ಜೀವಂತವಿದ್ದಾಗಲೇ ಅರಿತು ಪ್ರೀತಿ ಮಾಡಿ,
ಇಲ್ಲದಿದ್ದರೆ ಸತ್ತ ಮೇಲೆ ಒಂದ್ಹಿಡಿ ಮಣ್ಣು ಹಾಕುವ ಅವಕಾಶವೂ ಸಹ ಸಿಗುವುದಿಲ್ಲವೇನೋ...💔-
🌸𝔾𝖔𝖒𝖇𝖊🌸
✨𝔸𝖐𝖐𝖆✨
🌸ℙ𝖚𝖙𝖆𝖓𝖎🌸
ದೇಹದಿಂದ ಆತ್ಮ
ಬೇರೆಯಾಗುವುದು
ಮಾತ್ರ ಸಾವಲ್ಲ,
ಮನಸ್ಸಿನ ಭಾವನೆಗಳು
ಕಲ್ಲಾದಾಗ ಹೃದಯಕ್ಕಾಗುವ
ವೇದನೆಯು ಸಹ
ಸಾವಿಗೆ ಸಮವೇ....-
ಕೊನೆಗೂ ಬಯಲಾಯಿತು,
ಇಷ್ಟು ದಿನ ನನ್ನೊಂದಿಗಿದ್ದು
ಬೆನ್ನಿಗೆ ಚೂರಿ ಹಾಕಲು ಸಂಚು
ಮಾಡುತ್ತಿದ್ದವರ ಮುಖವಾಡ,
ಮನಸ್ಸು ಭಾರವಾಯಿತು ನನ್ನ ಮೂರ್ಖತನಕ್ಕೆ,
ಆದರೂ ಹೇಗೋ ಸಾವರಿಸಿಕೊಂಡೆ,
ಮುಂದೆಂದಿಗೂ ಹೀಗೆ ಯಾರನ್ನು ನಂಬಬಾರದೆಂದು,
ಸಂಬಂಧಗಳಿಂದ ದೂರವೇ ಉಳಿದಿದ್ದೆ,
ಎಷ್ಟೇ ಗಟ್ಟಿಯಾಗಿದ್ದರೂ,
ಮತ್ತೆಕೋ ನಾ ಬಯಸದೇ ಬಂದ ಬಂಧುಗಳನ್ನ
ಒಪ್ಪಿ ಅಪ್ಪಿಕೊಂಡಿದ್ದೆ ಹಳೇ ನೋವ ಮರೆಯಲು,
ನಾ ಊಹಿಸಿಯೇ ಇರಲಿಲ್ಲ,
ಈಗಿರುವ ಬಂಧಗಳು ಕೂಡ ಅವಶ್ಯಕತೆಗೆ ತಕ್ಕಂತೆ ಇರುವರೆಂದು..
ಹಳೆ ನೋವ ಜೊತೆ ಹೊಸ ನೋವು ಕೂಡ ಒಂದಕ್ಕೊಂದು ಉಚಿತವೆಂಬಂತೆ ಜೊತೆಯಾಗಿವೆ ನನ್ನೊಡನೆ.....😊-
ನೆನಪಿನ ಸಂತೆಯಲ್ಲಿ
ನಾವಿಕಳು ನಾನು..
ಬಯಸಲು ಉಳಿದಿಲ್ಲ
ಇಲ್ಲಿ ಇನ್ನೇನು....
-Suhasini
-
ಹೇಳಿ ಬಿಡು
ಗೆಳೆಯ...
ನಿನ್ನ ಮನದರಸಿ
ಯಾರೆಂದು?
ತಿಳಿಸಿ ಬರುವೆ
ಅವಳಿಗೆ ನಿನ್ನ
ಪ್ರೀತಿಯ ಪರಿ
ಎಷ್ಟೆಂದು.....-
ನಿನ್ನ ಮೇಲಿನ ಒಲವು ಎಂದೂ
ಕೊನೆಯಾಗದು,
ಕೊಂಚ ದೂರ ಆದ್ರೂ ಮನಸು
ಕೊರಗುವುದು,
ಅಪ್ಪಿಕೊಳ್ಳಬೇಕು ಎಂಬ ಕಲ್ಪನೆಗೆ,
ಕೈಯ್ಯ ಚಾಚಿ ನಿಲ್ಲು ಒಮ್ಮೆ; ಈ ಜನ್ಮ ಸಾಕೆನಗೆ,
ನೂರಾರು ಕಾಲಕೂ ನೀ ನನಗೆ ಸ್ವಂತವೇ,
ನಿನ್ನಯ ಪ್ರೀತಿಯ ಪರಿಗೆ, ನಾ ಸೋತು
ಎಂದೋ ಶರಣಾಗಿ ಹೋಗಿರುವೇ,
ನನ್ನೊಲವಿನ ಆತ್ಮ ಸಖನೇ, ಸಕಲ
ಜನ್ಮವೂ ನನ್ನೊಲವನ್ನ ನಿನಗಾಗಿಯೇ
ಮುಡಿಪಾಗಿಡುವೇ..💕👫😍💕
-ಸುಹಾಸಿನಿ✍️✍️
-
ನಿನ್ನ ಮಡಿಲೊಂದೇ ಸಾಕು ನನಗೆ,
ನನ್ನೆಲ್ಲಾ ನೋವ ಮರೆಯಲು.!!
