!!
ಪುಕ್ಕ ಹೆಣೆದು ಹಾರುವ ಹವಾಮಾನ
ಸೂಚಿಸಿದ ಹಾಗಿದೆ ನಿನ್ನದೇ ಈ ದಿನ.!
ಕನಸು ಹಳೆಯದು, ವರುಷ ಹೊಸದು
ಕೆಲ ಸಂವತ್ಸರದ ಆಚರಣೆ ಇದು..!!-
Live the Life with love, love... read more
She is a tough daughter
He is good at taking care of her..!
She feels love is gamble
Too hard to handle..!
Anger and loud , always rude
He never left her side in any mood..!!
His patience with her is insane
By seeing him , her mind was blown..!!!!
Now she knows everything happens for good
And the best blessing from god!!!
-Shetty
-
Life teaches you everything
If you are capable of doing things..!!!
Mock you with the fact
So don't react...!!
Break your hopes often
Try to be calm all the time..!!
Choke you with reality
Always be ready..!!
Leaves you at your lowest
Give your best...!!
Life has its own rules
Don't forget your goals..!!
It will break you and make you cry
And it's okay,don't gave up and try...!!
Raise up with all odds
You are born just to complete your deeds....!!!
- Supreema Shetty
-
ಕಣ್ಣೊಳಗೆ ಬಚ್ಚಿಟ್ಟ ಕನಸುಗಳು
ಕಣ್ಣಲ್ಲೇ ಹೆಪ್ಪುಗಟ್ಟಿ ಸತ್ತು ಹೋಯಿತು...!
ಬೇರೆ ಕನಸುಗಳಿಗೆ ಜಾಗವಿಲ್ಲದೆ
ಈ ಕಣ್ಣು, ಜಗವನೇ ಕುರುಡು ಎಂದಿತು..!!
-ಸುಪ್ರೀಮ ಎಂ ಶೆಟ್ಟಿ.-
A little cute messages always keeps a relationship in track..! No need much time to admit that you miss them or adore them in your own ways..!!
-
We all grown up in such way that ,
We learnt to give up on things ..!
which will affect our family's happiness,
And it's not about us anymore..!!!-
ಕುರುಡು ಕಾಂಚಾಣದ ಮುಂದೆ
ಭಾವನೆಯೊಂದು ಸೊನ್ನೆ
ಹಣವಿದ್ದರೆ ಎಲ್ಲಾ ಸಂಭಂದ ಹತ್ತಿರ
ಇದ್ದರೂ ನೂರಾರು ಮೈಲಿ ದೂರ....!!!!
ಬಗುಲಲ್ಲಿ ಇದ್ದರೂ ಕಾಣದೆ ಹೋಗುವೇವು ಒಮ್ಮೊಮ್ಮೆ,
ಜೇಬಿನಲ್ಲಿ ಇರದಾಗ ಒಂದೂ ಕಾಸು...!!!
ಇಲ್ಲಿ ಸಂಭಂದ ಹುಟ್ಟುವುದು, ಬೆಳೆಯುವುದು ಹಣದಿಂದ
ಅದೇ ಇಲ್ಲವೆಂದಾಗ ಹೆಣವಾದರು ಬಾರದ ಜನ ಮಂದೆ...!!!
ಬದುಕು ಹೇಳಿಕೊಡುವುದು ಪಾಠ,
ಜೀವವಿಲ್ಲದ ಕಾಗದದ ಕಂತಿನಲ್ಲಿ
ಅದ ಕಲಿಯದೆ ಹೋದರೆ ನಿನಗಿಲ್ಲ ಮರ್ಯಾದಿ
ಈ ಜಗದಲ್ಲಿ....!!!!
ಸುಪ್ರೀಮ ಎಂ. ಶೆಟ್ಟಿ.-
ಸುತ್ತಲೂ ಹಸುರಿನ ಬನ
ಮೋಡ ಕವಿದ ವಾತಾವರಣ
ಮೂಡುತಿದೆ ನನ್ನೊಳಗೆ ನಗುವಿನ ಪಯಣ
ಯಾರು ಬೇಕೆಂಬ ಹಂಬಲ ಇಲ್ಲದ ಈ ದಿನ
ಇದ್ದಾಗ ನನ್ನ ಕೈಯಲ್ಲಿ ಪುಸ್ತಕ ಎಂಬ ಗೆಳೆತನ...!!
