Sumanth Mahesh Gowda   (Sumanth Mahesh Gowda)
27 Followers · 7 Following

Phone 8971979169
Joined 3 September 2018


Phone 8971979169
Joined 3 September 2018
3 JAN 2022 AT 22:05

ಅಪ್ರತಿಮ ಆಕೃತಿಯೊಂದು ನಭೋಮಂಡಲದ ಉಲ್ಕೆಯಲ್ಲಿ ಮಿರಮಿರ ಮಿಂಚುತಿತ್ತು ...
ಭೂಮಿಯ ಅಧರ್ಮವ ನೋಡಿ ದೇವತೆಯಾಗಿ ಧರೆಗಿಳಿದಿತ್ತು ...
ಸಹಸ್ರ ಸೂರ್ಯ ಒಂದೇ ಸಮಯದಲ್ಲಿ ಉದಯಿಸುವಂತೆ ಉಜ್ವಲಿಸುತಿತ್ತು ...
ಧರ್ಮವನ್ನ ಉಳಿಸಲು ಮಾನವ ರೂಪ ತಾಳಿತ್ತು ...
ಪ್ರಕೃತಿಯು ನಿನ್ನ ನೋಡಿ ಕ್ಷಣಕಾಲ ದಂಗಾಯ್ತು ಅಮ್ಮ ...
ಕಲ್ಲಂತ ಕಷ್ಟಗಳು ನೀರಾಗಿ ಹರಿದಿಹವು..
ಬೆಟ್ಟದಂತ ಕನಸುಗಳು ಹಸಿರಂತೆ ನನಸಾಗಿಹವು...
ನಿನ್ನ ನೆನೆದರೆ ಅಮ್ಮ
ವಿಂಗಡಣೆಯಾದ ನನ್ನ ಬಾವನೆಗಳ ಬದುಕನ್ನ ವ್ಯವಸ್ಥಿತವಾಗಿ ಜೋಡಿಸಿದೆ ..
ಕೊಲ್ಲುವಂತ ವೈರಿಗಳ ನಿವಾಳಿಸಿ ನೀ ಎಸೆದೆ...
ನಿನಗಿಲ್ಲ ಸರಿಸಾಟಿ ಕೋಡಿಹಳ್ಳಿಯಮ್ಮ..
ನಿನ್ನ ಧ್ಯಾನ ಮಾಡುತ್ತಿರಲು ಹಾಲು ಸಕ್ಕರೆ ಸವಿಪಾನ ಕುಡಿದಂತೆ
ನಿನ್ನ ಪೂಜೆ ನೋಡುತ್ತಿರಲು ಜೇನು ಕುಡಿದಂತೆ
ನಿನ್ನ ಉಸ್ತ್ಸವ ಕಣ್ಣತುoಬಿಕೊಳ್ಳಲು ನನಗೆ ಇನ್ನು ನೂರು ಜನ್ಮ ಬೇಕು ದ್ಯಾಮಲಾಂಬ ....
ಗಂಧವನ್ನು ಮೈಗಚ್ಚಿ ... ಸಿಡಿ ಹರಕೆಯ ತರುವೆವು ನಾವು ಕಾಪಾಡು ಓ ಕೆಂಚಾಂಬ...
ಅಮ್ಮ ಅಮ್ಮ ನಿನ್ನಿಂದ ಪಡೆದ ಈ ಜನ್ಮ ನಿನಗಾಗಿ ಮುಡಿಪು ಕೋಡಿಹಳ್ಳಿಯಮ್ಮ...
ಜೈ ಕೋಡಿಹಳ್ಳಿಯಮ್ಮ...

-


17 DEC 2021 AT 19:38

ನಾಚಿ ನೀರಾದ ಅಂದವೆ
ನನ್ನನೆ ಆವರಿಸಿ ಹೃದಯದ
ಬಡಿತದಲ್ಲೆ ಮಿಡಿಯುತಿರುವೆ
ಕಾಯಿಸದೆ ಸತ್ತಾಯಿಸದೆ ನನ್ನ ಸೇರು ಬಾ

