srinivas mv   (ಶ್ರೀನಿವಾಸ್ ಎಂ ವಿ)
10 Followers · 12 Following

Wanderer ..Wonderer ..Ponderer .
Joined 9 July 2019


Wanderer ..Wonderer ..Ponderer .
Joined 9 July 2019
9 MAY 2021 AT 22:15

ಅಲ್ಲವೇ...

ಹುಸಿ ಮುನಿಸು ಇರಲಿ ತುಸು ನಗೆಯ ಹಿಂಬದಿಯಲ್ಲಿ,
ಬರೀ ಮೌನವೇ ಮೂಡದಿರಲಿ ಭಾವ ಉನ್ಮಾದದಲ್ಲಿ,
ಸಿಹಿ ನಗು ಅಲಂಕರಿಸಲಿ ನೋವ ನುಂಗಿದ ಮನದಂಗಳದಲ್ಲಿ.

ಸುಖಮಾತ್ರ ಹಿಂಬಾಲಿಸದೆ ಬರಿ ಪ್ರೇಮ ಹಂಬಲಿಸಿದ ಮನವನ್ನ ಹಿಂಜರಿಸದಿರು,
ಬರಿ ಕನಸ ಕಂಡು ನನಸಾಗುವ ಕ್ಷಣವ ಗಮನಿಸದೇ ಕಾಲ ವ್ಯರ್ಥ ಮಾಡದಿರು.

-


25 AUG 2020 AT 22:30

The gain of her pain is so subtle,
Walking through the hurdles do not make her brittle.

Her aim is to heft family fame,
Its her sacrifice, its not lame.

She shrinks the shine of her active living,
Just to make her progeny blooming.

-


24 JUL 2020 AT 0:59

ನಾಲ್ವರು ನಕ್ಕರೆನು,
ಮೂವರು ಮರತೆರೇನು,
ಇಬ್ಬರು ಇಡಿದರೇನು,
ಸ್ವಯಂ ಸ್ಥಿರವಿರದವನು
ಬಾಡುವನು,ಬಾಹ್ಯಕ್ಕೆ ಬಂಧನಾಗಿ ಬಾಗುವನು.

-


5 JUL 2020 AT 0:13

ನಿಷ್ಕಲ್ಮಶ ಮನ ದೇಗುಲ,
ಅಳಯಲಾಗದಷ್ಟು ಮನ ವಿಶ್ವಾಸ ಅಗಲ.
ಸೂಕ್ತ ನಿನ್ನ ಮುಖಕ್ಕೆ ಮಂದಸ್ಮಿತ,
ನಿನ್ನ ನೋಟ , ಭಾವ ಸಿಹಿಯ ಮಿಶ್ರಿತ.
ಬಿಡಿಸಿದಷ್ಟು ಭಾವ,
ಪ್ರೇಮದಲ್ಲಿ ಪರಮ.

-


2 MAY 2020 AT 21:30

ನಿಂತು ನೋಡು ಅವನ ಜಾಗದಲ್ಲಿ ದೃಶ್ಯವನ್ನು,
ನಿರ್ಧರಿಸದಿರು ಲೆಕ್ಕಿಸದೆ ಅವನ ಕ್ಷಣವನ್ನು.

ಸಾಲದು ನಿರ್ಧರಿಸಲು ಬರೀ ನೋಟದ ಸಾರಾಂಶ,
ಅರಿಯಬೇಕು ಕೂಲಂಕುಷವಾಗಿ ಘಟನೆಯ ಅಂಶ.

ಇಂದ್ರಿಯಗಳ ಗ್ರಹಣಶಕ್ತಿ ಸಾಕು ಸುಖ ದುಃಖದಲಿ ಮುಳುಗಲು,
ಕ್ಷೋಭೆಯೊಳಗಾಗದೆ ಮೆಚ್ಚಿಸು ಆಗುಹೋಗುಗಳನ್ನು ನೀ ಬೆಳೆಯಲು.