ಸುಪ್ರೀಮ ಎಂ. ಶೆಟ್ಟಿ
-
ಅವಳ ನಗು ಹೇಳದು ಅವಳ ಕಥೆ
ಕಣ್ಣ ಕಾಡಿಗೆಯ ಹಿಂದೆ ಅಡಗಿ ಕುಳಿತಿದೆ ಎಲ್ಲಾ ವ್ಯಥೆ...!!
ನಗು ನಗುತಾ ಮಾತಾಡೋ ಅವಳ ನೋಡಿ
ಅವಳಿಗೇನು ಚಿಂತೆಯಿಲ್ಲ ಎಂಬುದು ಸೋಗು..!
ಬೆನ್ನ ಹಿಂದೆ ಮಾತಾಡೋ ಮುನಿಸಿನ ಮಾತು ಕಟ್ಟಿಟ್ಟದ್ದು
ಕೇಳಿದರೂ ಕೇಳದಂತೆ ಇರಬೇಕೆಂಬುದು ಇವಳ ಗುಟ್ಟು..!!
ನಯ ನಾಜೂಕು ಯಾರಿಗೂ ತಿಳಿದಿಲ್ಲ ಇವಳ ಬಿಟ್ಟು
ತಾಳ್ಮೆ ಗೆ ಕೊನೆಯಿಲ್ಲ, ಮಡಕೆ ತುಂಬುವುದಿಲ್ಲ...!
ಆಗಿದ್ದರೂ ಒಂಟಿ ಮರ , ಕಲ್ಪವೃಕ್ಷ ದ ವ್ಯವಹಾರ
ಪ್ರೀತಿ ಪ್ರೇಮಕೆ ಮಾದರಿ ,ಅವಳು ಅಮರ...!!!!
ಸುಪ್ರೀಮ ಎಂ. ಶೆಟ್ಟಿ.-
ಅವಳ ಕಂಡ ಮೊದಲ ದಿನ
ಅವನ ಮನದಲ್ಲೇನೋ ತಲ್ಲಣ
ಕಣ್ಣಿನ ಸಂದೇಶ ಅವಳಿಗೆ ಅರಿವಾಯಿತ ಎಂಬ ಪ್ರಶ್ನೆ
ಸ್ನೇಹಿತರು ಕಾಳೆಯುತಿಹರು ಕಂಡು ಇವನ ಚೇಷ್ಟೆ..!
ಹೆಣ್ಣ ಕಂಡು ಕಣ್ಣು ಹೊಡೆಯದ ಪೋರನಿಗೆ
ಸೀತೆಯಂತೆ ಕಂಡಿರಬಹುದೇ..! ಅಥವಾ ರಾಧೆಯ ಹೋಲುವ ಮೊಗ...??
ದೇವಸ್ಥಾನಕ್ಕೆ ನಾ ಒಲ್ಲೆ ಎಂಬವನ ಪ್ರದಕ್ಷಿಣೆ
ನಡೆಯುತ್ತಿದೆ ದಿನೇ ದಿನೇ ನೀಡದೆ ಗುರುದಕ್ಷಿಣೆ...!!
ವಸಂತ ಋತು ಮುಗಿದರೂ, ಮುಗಿಯಲಿಲ್ಲ ಈ ಮೆರವಣಿಗೆ
ದೇವಿ ಬಾರದಿದ್ದ ನೋಡಿ ಇವನು ನೋವಿನ ಸುಳಿಗೆ..!!
ಬಂದೇ ಬರುವಳು ಎಂಬ ಇವನ ನಂಬಿಕೆ
ಪ್ರೀತಿಗೆ ಸಾಲದೇ ಈ ಕಾಣಿಕೆ....!!!
ಸುಪ್ರೀಮ ಎಂ. ಶೆಟ್ಟಿ.
-