ನಿನ್ನ ಮಡಿಲಲ್ಲಿ ಮಲಗಿ.....
ನಿನ್ನ ಜೋಗಳ ಕೇಳಬೇಕೆಂಬ ಆಸೆ...
ನಿನ್ನ ಕೈ ತುತ್ತು ಬೇಡಿ ತಿನ್ನುವ ಆಸೆ....
ನೀನು ನನ್ನ ಆಡಿ ಹೆತ್ತಿ ಮುದ್ದಾಡಬೇಕೆಂಬ ಆಸೆ......
ಯಾಕೆಂದ್ರೆ ಇದನೆಲ್ಲ ನಿನ್ ಮಾಡಿದಿಯ ಅಂತ ಗೊತ್ತು.....
ಆದರೆ ಇದ್ಯಾವುದೂ ಕೂಡಾ ನನಗೆ ನೆನಪೇ ಇಲ್ಲ.....
ಇದನೆಲ್ಲ ಮತ್ತೊಮ್ಮೆ ಅನುಭವಿಸುವ ಆಸೆ ನನಗೆ.....
ಆ ನಿರೀಕ್ಷೆಯಲ್ಲೆ ಏಷ್ಟು ಜನುಮ ಬೇಕಾದರೂ ಕಾಯುವೆ....-
ಓಹ್ ದೇವಾ ನಿನಗೆ ಕರುಣೆ ಅನ್ನೋದೇ ಇಲ್ಲವೇ
ಕಸಿದುಕೊಳ್ಳುವುದಾದರೆ ಕೊಡುವ ಮೊದಲೇ ಕಸಿದಿಕೋ
ತಾಯಿ ತನ್ನ ಪ್ರಾಣವನ್ನೇ ಒತ್ತೇ ಇಟ್ಟು ಮಗುವಿಗೆ ಜನ್ಮ ನೀಡಿರುವಳು
ಆದರೆ ನೀನು ಅವಳ ನಗುವಾಗಿದ್ದ ಆ ಮಗುವನ್ನು ಕಸಿದುಕೊಂಡೆ
ಈಗ ಅವಳ ಮುಖದಲ್ಲಿ ನಗುವೇ ಇಲ್ಲದಾಗಿದೆ...
-
ಅಪ್ಪು ನೀ ಇಲ್ಲ....
ಎಂಬ ನುಡಿಯ ಕೇಳಲು ಆಗುತ್ತಿಲ್ಲಾ...
ಅಭಿಮಾನಿಗಳ ಮನದಲ್ಲಿ.....
ನಿನ್ನ ನಗು ಮುಖದ ಚಿತ್ರವೇ ತುಂಬಿದೆಯಲ್ಲ.....
ನಿನ್ನ ಕೊನೆ ಕ್ಷಣವ ಮರೆಯಲಾಗುತ್ತಿಲ್ಲ......
ನೀ ಎಂದೆಂದಿಗೂ ಅಜರಾಮರ.....
-
ಜೊತೆಯಾಗಿ ಹುಟ್ಟಿ ತಾಯಿ ಅಷ್ಟೇ
ಪ್ರೀತಿ ತೋರಿದ ನನ್ನ ಕರುಳ ಗೆಳತಿಗೂ......
ಜೊತೆಯಾಗಿ ಹುಟ್ಟದಿದ್ದರು ಯಾವುದಕ್ಕೂ
ಕಡಿಮೆ ಇಲ್ಲದ ರೀತಿ ಪ್ರೀತಿ ಬಾಂಧವ್ಯ ತೋರಿದ
ನನ್ನ ಎಲ್ಲಾ ಮುದ್ದು ಅಕ್ಕಾ-ತಂಗಿಯರಿಗೂ.......
ರಕ್ಷಾಬಂಧನದ ಶುಭಾಶಯಗಳು-
ಬೆಂಗಳೂರಿಗರ ಪಾಡು.
ಊರಿಗೆ ಹೋಗೋಣವೆಂದರೆ,ಊರಿನಲ್ಲಿ..!?
ಬೆಂಗಳೂರಿಗರೆಂದು ನೋಡಿ ಹೆದರುವರಯ್ಯ..!