ನಿನ್ನ ಬೆಚ್ಚಗಿನ ಅಪ್ಪುಗೆಯೇ ಸಾಕು ನನಗೆ,
ಬಾಳ ಪಥದಲಿ ನಿನ್ನೊಂದಿಗೆ
ಹೆಜ್ಜೆ ಬೆಸೆಯಲು.!!
ಬಿಳಿ ಹಾಳೆಯಂತಿದ್ದ ಮನಕೆ,
ಪ್ರೀತಿಯ ಬಣ್ಣ ತುಂಬಿ,
ಬದುಕಿನ ಬಣ್ಣ ಬದಲಾಯಿಸಿದ
ಕಲೆಗಾರ ನೀನು.!!
ಕಲ್ಲಾಗಿದ್ದ ಹೃದಯಕೆ ಪ್ರೀತಿಯೆಂಬ
ಬಿತ್ತನೆಯನ್ನು ಬಿತ್ತಿ ನನ್ನ ಬಾಳಿಗೊಂದು
ಅರ್ಥ ತಂದ ನನ್ನೊಲವ
"ಆತ್ಮ ಬಂಧು" ನೀನು..!!-
ತುಸು ಕನಲುತಿದೆ ಮೈ, ನಿನ್ನ ಅಪ್ಪುಗೆಯ ಸ್ಪರ್ಶಕೆ
ಕರೆದೊಯ್ಯದಿರು ನೀ ನನ್ನ ಭಾವ ಮೇಳಕೆ
ತುಸು ಹೆಚ್ಚೇ ಲಜ್ಜೆ ಆವರಿಸಿದೆ ಈ ನಿನ್ನ ಕುಡಿ ನೋಟಕೆ
ನಡುವೆ ಅಂತರವೂ ಇಲ್ಲದಂತೆ,
ಬಂಧಿಯಾಗಿರುವಾಗ ಮಾತಿಗೆಲ್ಲಿ ಜಾಗವಿದೆ
ಹೆಚ್ಚೇನು ಹೇಳಲಾರೆ, ನಿನ್ನ ಹೆಸರಿನ ಸಿಂಧೂರ
ನನ್ನ ಹಣೆಯಲ್ಲಿ ಇರಬೇಕು, ನಾ ಮಡಿಯುವವರೆಗೂ
ಎಂಬ ಬಯಕೆ ಈ ಪುಟ್ಟ ಜೀವಕೆ😍😉
(No Offense)
—𝕤𝖚𝖍𝖆𝖎ɴ𝖎✍️-
ನಿನ್ನ ಕಾಲ ಮೇಲೆ ಕಾಲಿಟ್ಟು ಕಡಲ
ತಡಿಯವರೆಗೂ ನಿನ್ನೊಂದಿಗೆ ಹೆಜ್ಜೆ ಬೆಸೆಯುವಾಸೆ!!
ದಂಡೆಯ ಮೇಲೆ ಕುಳಿತು ನಾಳೆಯ
ದಿನಗಳ ಬಗ್ಗೆ ಯೋಚಿಸುತ್ತಾ,
ನಿನ್ನ ಬೆಚ್ಚಗಿನ ತೋಳಲ್ಲಿ ಮಗುವಂತೆ ಮಲಗುವಾಸೆ!!
ಮುಸ್ಸಂಜೆಯ ಶಶಿಯ ನೋಡುತಾ
ನೀ ಕೊಟ್ಟ ಮುತ್ತನ್ನು ಆಸ್ವಾದಿಸುವಾಸೆ!!
ನಿನ್ನ ಮಡಿಲಲ್ಲಿ ಮಲಗಿ ನೀನ್ಹಾಡುವ ರಾಗಕ್ಕೆ
ತಲೆದೂಗುತ್ತಾ ಕೊನೆಯ ಬಾರಿ ನಿನ್ನೊಮ್ಮೆ
ಕಣ್ತುಂಬಿ ಕೊಳ್ಳುವಾಸೆ!!
ಎಲ್ಲದಕ್ಕೂ ಒಮ್ಮೆ ಒಪ್ಪಿ ಅಪ್ಪಿ ಬಿಡು,
ಮುನ್ನುಡಿ ಹಾಡೋಣ ಇಂದೇ
ಸಪ್ತಪದಿ ತುಳಿಯಲು,
—𝕤𝖚𝖍𝖆𝕤𝖎ɴ𝖎✍🏻
-