ಲೇಖನಗಳ ವಿಷಯ
1.ಭ್ರಷ್ಟಾಚಾರ ರಾಜಕಾರಣ ಮತ್ತು ಸಾಹಿತ್ಯ ನಿರ್ಮಾಣದ ಸವಾಲುಗಳು
2. ಐತಿಹಾಸಿಕ ಸ್ಥಳಗಳ ಪ್ರಾಮುಖ್ಯತೆ
3. ಹಳ್ಳಿಗಳಲ್ಲಿ ಗ್ರಂಥಾಲಯದ ಮಹತ್ವ
4. ಬೀದಿ ಮಕ್ಕಳ ಬದುಕು
5. ಸಾಧನೆ ಎಂಬುದು ಸಾಧಕನ ಸ್ವತ್ತು
6. ಕನ್ನಡ ಕಟ್ಟುವಲ್ಲಿ ಯುವಕರ ಪಾತ್ರ
7. ನಾವು ಮತ್ತು ಸಮಾನತೆ
8.ನಮ್ಮೂರು ನಮಗೆ ಹೆಮ್ಮೆ
9. ರಂಗಭೂಮಿ ಅಳಿವಿನ ಅಂಚಿನಲ್ಲಿದೆ
10.ಕೊರೋನದಿಂದ ಸಮಾಜದ ಮೇಲಾದ ಪರಿಣಾಮ
11. ಸ್ವಾವಲಂಬಿತ ಬದುಕಿನಲ್ಲಿ ನಮ್ಮ ಜವಾಬ್ದಾರಿಗಳು
12. ಮಕ್ಕಳ ಮೇಲೆ ಮಾಧ್ಯಮಗಳ ಪ್ರಭಾವ
13. ಅಳಿವಿನ ಅಂಚಿನಲ್ಲಿ ವನ್ಯಜೀವಿಗಳು
14. ನಮ್ಮ ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಕರ್ತವ್ಯ ಹಾಗೂ ಪಾತ್ರ
-
**ನೀ ಹೇಳು ಮನುಜ**
ಏಕೆ ಮನುಜ ನಿನ್ನಲ್ಲಿವುದು
ಈ ಅಹಂಕಾರ ದುರಹಂಕಾರ
ಯಾರ ನೆಮ್ಮದಿಗಾಗಿ
ಯಾರ ಉಳಿವಿಗಾಗಿ
ನಿನಗಾಗಿಯೇ
ಇಲ್ಲವೇ ನಿನ್ನ ಸಂತೋಷಕ್ಕಾಗಿಯೇ
ಅಥವಾ ಜೀವನ ಮಾಡುವುದಕ್ಕಾಗಿಯೇ
ಏಕೆ ಈ ಅಹಂಕಾರ ಹೇಳು ಮನುಜ
ನೀ ಹೇಳು ಮನುಜ
ಹಣವಿದೆ ಎಂದೇ ನಿನಗೆ ಅಹಂಕಾರ
ಏನೋ ಸಾಧನೆ ಮಾಡಿಬಿಟ್ಟಿದ್ದೇನೆ
ನಾನೀಗ ಎತ್ತರದಲ್ಲಿದ್ದೇನೆ ಎಂಬುದಕ್ಕ
ನಿನ್ನಲ್ಲಿ ಆಳವಾದ ಪಾಂಡಿತ್ಯವಿದೆಯೆಂದೆ
ಅತಿಯಾದ ಸೌಂದರ್ಯವಿದೆಯೆಂದೆ
ಏಕೆ ಹೇಳಿಬಿಡು ಮನುಜ
ಏತಕ್ಕಾಗಿ ಈ ಅಹಂಕಾರ
ದುರಹಂಕಾರ ನಿನ್ನಲ್ಲಿವುದು
ಎಷ್ಟಿದ್ದರೇನು ಮನುಜ ನಿನ್ನಲ್ಲಿ
ಕೊನೆಗೆ ಹೋಗುವುದು ಮಣ್ಣಿಗಲ್ಲವೆ
ತೆಗೆದುಕೊಂಡು ಹೋಗುವೆಯಾ ಸೌಂದರ್ಯವ
ನಿನ್ನಲ್ಲಿರುವ ಆಸ್ತಿ ಅಂತಸ್ತನ್ನ
ನಿನ್ನಲ್ಲಿರುವ ಪಾಂಡಿತ್ಯವನ್ನ
ಇದೆಲ್ಲವನ್ನೂ ನೀ ಮಣ್ಣಿಗೆ ಹೋಗುವಾಗ
ತೆಗೆದುಕೊಂಡು ಹೋದರೆ ಹೇಳಿಬಿಡು