ಬೆಂಗಳೂರಿನಲ್ಲಿ ಇರೋಣವೆಂದರೆ....!?
ಕೊರೋನಾ ಹಾವಳಿಯ ಕಾಟವಯ್ಯ ...!
ಜೀವ ಉಳಿಸಿಕೊಳ್ಳುವುದೇ ಒಂದು ಸವಾಲಯ್ಯ...?
ನಮ್ಮ ಗೋಳು ಕೇಳುವವರು ಯಾರಯ್ಯ...!
-
ಓ.....!! ಜೀವವೇ ಒಮ್ಮೆ ಇಲ್ಲಿ ಕೇಳು...
ಇಲ್ಲಿ ಯಾರಿಲ್ಲ ನಿನ್ನವರೆಂದು ಹೇಳಲು.....!?
ಬರೀ ಬಾಯಿ ಮಾತಿಗಷ್ಟೆ ಎಲ್ಲ ನಿನ್ನವರು
ಏಕೆಂದರೆ ಇದುವೇ ಸ್ವಾರ್ಥ ಪ್ರಪಂಚ
ನಿನಗಾಗಿ ಇರುವವರು ಒಬ್ಬರೇ.......!?
ಅದುವೇ ಬರೀ ನೀನು ಮಾತ್ರ.....!!!
-✍️ತೇಜು ಪಟೇಲ್🕊️-
ಸ್ನೇಹವೆಂಬ ದೋಣಿಯ ಮೇಲೆ
ಸ್ನೇಹಿತರಿಬ್ಬರ ಪಯಣವು
ಸುಮಧುರವಾಗಿ ಸಾಗುತಿತ್ತು.........
ದಾರಿ ಮಧ್ಯೆ ಮನಸ್ಥಾಪವೆಂಬ ರಂಧ್ರ ಉಂಟಾಗಿ
ದೋಣಿಯು ಮುಳುಗಿ ಸ್ನೇಹಿತರಿಬ್ಬರು ದೂರವಾದರು ...........-
ಅಣ್ಣಾ ನಿನ್ನ ಹೆಸರು ಅರುಣಾ
ನಿನ್ನ ಹೆಸರಲ್ಲಿ ಇರುವುದು ಸೂರ್ಯನ ಕಿರಣ
ಸೂರ್ಯನ ಕಿರಣದಂತೆ ಪ್ರಜ್ವಲಿಸಲಿ ನಿನ್ನ ಬಾಳಿನ ಪಯಣ
ಸೂರ್ಯನ ಮಂದಹಾಸದ ಬೆಳಕಿನಂತೆ ಸದಾ
ನಿನ್ನ ಮುಖದಲ್ಲಿ ಹೊಳೆಯಲಿ ನಗುವಿನ ಕಿರಣ
ನಿನ್ನ ಮುಗ್ಧ ಮನಸ್ಸೇ ನಿನಗೆ ಅಮುಲ್ಯವಾದ ಆಭರಣ-
ಜೀವನ ಎಂಬುದು ಲೆಕ್ಕಕ್ಕೆ ಸಿಗದಷ್ಟು
ಪುಟಗಳಿರುವ ಸಣ್ಣ ಪುಸ್ತಕದಂತೆ
ನಾವು ಒಂದೂ ಪುಟದಿಂದ ಮತ್ತೊಂದು
ಪುಟಕ್ಕೆ ಹೋದಂತೆ ಹಿಂದಿನ ಪುಟಗಳು
ಬರೀ ನೆನಪಿನಲ್ಲಿ ಮಾತ್ರ ಉಳಿಯಲು ಸಾಧ್ಯ......
ಹಾಗೆಯೇ ನಮ್ಮ ಜೀವನದಲ್ಲಿಯೂ ಸಹ
ಒಬ್ಬರು ಮತ್ತೋಬ್ಬರನ್ನು ಮರೆಯುವುದು ಸಹಜವಾಗಿದೆ......
ಅವರ ಜೊತೆ ಕಳೆದ ಸಮಯ ಕೂಡ ಬರೀ ನೆನಪಿನಲ್ಲಿ ಮಾತ್ರ ಉಳಿಯಲು ಸಾಧ್ಯ.......-