ಸುಮ್ಮನಿದ್ದ ಮನಸಿಗೆ
ಸುಂದರ ಕಣ್ಣುಗಳಲಿ ಆಕರ್ಷಿಸಿ
ಆಸೆಗಳಿಗೆ ಬಣ್ಣ ಬಳಿದು
ಮನಸಿನ ಮನಸ್ಸನು ಕದ್ದು ಓಡಬೇಡ
ಜೊತೆಯಲ್ಲಿಯೇ ನಾ ಬರುವೆ ಬಾ

ಪ್ರೀತಿಯಾ ಸಾಗರದಲ್ಲಿ
ನಿನ್ನದೆ ನೆನಪುಗಳಲಿ ನಿನ್ನ ಜೊತೆಯಲ್ಲಿಯೇ ಮುಳುಗೊಗಿರುವೆ
ಇನ್ನಾದರೂ ಕಾಯಿಸಬೇಡ ಬಾ

ನಿನ್ನಾ ಒಲವಲ್ಲಿ
ನನ್ನ ಬೆರೆಸಿಕೊಂಡು
ನನ್ನ ಎದೆಯೋಳಗೆ ರಾಣಿಯಾಗಿ
ಸೇರಿಕೊಳ್ಳು ಬಾ.....
🍁🍁🍁🍁🍁🍁🍁🍁🍁🍁🍁

-


17 DEC 2021 AT 19:36

ನಾಚಿ ನೀರಾದ ಅಂದವೆ
ನನ್ನನೆ ಆವರಿಸಿ ಹೃದಯದ
ಬಡಿತದಲ್ಲೆ ಮಿಡಿಯುತಿರುವೆ
ಕಾಯಿಸದೆ ಸತ್ತಾಯಿಸದೆ ನನ್ನ ಸೇರು ಬಾ

ಸುಮ್ಮನಿದ್ದ ಮನಸಿಗೆ
ಸುಂದರ ಕಣ್ಣುಗಳಲಿ ಆಕರ್ಷಿಸಿ
ಆಸೆಗಳಿಗೆ ಬಣ್ಣ ಬಳಿದು
ಮನಸಿನ ಮನಸ್ಸನು ಕದ್ದು ಓಡಬೇಡ
ಜೊತೆಯಲ್ಲಿಯೇ ನಾ ಬರುವೆ ಬಾ

ಪ್ರೀತಿಯಾ ಸಾಗರದಲ್ಲಿ
ನಿನ್ನದೆ ನೆನಪುಗಳಲಿ ನಿನ್ನ ಜೊತೆಯಲ್ಲಿಯೇ ಮುಳುಗೊಗಿರುವೆ
ಇನ್ನಾದರೂ ಕಾಯಿಸಬೇಡ ಬಾ

ನಿನ್ನಾ ಒಲವಲ್ಲಿ
ನನ್ನ ಬೆರೆಸಿಕೊಂಡು
ನನ್ನ ಎದೆಯೋಳಗೆ ರಾಣಿಯಾಗಿ
ಸೇರಿಕೊಳ್ಳು ಬಾ.....
🍁🍁🍁🍁🍁🍁🍁🍁🍁🍁🍁

-


13 MAY 2021 AT 20:09

ತಿಳಿ ಆಗಾಸದ ಕಡಲಲ್ಲಿ
ಮೋಡವ ದೋಣಿಯ ಮಾಡಿ
ತೇಲುತ್ತಿದ್ದ ಸುಂದರಿ ನೀನ್ಯಾರೆ.

ಬೆರಗು ಗಣ್ಣಿನಲ್ಲಿ ನಸುನಗೆಯ ಚೆಲ್ಲಿ
ನಕ್ಷತ್ರಗಳನ್ನು ಚುಕ್ಕಿಯ ಮಾಡಿ
ನನ್ನ ಹೃದಯದ ಮೇಲೆ ರಂಗೋಲಿ
ಬಿಡಿಸುವಂತೆ ಕಂಡವಳ್ಯಾರೆ.

ಚಂದ್ರನಿಗೆ ಬೆಳದಿಂಗಳ ತುಂಬಿ
ಒಲವಿನೊಲೆಯ ಅವನ ಬೆನ್ನಮೇಲೆ ಗೀಚಿ
ಓದಿ ನೋಡೆಂದು ಕೂಗಿ ಹೇಳಿದ
ಸುಂದರಿ ನೀನ್ಯಾರೆ.

