ದೂರವಿದ್ದರೂ ಹತ್ತಿರದಲ್ಲಿರುವಂತೆ ಭಾಸವಾಗುವ ಅದ್ಭುತ ಭಾವವೇ ಸಾಂಗತ್ಯ.
-
https://www.facebook.com/suma.s.5815
ನನ್ನನ್ನು ಪ್ರತಿಲಿಪಿಯಲ್ಲಿ ಹಿಂಬಾಲಿಸಿ :
htt... read more
जीवन में किसी भी मोड़ पर
दो विकल्प मिल थे है।।
मजबूर होना या मज़बूत होना।।
हम क्या चुनते हैं, ए बोहोत मायने रखता है।।-
ಎಂದಿಗೂ ನಮ್ಮ ಜೀವನದ
ಅವಿಭಾಜ್ಯ ಅಂಗ.
ಬೇಕೆಂದರು, ಬೇಡವೆಂದರು,
ಬಂದ ಫಲವನ್ನು ಸ್ವೀಕರಿಸಲೇ ಬೇಕು.-
ಇಹ ಲೋಕದ ಮೋಹವ ತೊರೆದು,
ಕೃಷ್ಣ ಭಕ್ತಿಯ ಸಾರವ ಅರಿಯದ ಹೊರತು,
ಮಾನವ ಜನ್ಮ ಸಾರ್ಥಕವಾಗದು.
ಮೃತ್ಯುಲೋಕಕ್ಕೆ ಮತ್ತೆ ಮತ್ತೆ ಜನ್ಮ
ತಳೆದು ಬರುವ, ಚಕ್ರವು ನಿಲ್ಲದು.-
ಕತ್ತಲಿಲ್ಲದೆ ಬೆಳಕಿಗೆ ಬೆಲೆ ಇಲ್ಲ.
ನೋವಿಲ್ಲದೆ ನಲಿವಿಗೆ ಯಾವ ಪ್ರಾಮುಖ್ಯತೆ ಇಲ್ಲ.
ಸಾವಿಲ್ಲದೆ ಜನನ ಹಾಗೂ ಜೀವನಕ್ಕೂ ಕೊನೆಯಿಲ್ಲ.
ಆದರೇ, ಮನುಷ್ಯ ಮಾತ್ರ
ಕತ್ತಲಿಗೆ ಹೆದರುತ್ತಾನೆ, ನೋವಿಗೆ ಕುಗ್ಗುತ್ತಾನೆ.
ಮರಣದ ಭಯ ಹೊತ್ತು ಬದುಕುತ್ತಾನೆ,
ಆದರೇ, ಕತ್ತಲು ಮತ್ತು ಬೆಳಕು,
ನೋವು ಮತ್ತು ನಲಿವು
ಜನನ ಮತ್ತು ಮರಣ ಎಲ್ಲವೂ
ಜೀವನದ ಅವಿಭಾಜ್ಯ
ಅಂಗ ಅಂತ ಯಾವಾಗ ತಿಳಿಯುತ್ತಾನೋ.
ಆಗ ಎಂತಹ ಸಂದರ್ಭದಲ್ಲೂ ತಟಸ್ಥ ಭಾವ ತಾಳಿ,
ಎಲ್ಲವನ್ನು ಪ್ರೀತಿಯಿಂದ ಸ್ವೀಕರಿಸುತ್ತಾನೆ.
💫✨⭐🌟⭐✨💫
ಈ ಹೊಸ ವರುಷ ಎಲ್ಲರ ಜೀವನಕ್ಕೂ
ಹೊಸ ಹರುಷ ತರಲಿ, ಅನ್ನುವದಕ್ಕಿಂತ
ಎಲ್ಲಾ ಸಂದರ್ಭವನ್ನು ತಟಸ್ಥ ಭಾವದಿಂದ
ಸ್ವೀಕರಿಸುವ ಭಾವ ಮೂಡಲಿ ಅಂತ ಆಶಿಸುತ್ತಾ.
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.-
ವರುಷ ಸಹ ಉರುಳಿತು ಕ್ಷಣದಂತೆ.
ಮರೆಯಾದರು ಎಂದಿಂದಿಗೂ ನೀ ಉಳಿದಿರುವೆ
ಮನದಲ್ಲಿ, ಅಚ್ಚಳಿಯದೆ ನೆನಪಂತೆ.-
ಸಾಧ್ಯವಾದರೆ ಜೀವನಕ್ಕೆ ಬಣ್ಣ
ತುಂಬುವ ಪ್ರಯತ್ನ ಮಾಡು,
ಮುಖಕ್ಕೆ ಬಣ್ಣ ಹಚ್ಕೊಂಡು,
ನಮ್ಮ ಜೊತೆ ನಮ್ಮವರಂತೆ
ನಟಿಸೋರು ಘಳಿಗೆಗೊಮ್ಮೆ
ಸಿಗುತ್ತಲೇ ಇರ್ತಾರೆ.-
ಹೇಳಬೇಕು ಅಂತ ಇರೋದನ್ನ,
ಹೇಳಬೇಕಾಗಿರೋರಿಗೆ ಹೇಳಿಬಿಡಿ.
ಮುಂದೊಂದು ದಿನ ಹೇಳಬೇಕು ಅಂತ ಅನಿಸಿದಾಗ,
ಹೇಳೋ ಅವಕಾಶ ಸಿಗದೆ ಹೋಗಬಹುದು.-