ನಿನ್ನೀ ಅಹಂಕಾರ ದುರಹಂಕಾರಕ್ಕೆ
ನಿನ್ನಲ್ಲಿರುವ ನಾನತ್ವಕೆ
ನಿನ್ನೀ ಹಣ ಅಂತಸ್ತಿಗೆ
ನಾ ತಲೆಬಾಗಿ ಬಿಡುತ್ತೇನೆ
ನೀನೇ ಶ್ರೇಷ್ಠ ನೆಂದು
ನಾ ತಲೆಬಾಗಿ ಬಿಡುತ್ತೇನೆ ಮನುಜ
-
ಹಾಗೆ ಸುಮ್ಮನೆ ಒಂದು ಸಾಂಗ್
ಅವಳೇ ಅವಳೇ
ನನ್ನ ಹೃದಯ ಕದ್ದ ಚೋರಿ
ಇವಳೇ ಇವಳೇ
ನನ್ನ ಪ್ರೀತಿ ಕದ್ದ ಪೋರಿ
ಅವಳ ನೋಟ,ಅವಳ ಕಿರು ನಗೆ
ನಂಗೆ ಮೋಸ ಮಾಡಿತಲ್ಲ
ನಾ ತಪ್ಪೇ ಮಾಡೆ ಇಲ್ಲ
ಇವಳೇಕೆ ಬಿಟ್ಟು ಒದಳಲ್ಲ್ಲ
ಇವಳೇಕೇ ಬಿಟ್ಟು ಹೋದಳಲ್ಲ
ಕಣ್ಣಿನ ಹನಿಯೊಂದು
ಹೇಳಿತಂತೆ ನಿನಗೆ
ನೀ ಮೋಸ ಮಾಡಿದ್ಯಂತೆ
ನನಗೆ ಮೋಸ ಮಾಡಿದ್ಯಂಥೆ
ಯಾಕೆ ಹೇಳು ಗೆಳತಿ
ಪ್ರೀತಿ ಪ್ರೇಮದಲ್ಲಿ
ಮೌನ ರಾಗದಲಿ
ನನದೇನು ತಪ್ಪು ಕಂಡೆ
ನೀ ಹೇಳೆ ನನ್ನ ಗೆಳತಿ
ನೀ ಆಗಲಿಲ್ಲ ನನ್ನೊಡತಿ
ಒಲವಿನ ಪ್ರೀತಿಯಲಿ
ನಾ ಕೇಳುವೆ ನಿನ್ನ ಗೆಳತಿ
ನೀ ಪ್ರೀತಿ ಮಾಡಿದೆಯಾ
ನನ್ನ ಪ್ರೀತಿ ಮಾಡಿದೆಯಾ
ನೀ ಯಾಕೆ ಅದೇ ಮಾಯ
ನೀ ಯಾಕೆ ಆದೆ ಮಾಯ
ಎಲ್ಲೇ ನೀ ಇರು , ಹೇಗೆ ನೀ ಇರು
ಜೀವನದಲ್ಲಿ ನಗು ನಗುತಲಿರು
ನಿನ್ನೀ ಕೈ ಹಿಡಿಯುವವರು
ಪುಣ್ಯವಂತರು,ಭಾಗ್ಯವಂತರು
ಸುಹಾಸ್ ಎಂ
-
ಒಗಟನ್ನು ಬಿಡಿಸಿ
೪. ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು.
ಉತ್ತರ :
(ಕಮೆಂಟ್ ಮಾಡಿ)
@maathu_barahavagide , @suhas_m_sumuka
-
ಒಗಟನ್ನು ಬಿಡಿಸಿ
೩.ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ; ಹಾಗಾದರೆ ನಾನು ಯಾರು..?
ಉತ್ತರ :
(ಕಮೆಂಟ್ ಮಾಡಿ)
@maathu_ _barahavagide , @suhas_m_sumuka
-
ಒಗಟನ್ನು ಬಿಡಿಸಿ
೨.ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು..?