-


28 APR 2021 AT 14:06

ಸತ್ತರೆ ಜನ ಸೇರಲ್ಲಾ..ಕೇರಿಯಲಿ ಮೆರವಣಿಗೆಯಿಲ್ಲಾ
ಚಟ್ಟಕ್ಕೆ ಹೆಗಲಿಡೋರಿಲ್ಲಾ..ಚಟ್ಟವೆಂಬುದೇ ಇಲ್ಲಾ
ಹೂ ಬೀರೋರಿಲ್ಲಾ.. ಮಂಡಕ್ಕಿ ತೂರೋರಿಲ್ಲಾ
ತಮಟೆ ಸದ್ದಾಗಲ್ಲಾ..ಸತ್ತ ಸುದ್ದಿಯ ಶಬ್ದ ಸಂದೇಶವಿಲ್ಲಾ

ಧಾರ್ಮಿಕ ಕಾರ್ಯಗಳಿಲ್ಲಾ..ಆತ್ಮಶಾಂತಿಯ ನಂಬುಗೆಯಿಲ್ಲ
ಪ್ರೀತಿ ಪಾತ್ರರಿಗೆ ದರ್ಶನವಿಲ್ಲಾ..ತಬ್ಬಲಿ ಶವದಂತೆ ಆಯಿತಲ್ಲ

ಸುತ್ತಲೂ ಹೆಣಗಳ ರಾಶಿ..ಬೂದಿಯಾಗಲು ಉದ್ದದ ಸರತಿ
ಸತ್ತವನೇ ಪುಣ್ಯವಂತ ಎನಿಸೋ ದುಸ್ಥಿತಿ..!

ಇದು ಕೊರೊನಾ ಸೃಷ್ಟಿಸಿದ ಭೂಲೋಕದ ನರಕ
ನಿಮ್ಮ ಸುರಕ್ಷತೆಯಲ್ಲಿ ನೀವಿರಿ ಮಾಸ್ಕ್ ಧರಿಸಿ ಸಮಾಜಿಕ ಅಂತರ ಪಾಲಿಸಿ 🙏🙏🙏🙏🙏

#coronavirusindia

-


28 APR 2021 AT 14:05

ನನ್ನ ಹೆತ್ತ ತಾಯಿಗೆ ಈ ದಿನದ ಅರ್ಪಣೆ
ಅಮ್ಮ ಕೊಟ್ಟ ಹೃದಯನ ಚೂರು ಮಾಡಿ ಹೋಗೋ ಪ್ರೀತಿ ನನಗೆ ಬೇಕಿಲ್ಲ
ಅವಳ ಕಷ್ಟದ ದಿನಗಳಲ್ಲಿ ನನ್ನ ರಾಜನಾಗಿ ಬೆಳೆಸಿದವಳು ಅವ್ವ
ಅವಳ ಕಣ್ಣಲ್ಲಿ ಕಣ್ಣೀರು ತರಿಸುವ ದಿನ ಬೇಡ ದೇವಾ
ಸಂಜೆಗೆ ಬಾಡಿ ಹೋಗೋ ಹೂವು ಕೊಟ್ಟು ಪ್ರೀತಿ ಮಾಡಿ ಕೊನೆಗೆ ಆ ಹೂವನ್ನ ಕಿವಿಮೇಲೆ ಇಟ್ಟು ಹೋಗೋ ಖಾಯಿಲೆಯೇ ಈ ಪ್ರೀತಿ ಅನ್ನೋ ವೈರಸ್ ..
ಇದಕ್ಕೆ ಇನ್ನು ಔಷದಿ ಸಿಕ್ಕಿಲ್ಲ ...
ಈ ಖಾಯಿಲೆಯ ಅವಧಿ ಕೇವಲ ನಿನ್ನ ಜೇಬಲ್ಲಿ ದುಡ್ಡು ಇರೋವರೆಗೂ ಮಾತ್ರ..
ಆದ್ರೆ ಅಮ್ಮನ ಪ್ರೀತಿ ಸಾಯೋವರೆಗೂ..
ಅವಳ ಕಣ್ಣೀರು ನಿನ್ನ ಜೀವನ ಪೂರ್ತಿ ಶಾಪವಾಗಿ ಇರುತ್ತೆ ..
10ಜನರನ್ನ ಪ್ರೀತಿ ಮಾಡಿದ್ರು ಕೈಕೊಟ್ಟು ಹೋಗ್ಬಹುದು
ಆದ್ರೆ ಹೆತ್ತ ತಾಯಿಯ ಪ್ರೀತಿ ಅದು ನಿರಂತರ ....