-


21 APR 2020 AT 13:11

ಮಾತಲ್ಲಿ ಮೃದು ಹೊಂದಿರಲಿ,
ಮೃದು ಮನಸ್ಸಿನೊಳಗೆ ನಂಬಿಕೆ ಅಡಗಿರಲಿ,
ನಂಬಿಕೆಯ ಮಾತಲ್ಲಿ ಗೌರವ ಸಮಾನವಿರಲಿ,
ಗೌರವದಲ್ಲಿ ಬಿಡಲಾದ ಸೆಳೆತ ಅಂಟಿರಲಿ,
ಸೆಳೆದ ಭಾವವು ನನ್ನ ಪ್ರೀತಿಯ ಮೀರಿಸಲಿ,
ಪ್ರೀತಿ ಅಡಗಿರಲಿ ಮನ ಸ್ಪರ್ಶದಲಿ,
ಮನಗಳು ಸಾಗಲಿ ಗೆಳತನದ ಹಾದಿಯಲಿ,
ಈ ಗೆಳೆತನ ಕೊನೆಯಾಗದಿರಲಿ,
ನನ್ನ ಗೆಳತಿ ಕೊನೆಯವರೆಗು ಜೊತೆಯಾಗಿರಲಿ.

-


13 APR 2020 AT 19:32

ಪದಬಲಿಕೆ ಮೂಡಿಸಿತು ಬರಹದ ಸರಳತೆ,
ಘಟನೆಗಳು ತಿಳಿಸಿತು ಬದುಕಿನ ಗಾಢತೆ;

ಬರೀ ತೋರಿಕೆಯ ಮನ ಮಾತು ಮರೆತೀತು,
ಆ ಭಾವ ಅಸ್ಥಿತ್ವವಿಲ್ಲದ ಮನ ಶಬ್ದ ಸೊತೀತು.

-


1 APR 2020 AT 18:32

ಜನಾಂಗದಲ್ಲಿ ಶ್ರೇಷ್ಠರು ಈ ನಮ್ಮ ರೈತರು,
ಅನ್ನದಾತರಾಗಿ ಆದರು ನಮಿಗೆ ತುಂಬಾ ಆಪ್ತರು.

ನೆಲವ ಅಗೆದು, ಸಮಯ ಕಳೆದು, ಬತ್ತ ಬೆಳೆದು ಅನ್ನದಾತ ಆದ ಅವ,
ಶಾಖದಲ್ಲಿ ಬೆಂದು, ಬೆವರಿನಲ್ಲಿ ನೆಂದು, ಮನದಲ್ಲಿ ಶ್ರೀಮಂತನಾದ ಆ ಬಡವ.

-


25 MAR 2020 AT 9:00

ಬರುವೆಲ್ಲ ಯುಗಗಳಿಗೆ ಇರಲಿ ಸಂತಸದ ಆದಿ,
ಆಚರಣೆಗೆ ಇಹುದು ಅನಾದಿ ಹಾದಿ;
ಆಗಮಿಸಿತು ಹೊಸ ಸಂವತ್ಸರ,
ತೊಲಗಿಸು ಬೇಸರ,ಮತ್ಸರ;
ಅಲಂಕರಿಸು ದ್ವಾರವನು ಮಾವಿನ ಬೇವಿನ ತೋರಣದಿಂದ,
ಮಿಶ್ರಿಸು ಸಿಹಿ ಕಹಿಯನ್ನು ಬೇವುಬೆಲ್ಲದ ಬೆರಿಕೆಯಿಂದ.

-


8 MAR 2020 AT 12:36

ಮಾನವ ಕುಲ ನೆಲೆಸಿರುವರು ನಿನ್ನ ಮೇಲೆ,
ಪ್ರೀತಿಸಿ ಒದಗಿಸಿದೆ ನಮಗೆಲ್ಲರಿಗೆ ನೆಲೆ,
ಜೀವ ಜಲಕಿಹುದು ನಿನ್ನ ನಾಮ,
ಜೀವ ಹುಟ್ಟಿಗೆ ನೀನಾದೆ ಪ್ರಥಮ,
ವಿಶಿಷ್ಟ ಶಕ್ತಿಗಳ ಸಂಗಮ ಹೆಣ್ಣು,
ನಮ್ಮ ಸಾಧನ ಮಾರ್ಗ ದೃಷ್ಟಿಗೆ ಕಾರಣ ನಿನ್ನ ಕಣ್ಣು.

-


Fetching srinivas mv Quotes