ಇದ್ರೆ, ಭೂಲೋಕವೆಂಬ
ಈ ಊರು..
ಹೋದ್ರೆ, ಕೈಲಾಸವೆಂಬ
ಮುಂದ್ಲೂರು!
🙄-
ರವಿ ಕಾಣದ್ದನ್ನು ಕಾಣುವ ಬಯಕೆ..✍️
ದಿಗ್ವಿಜಯ ದಿನ..
ಚಿಕಾಗೋ ಸಭೆಯಲ್ಲಿ ಮೊಳಗಿಸಿದ
ವಿವೇಕಾನಂದರ ಘೋಷ..
“Brothers & Sisters of America”
ಎಂಬ ಅಮೋಘ ವಾಕ್ಘೋಷ!
ಸನಾತನ ಧರ್ಮದ ಸಂದೇಶ
ಹರಡಿದ ಮಹಾಸಂತ..
ಅವರ ಪ್ರೇರಣೆಯ ಸಂದೇಶ,
ಯುಗಯುಗಾಂತರ ಚಿರಂತ!
ಜಗದಾಳೆ ಬೆಳಗಿಸಿದ ದಿವ್ಯಪ್ರಕಾಶ..
ಸ್ವಾಮಿ ವಿವೇಕಾನಂದ,
ನಮ್ಮ ಆದರ್ಶ!-
Salutations to Swami Vivekananda,
on Digvijay Divas.. 🙏
From the historic Chicago address,
his timeless call still inspires —
“Sisters and Brothers of America!”
A guiding light, a noble saint,
whose wisdom shines
— eternal, infinite. 🌸-
ಯಾವಾಗಲೂ ನಗಲು
ಒಂದು ಕಾರಣ ಹುಡುಕಿ…
ಅದು ನಿಮ್ಮ ಬದುಕಿಗೆ
ಹೆಚ್ಚು ವರ್ಷಗಳನ್ನು
ಸೇರಿಸದೇ ಇರಬಹುದು,.
ಆದರೆ, ನಿಮ್ಮ ವರ್ಷಗಳಿಗೆ ನಗುವು,
ಹೆಚ್ಚು ಬದುಕನ್ನು ಖಂಡಿತ ನೀಡುತ್ತದೆ!
ನಗುನಗುತಾ..
ನಲಿ, ನಲೀ, ಏನೇ ಆಗಲಿ! 😄-
ಕ್ಷಣ ಕ್ಷಣಕ್ಕೂ ಮುತ್ತಿಡುತ್ತಾ,
ರಾತ್ರಿಯಾದೊಡನೆ
ತಬ್ಬಿಕೊಂಡು ಮಲಗುವ
ಆಕೆಯ ಆ ಎರಡು
ಕಣ್ಣು ರೆಪ್ಪೆಗಳು ಎಷ್ಟು ಚೆಂದ!-
ಅಸೂಯೆ ಪಡುವ ಜನರು,
ನಿಮ್ಮ ಬಳಿ ಇರುವುದನ್ನು
ತಮಗೂ ಬೇಕೆಂದು ಬಯಸುವುದಿಲ್ಲ.
(ಅವರಿಗೆ ಅದು ದಕ್ಕುವುದು ಇಲ್ಲ,
ಅದು ಬೇರೆ ಪ್ರಶ್ನೆ ಬಿಡಿ).
ಅವರ ಬಯಕೆಯೆಂದರೆ,
ನೀವು ಅದನ್ನು ಹೊಂದಿರಬಾರದು, ಅಷ್ಟೇ!
#ಹೊಟ್ಟೆಕಿಚ್ಚು_ಜನ-
ಬದುಕಿಗೆ ಅಕ್ಷರ ಕಲಿಸಿ..
ಅಕ್ಷರದಿಂದ
ಬದುಕೋದನ್ನ ಕಲಿಸಿದ,
ಗುರುವೃಂದಕ್ಕೆ
ವಂದನೆ, ಗುರುವಂದನೆ!
🙏-
ವ್ಯತ್ಯಾಸ ಇಷ್ಟೇ…
ಅವಳಿಗೆ ಹವಳ
ಮುತ್ತಿನ ಚಿಂತೆ..
ಅವನಿಗೊ, ಅವಳ
ಮುತ್ತಿನದ್ದೆ ಚಿಂತೆ!
-