-


23 DEC 2020 AT 20:45

Free your heart from any hatred. Free your mind from any worries. Live simply. Give more. Expect less.

-


23 DEC 2020 AT 20:44

ಜಗವೆಲ್ಲ ಮಲಗಿದ್ದರು ಅವಳೊಬ್ಬಳೆ ಅಳುತಿದ್ದಳು
ನಿನ್ನ ಜೀವ ಈ ಭೂಮಿಯ ಸಂಪರ್ಕ, ನಿನ್ನ ದೇಹ ನಿನ್ನವರ ಸಂಪರ್ಕ ಕಳೆದುಕೊಳ್ಳಲು ರೆಡಿ ಆಗಿತ್ತು
ತೊಟ್ಟಿಲಿನಿಂದ ಚಟ್ಟದವರೆಗೆ ಯಾರಿಗೂ ಕೆಡನ್ನ ಬಯಸದ ನೀನು ಶಾಶ್ವತ ನಿದ್ರೆಗೆ ಜಾರಿದ್ದೆ
ನಿನ್ನ ಮಡದಿಯನ್ನ ಕಣ್ಣೆತ್ತಿ ನೋಡಿದವರ ಕಣ್ಣು ಕೀಳುವ ಜಾಯಮಾನದವನು, ಈಗ ನಿನ್ನ ಸತಿ ಮಾಂಗಲ್ಯ ಕಳಚಿ,ಬಳೆಯನ್ನು ನಿನ್ನೆದುರು ಹೊಡೆದರು ಎದ್ದು ಬರಲಿಲ್ಲ ನೀನು ಯಾಕೆ ..???
ಸಾವಿನಲ್ಲಿ ಸಾಗರದಂತೆ ಹರಿದುಬಂದ ಜನರ ಕಣ್ಣೀರು ನಿನ್ನ ಬದುಕಿಸಲಿಲ್ಲ ...
ನಿನ್ನ ಚಿತೆಗೆ ಬೆಂಕಿ ಹಚ್ಚುವಾಗ ಬೆಂಕಿಯು ಕೂಡ ಮೌನವಾಗಿ ಉರಿಯಲು ಹಿಂಜರಿಯುತಿತ್ತು, ಅದಕ್ಕೂ ನಿನ್ನ ಸುಡಲು ಬೇಸರವೇ ...???
ಬೆಂಕಿ ಉರಿಯುವಾಗ ಮಳೆಬಂದು ಆ ಬೆಂಕಿಯನ್ನು ನಂದಿಸಿತು ಮಳೆಗೂ ನಿನ್ನ ಮೇಲೆ ಅಷ್ಟೊಂದು ಪ್ರೀತಿಯೇ ...???
ಜಾರಿದ ಕಣ್ಣೀರನ್ನ ಸೆರಗಿನಿಂದ ಹೊರೆಸುತ್ತ ನಿನ್ನ ಮಡದಿ ನಿನ್ನ ನೋಡಿ ಹಿಂತಿರುಗುವಾಗ ಮತ್ತೆ ಮಿಂಚೋoದು ಕಾಡಿತ್ತು ಆ ಮಿಂಚಿಗೂ ನಿನ್ನಮೇಲೆ ಅಷ್ಟೊಂದು ಮಮತೆಯೇ ...???
ನನಗೆ ತಿಳಿಯದು
ನಿನ್ನ ದೇಹ ಸಾವಿಗೆ ಸ್ಪಂದಿಸಲಿಲ್ಲ ಆದ್ರೆ ಪ್ರಾಣ ಪಕ್ಷಿ ಹಾರಿ ಹೋಯ್ತು
ಸತ್ತ ದೇಹ ಸುಡಲಿಲ್ಲ ಆದರೂ ಪಂಚಭೂತಗಳಲ್ಲಿ ಲೀನವಾಯ್ತಿ ...
ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ ...

