ಇಲ್ಲಿ ಯಾರೂ ಒಳ್ಳೆಯವರೂ ಅಲ್ಲ ಕೆಟ್ಟವರೂ ಅಲ್ಲ. ಸಮಯ ಸಂದರ್ಭಗಳು ನಮಗೆ ಅವರನ್ನು ಒಳ್ಳೆಯವರನ್ನಾಗಿ ಕೆಟ್ಟವರನ್ನಾಗಿ ಮಾಡುತ್ತವೆ ಅಷ್ಟೇ...
-
ಹುಡುಕು ನಿನ್ನ ನೆಲೆಯನಲ್ಲಿ
ಗಟ್ಟಿ ನಿಲಲೇಬೇಕು ಅಲ್ಲೇ
ಗೆಲ್ಲಲೇ ಬೇಕು ಅಲ್ಲೇ
ಗಳಿಸಲೇಬೇಕು ಬೆಲೆ
ಇದೇ ಜೀವನೋತ್ಸಾಹದ ಸೆಲೆ-
ಬೇರೆ ಚಿಂತೆಗಳು ಏತಕೆ ಬೇಕು
ಎದುರಾಗಲಿ ಏನೇ ಅಡ್ಡಿ ಆತಂಕಗಳು
ಮಸುಕಾಗದು ವಿಜಯದ ಕನಸುಗಳು
ಕುಗ್ಗಿಸದು ಗೆಲುವಿನ ಕನಸನು
ನಿಲ್ಲಿಸದು ವಿಜಯದ ಪಯಣವನು
ಹಾರಲೇ ಬೇಕು ವಿಜಯದ ಪತಾಕೆ
ಕೇಳಲೇಬೇಕು ಗೆಲುವಿನ ಕೇಕೆ
-
ಬೇರೆಯವರ ಕೆಲಸದ ಬಗ್ಗೆ ಮಾತನಾಡುವುದು ಅತೀ ಸುಲಭ...
ಆದರೆ ಒಮ್ಮೆ ತಾವೂ ಆ ಕೆಲಸ ಮಾಡಿದಾಗ ಆ ಕೆಲಸದ ಹಿಂದಿನ ಶ್ರಮ ಅರ್ಥವಾಗುತ್ತದೆ... ಮಾತನಾಡುವ ಬಾಯಿ ತನ್ನಿಂದ ತಾನೇ ಮುಚ್ಚಿಹೋಗುತ್ತದೆ...
-
ಕಮರಿ ಹೋದ ಆಸೆಗಳ ಬೆನ್ನು ಹತ್ತೋಣ
ಕಂಡ ಕನಸಿನ ದಾರಿಯಲಿ ಸಾಗೋಣ
ಬಹು ದೂರ ದೂರಕೆ ಪಯಣ ಸಾಗಲಿ
ಅಸಾಧ್ಯದ ಆ ಮಾತುಗಳು ಕಾಲಕೆಳಗಿರಲಿ
ಗೆಲುವೊಂದೆ ನಮ್ಮ ಮೂಲಮಂತ್ರವಾಗಲಿ
ಆದರೆ,
ಹತ್ತಿದ ಕುದುರೆಯೆಡೆಗೂ ಗಮನವಿರಲಿ
ಅದಕಾದ ಆಯಾಸದ ಜ್ಞಾನವಿರಲಿ
ಹತ್ತಿದ ಕುದುರೆಯ ಆಯಾಸ ಕಳೆಯಲು
ಪ್ರೀತಿ ವಿಶ್ವಾಸದ ಮೇವು ಹಾಕಲು
ಮೈ ದಡವಿ ಮುತ್ತಿಟ್ಟು ನೀರು ಕೊಡಲು
ಸಿದ್ದವಾಯಿತು ಕುದುರೆ ಜೋರಾಗಿ ಓಡಲು
ಬಳಸಿಕೊಳ್ಳುವುದೊಂದೇ ಅಲ್ಲ ಕುದುರೆಯನು
ಉಳಿಸಿಕೊಳ್ಳಬೇಕು ನಮ್ಮ ಈ ಕುದುರೆಯನು
ನಮ್ಮ ಜೀವನ ದಾರಿಯಲಿ ನಮ್ಮ ಬಾರ ಹೊತ್ತ ಜೀವಗಳನು.
-
ಬೇಸರಿಸದಿರು ಹುಡುಗಿ ನಿನ್ನ ಮರೆತೆನೆಂದು
ನಿನ್ನ ನಾ ಮರೆತರೆ , ಅದು
ಕೋಗಿಲೆಯು ಹಾಡುವುದ ಮರೆತಂತೆ
ನದಿಯು ಕಡಲಸೇರುವುದ ಮರೆತಂತೆ
ನವಿಲು ತನ್ನ ನಾಟ್ಯವ ಮರೆತಂತೆ
ಮಲ್ಲಿಗೆಯು ಕಂಪ ಬೀರುವುದ ಮರತಂತೆ
ಎನ್ನ ಮನದಲಿ ಬೆರೆತು ಹೋದ
ನಿನ್ನ ನಾ ಮರೆಯಲು ಸಾಧ್ಯವೆ??
ಮರೆತು ಬಾಳಲು ಸಾಧ್ಯವೆ??-
ಸಿಹಿ ತಂಗಾಳಿ ಬೀಸಿದೆ
ನಿನ್ನ ನೆನಪ ಹೊತ್ತು ತಂದಿದೆ
ಆ ನಿನ್ನ ಮಧುರ ನೆನಪು
ತಂದಿದೆ ಮನಕೆ ತಂಪು
-
ನೆರಳಂತೆ ನಿನ್ನ ಹಿಂದಿರುವೆ
ನಿನ್ನ ತನು ಮನಕೆ ಸದಾ ತಂಪೆರೆವೆ
ನಿನ್ನ ನೆನಪಲೇ ನಾ ಮುಳುಗಿರುವೆ
ನಿನಗಾಗಿಯೇ ಕಾದು ಕುಳಿತಿರುವೆ
-