ಉತ್ತರ :
(ಕಮೆಂಟ್ ಮಾಡಿ)
@maathu_ _barahavagide
-
ಒಗಟನ್ನು ಬಿಡಿಸಿ
೧. ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ
ಉತ್ತರ :
(ಕಮೆಂಟ್ ಮಾಡಿ)
@maathu__barahavagide
-
ಒಗಟನ್ನು ಬಿಡಿಸಿ
೧. ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ
ಉತ್ತರ :
@maathu__barahavagide
-
ಸಾಧು ವೈಷ್ಣವಿಯ ಪ್ರೆಮರಾಗ
ಸಾಧುವಿನ ಹೃದಯದರಮನೆಯಲ್ಲಿ
ತೂಗುತ್ತಿರುವುದು ವೈಷ್ಣವಿಯ ಜೋಕಾಲಿ
ಜೀವನದುದ್ದಕ್ಕೂ ನಿಮ್ಮ ಪ್ರೀತಿಯು ಕರಗದಿರಲಿ
ಕಾಣುವ ಕನಸುಗಳೆಲ್ಲ ಮರೆಯಾಗದಿರಲಿ
ಇವಳ ಕಣ್ಣಿನ ಕಾಡಿಗೆಯು ಅವನಿಗಾಗಿ
ಜೀವನಪೂರ್ತಿ ಕಾಯುತ್ತಿರಲು
ಮುಂಜಾನೆಯ ಹೊತ್ತಿನಲ್ಲಿ
ಮುಂಗುರುಳಿಗೆ ಸೋಕಿತು ಇಬ್ಬರ ಬೆರಳುಗಳು
ಇಬ್ಬರ ನಾಚಿಕೆಯು ತುಟಿಯಂಚಿನ
ಮಾತನ್ನು ಬಿಡದಿರಲು
ತಮ್ಮ ಮನದ ಸಾಲನ್ನು ಹೇಳಲು
ಇಬ್ಬರ ಮನಸ್ಸು ಚಡಪಡಿಸುತ್ತಿರಲು
ಕೊನೆಗೇಳಿಯೇ ಬಿಟ್ಟರು ತಮ್ಮ ಹೃದಯದ ಸಾಲು
ಇವರಿಬ್ಬರೂ ಕಳೆಯುವ ಪ್ರತಿಕ್ಷಣವೂ ಮಧುರ
ಇದುವೇ ಮನಗಳ ಬೆಸೆಯುವ ನೆನಪಿನ ಆ
ಪ್ರೀತಿಯ ಮೊದಲ ಹೆಜ್ಜೆಯಿದು
ಆದ್ದರಿಂದಲೇ ಇವರಿಬ್ಬರ ಹೃದಯದ ಬಡಿತವು
ಇಂಪಾಗಿ ಕೇಳುವುದು
ರಾತ್ರಿಯಲ್ಲಿ ಕಂಡ ಪ್ರೀತಿಯ ಕನಸಿನ ಬಾವಿಯಲ್ಲಿ
ಸಾಧು ಮುಳುಗಿ ಹೋದನಲ್ಲ
ವೈಷ್ಣವಿಯ ಪ್ರೀತಿಯ ಸಾಗರದಲ್ಲಿ
ಇವರಿಬ್ಬರ ಮನದ ಪ್ರೀತಿಯು ಖಚಿತವಾಗಿದೆ
ಮೌನವ ಬಿಟ್ಟು ಮಾತನಾಡುವುದು
ಇಬ್ಬರಿಗೂ ಖಾತರಿಯಾಗಿದೆ
ಇಬ್ಬರದ್ದೂ ನಿಷ್ಕಲ್ಮಶವಾದ ಪ್ರೀತಿಯೆಂದು ಗೊತ್ತಾಗಿದೆ
ಇಬ್ಬರ ಪ್ರೇಮ ಸಂದೇಶವು ಅವರವರ ಮನಸ್ಸಿಗೆ ತಲುಪಿದೆ
ಆಗುತ್ತಿದೆ ಮುಗ್ದ ಹೃದಯಗಳ ಸಮ್ಮಿಲನ
ನವ ಪ್ರೇಮಿಗಳತ್ತ ಸಂಚಲನ
ಇವರಿಬ್ಬರ ಒಲವಿನ ಸಂದರ್ಶನ
ಮುಂದಾಗುವ ನವ ಪ್ರೇಮಿಗಳಿಗೆ ನಿದರ್ಶನ
-ಸುಹಾಸ್ ಎಂ-
ವಿಧಿಯ ಆಟ
ವಿಧಿಯೇ ನೀನೆಷ್ಟು ಕ್ರೂರ
ನಾವೆಷ್ಟೇ ಬಲಿಷ್ಠ ಎಂದುಕೊಂಡರು
ಧೈರ್ಯಶಾಲಿಗಳು ಎಂದುಕೊಂಡರು
ನೀ ನಮ್ಮನ್ನು ಸೋಲಿಸುತ್ತಿದ್ದಿಯ
ನಾವೆಷ್ಟೇ ಒಳ್ಳೆಯವರಾಗಿದ್ದರು
ವಿಧಿ ನಮ್ಮನ್ನು ಎಲ್ಲರ ಮುಂದೆಯೂ
ಕೆಟ್ಟವರಂತೆ ಬಿಂಬಿಸುತ್ತಿದ್ದಿಯ
ವಿಧಿಯೇ ಏಕೆ ಹೀಗೆ ಹೆದರಿಸುತ್ತಿದ್ದಿಯ
ಎಷ್ಟೇ ನಾಜೂಕಾಗಿ ನಡೆದರೂ
ಎಷ್ಟೇ ತಾಳ್ಮೆಯಿಂದ ಇದ್ದರು
ವಿಧಿ ನೀ ನಮ್ಮ ಕಾಲು ಎಳೆದು
ನಮ್ಮನ್ನೇ ಸೋಲುವಂತೆ ಮಾಡುತ್ತೀಯ
ಕೆಳಗ್ ಇದ್ದವರನ್ನು ಮೇಲಕ್ಕೆ
ಮೇಲ್ ಇದ್ದವರನ್ನು ಕೆಳಕ್ಕೆ
ಕ್ಷಣಮಾತ್ರದಲ್ಲೇ ಇಳಿಸಿ ಹೃದಯವನ್ನೇ
ಚೂರು ಮಾಡಿ ಬಿಡುತ್ತಿಯಲ್ಲ ವಿಧಿಯೇ
-