-


20 DEC 2020 AT 9:17

-:ಅವ್ವ:-


ನಿನ್ನ ಮುದುಡಿದ ಮೈ ಆಯಾಸ,
ಬಿಳಿ ತಲೆಯ ಕೂದಲು ಆಯುಶ್ಯ,ನೋಟ ತ್ಯಾಗವನ್ನ ಹೇಳಿದರೆ ...
ನಿನ್ನ ಕಣ್ಣುಗಳು ಮಾತ್ರ ನನ್ನ ಬೆಳೆಸಲು ನೀನು ಪಟ್ಟ ಕಳವಳ ಮತ್ತು ಕಷ್ಟದ ಕಥೆ ಹೇಳುತ್ತಿವೆ ...
ಪ್ರತಿಯೊಬ್ಬ ಮನುಶ್ಯ ನೋವಾದಾಗ ನೆನೆವ ಮೊದಲ ನುಡಿ ಅಮ್ಮ....
ಸಲಹೆಗಾರ್ತಿ,ಶಿಕ್ಷಕಿ,ತ್ಯಾಗಿ ಮತ್ತೆ ಮಕ್ಕಳ ಖುಷಿಯಲ್ಲೇ ಸಂತೋಷ ಕಾಣೋ ಏಕೈಕ ವ್ಯಕ್ತಿ ಅದು ಅಮ್ಮ ...
ಪ್ರತಿಯೊಬ್ಬ ಹುಡುಗನು ಬದಲಾದ ಜೀವನದ ಕಾಲದಲ್ಲಿ ದುಡಿಮೆಗಾಗಿ ಪರ ಊರಿಗೆ ಬಂದರು ಅವನಿಗೆ ಮನದಲ್ಲಿ ಒಂದು ನೋವು ಇರುತ್ತೆ ಅದು ಅಮ್ಮನ ಬಿಟ್ಟು ಆ ಊರಲ್ಲಿ ಇರುವುದು ....
ಅ್ತಸ್ಟಿಲ್ದೆ ಹೇಳ್ತಾರಾ ತಾಯೀನೇ ದೇವರು ಅಂತ ...

-


18 DEC 2020 AT 21:17

ನಿನ್ನಲ್ಲಿ ದುಡ್ಡು ಇದ್ದರೇನು ಜಗತ್ತಿಗೆ ಅನ್ನ ನೀಡಲು ನಿನ್ನಿಂದ ಸಾಧ್ಯವೇ ...???
ನಿನ್ನಲ್ಲಿ ಅಂದ ಇದ್ದರೇನು ನಭೋಮಂಡಲವನ್ನ ಬೆಳಗಲು ಸಾಧ್ಯವೇ ...???
ನಿನ್ನಲ್ಲಿ ಸಕಲ ವಿದ್ಯೆ ಇದ್ದರೇನು ನಕ್ಷತ್ರಗಳ ಎಣಿಸಲು ಆಗುವುದೇ ...???
ನಿನ್ನಲ್ಲಿ ಶಕ್ತಿ ಇದ್ದರೇನು ಆಕಾಶವನ್ನ ಮಡಿಚಲು ಸಾಧ್ಯವೇ ...???
ಮೇಲೊಬ್ಬ ಎಲ್ಲವನ್ನ ನೋಡುತ್ತಾನೆ
ನೀನು ಇಲ್ಲಿ ಕೇವಲ ಮಸಣದ ಹೂವು ...
ನಿನ್ನ ದೇಹ ಬೆಳೆದರು ಆತ್ಮ ಹೊರಟ ಮೇಲೆ ನಿನ್ನ ತೂಕ ಇಲ್ಲದ ಶವ ತೇಲುತ್ತೆ, ಬಾರ ಇರುವುದು ಕೇವಲ ಆತ್ಮಕ್ಕೆ ಹೊರೆತು ನಿನ್ನ ದೇಹಕ್ಕಲ್ಲ
ನಿನ್ನ ಸಂಬಂದಿಕರು ನಿನ್ನ ಕೊನೆಯಾತ್ರೆ ನಡುವೆ ಬಿಟ್ಟು ಹೊರಡುತ್ತಾರೆ ಸೂತಕ ಅನ್ನೋ ಭ್ರಮೆಯಲ್ಲಿ....
ಇನ್ನಾದರೂ ನೀನು ಬದುಕು ನಾಲ್ವರು ಮೆಚ್ಚುವಂತೆ ...

-


Fetching Sumanth Mahesh Gowda Quotes